AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Six Side Effects Of Soda: ಸೋಡಾ ಹೆಚ್ಚು ಕುಡಿಯುತ್ತಿದ್ದೀರಾ, ಅದರಿಂದಾಗುವ ಆರು ಹಾನಿಗಳ ಬಗ್ಗೆ ತಿಳಿಯಿರಿ

ಸೋಡಾದಲ್ಲಿರುವ ಆಮ್ಲವು ಹಲ್ಲಿನ ದಂತ ಕವಚವನ್ನು ಸವೆಯುವಂತೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ ಸೋಡಾ ಉತ್ಪನ್ನಗಳಿಗೆ 48 ಗಂಟೆಗಳ ಕಾಲ ಒಡ್ಡಿಕೊಂಡ ಹಲ್ಲುಗಳು ಶೇ. 5 ರಷ್ಟು ತೂಕ ಕಳೆದುಕೊಳ್ಳುತ್ತದೆಯಂತೆ. ಕೆಲವು ಸಂಶೋಧಕರು ಸೋಡಾವನ್ನು ಬ್ಯಾಟರಿ ಆಮ್ಲಕ್ಕೆ ಹೋಲಿಸಿದ್ದಾರೆ. ಹಾಗಾಗಿ ಅದರ ಬಗ್ಗೆ ಎಚ್ಚರವಿರಲಿ!

Six Side Effects Of Soda: ಸೋಡಾ ಹೆಚ್ಚು ಕುಡಿಯುತ್ತಿದ್ದೀರಾ, ಅದರಿಂದಾಗುವ ಆರು ಹಾನಿಗಳ ಬಗ್ಗೆ ತಿಳಿಯಿರಿ
ಸೋಡಾ ಹೆಚ್ಚು ಕುಡಿಯುತ್ತಿದ್ದೀರಾ, ಅದರ ಆರು ಹಾನಿಗಳ ಬಗ್ಗೆ ತಿಳಿಯಿರಿ
Follow us
ಸಾಧು ಶ್ರೀನಾಥ್​
|

Updated on: Oct 26, 2023 | 6:06 AM

ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿ ಕ್ಷಿಪ್ರವಾಗಿ ಬದಲಾಗುತ್ತಿದೆ. ಜನರು ತಮ್ಮ ಆಹಾರದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯ ಭಾಗವಾಗಿರುವ ಆಹಾರಗಳಲ್ಲಿ ಸೋಡಾ ಕೂಡ ಒಂದು (drinking soda). ಆದರೆ ಹೆಚ್ಚು ಸೋಡಾ ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಸೆಂಟರ್​​ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಸೋಡಾದಲ್ಲಿ ಅಡಕವಾಗಿರುವ ಅಧಿಕ ಸಕ್ಕರೆ ಅಂಶವು ಮಾನವನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿರುವ ಸಕ್ಕರೆ ಪ್ರಮಾಣ ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೆಚ್ಚು ಸೋಡಾ ಕುಡಿಯುವುದರಿಂದ (nutritional value) ತೂಕ ಹೆಚ್ಚಾಗುವುದು, ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ (Health).

ಸೋಡಾ ಕುಡಿಯುವುದನ್ನು ನಿಲ್ಲಿಸಲು ಈ 6 ಕಾರಣಗಳು ಸಾಕು

ನೀವು ಸೋಡಾ ಅಥವಾ ಕೋಕ್ ಅನ್ನು ಕುಡಿಯುವುದನ್ನು ನಿಲ್ಲಿಸಲು ಹತ್ತಾರು ಕಾರಣಗಳಿವೆ ಎಂದು ಅಧ್ಯಯನಗಳು ಹೇಳುತ್ತವೆ.

ಸೋಡಾದಲ್ಲಿ ಖಾಲಿ ಕ್ಯಾಲೋರಿಗಳು ಇರುತ್ತವೆ. ಅಂದರೆ ಅದರಿಂದ ದೇಹಾರೋಗ್ಯಕ್ಕೆ ಒಳಿತಾಗುವ ಕ್ಯಾಲೋರಿ (calories) ಇರುವುದಿಲ್ಲ. ಬದಲಿಗೆ ಅದು ದೇಹದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಆಸಿಡ್ ರಿಫ್ಲಕ್ಸ್ ಅನ್ನು ಉಂಟುಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್ಗೆ ದಾರಿ ಮಾಡಿಕೊಡುತ್ತದೆ. ಸೋಡಾ ಕುಡಿಯುವುದನ್ನು ನಿಲ್ಲಿಸಲು ನಾವು ಸೂಚಿಸುವ 6 ಕಾರಣಗಳು ಇಲ್ಲಿವೆ:

ನಿಮ್ಮ ಸೊಂಟದ ಪಟ್ಟಿ ವಿಸ್ಯತರಿಸುತ್ತಲೇ ಇರುತ್ತದೆ (Waistline Enlarges) ಸೋಡಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿಲ್ಲದಿರುವುದರಿಂದ, ನೀವು ಸೇವಿಸುವ ಕ್ಯಾಲೊರಿಗಳು – ಪ್ರತಿ ಕ್ಯಾನ್‌ಗೆ ಸುಮಾರು 140 ಕ್ಯಾಲೋರಿಗಳು – ಎಲ್ಲಾ ಖಾಲಿ ಕ್ಯಾಲೋರಿಗಳೆ, ಇದು ತೂಕ ಹೆಚ್ಚಾಗಲು ಕೊಡುಗೆ ನೀಡುತ್ತದೆ. ಆದರೆ ಇದಕ್ಕೆ ಡಯೆಟ್ ಸೋಡಾ ಉತ್ತರ ಅಲ್ಲವಾ ಎಂದು ಯೋಚಿಸಬೇಡಿ. ಕಡಿಮೆ ಕ್ಯಾಲೋರಿ ಅಥವಾ ಶೂನ್ಯ ಕ್ಯಾಲೋರಿ ಸೋಡಾ ಬಳಕೆಗೆ ಮುಂದಾಗುವುದು ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. ಹಾಗಾಗಿ ನಿಮ್ಮ ಸೊಂಟದ ಪಟ್ಟಿ ವಿಸ್ಯತರಿಸುತ್ತಲೇ ಇರುತ್ತದೆ.

ಹೊಟ್ಟೆ (stomach) ಆ ಎಲ್ಲಾ ಆಮ್ಲವು ನಿಮ್ಮ ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಸೋಡಾದ ಆಮ್ಲವು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು ಮತ್ತು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು.

ಹಲ್ಲುಗಳು (tooth enamel and decay) ಸೋಡಾದಲ್ಲಿರುವ ಆಮ್ಲವು ಹಲ್ಲಿನ ದಂತ ಕವಚವನ್ನು ಸವೆಯುವಂತೆ ಮಾಡುತ್ತದೆ ಮತ್ತು ಹಲ್ಲು ಕೊಳೆಯುವಿಕೆಯನ್ನು ಉತ್ತೇಜಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಜನಪ್ರಿಯ ಸೋಡಾ ಉತ್ಪನ್ನಗಳಿಗೆ 48 ಗಂಟೆಗಳ ಕಾಲ ಒಡ್ಡಿಕೊಂಡ ಹಲ್ಲುಗಳು ತನ್ನ ತೂಕದಲ್ಲಿ 5 % ರಷ್ಟು ಪ್ರಮಾಣವನ್ನು ಕಳೆದುಕೊಳ್ಳುತ್ತದೆಯಂತೆ. ಕೆಲವು ಸಂಶೋಧಕರು ಸೋಡಾವನ್ನು ಬ್ಯಾಟರಿ ಆಮ್ಲಕ್ಕೆ ಹೋಲಿಸಿದ್ದಾರೆ. ಹಾಗಾಗಿ ಅದರ ಬಗ್ಗೆ ಎಚ್ಚರವಿರಲಿ!

ಸಕ್ಕರೆ ಸೇವನೆ ಸರಾಸರಿ ಒಂದು ಕ್ಯಾನ್ ಸೋಡಾವು 40 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ – ಇದು 10 ಟೀ ಚಮಚದಷ್ಟು ಸಕ್ಕರೆಗೆ ಸಮನಾಗಿರುತ್ತದೆ. ಮತ್ತು ಹೆಚ್ಚಿನ ಸೋಡಾದಲ್ಲಿನ ಸಕ್ಕರೆಯು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್‌ನಿಂದ ಬರುತ್ತದೆ. ಇದು ಸಾಮಾನ್ಯ ಸಕ್ಕರೆಗಿಂತ ಚಯಾಪಚಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ನೀವು ರಾತ್ರಿ ವೇಳೆ ಸಾಕ್ಸ್ ಧರಿಸಿ ಮಲಗುತ್ತೀರಾ? ಅಂದರೆ ನೀವು ಈ ಸಮಸ್ಯೆಗಳಿಗೆ ಹತ್ತಿರದಲ್ಲಿದ್ದೀರಿ!

ಡಯಟ್ ಸೋಡಾದಲ್ಲಿ ಬಳಸಲಾಗುವ ಕೃತಕ ಸಿಹಿಕಾರಕಗಳು ಸಹ ಚಯಾಪಚಯ ಮತ್ತು ಹಸಿವಿನ ಮೇಲೆ ಅದೇ ರೀತಿಯ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ನಿರ್ಜಲೀಕರಣ (dehydration) ಸೋಡಾದ ಕ್ಯಾನ್ ನಿಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ ಎಂಬುದು ತೋರಿಕೆಗೆ ಅಷ್ಟೆ. ಹೆಚ್ಚು ಜನಪ್ರಿಯ ಪಾನೀಯಗಳಲ್ಲಿ ಒಳಗೊಂಡಿರುವ ಕೆಫೀನ್ ಮೂತ್ರವರ್ಧಕವಾಗಿದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸೋಡಾದಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ಸಕ್ಕರೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅದರ ಮೇಲೆ, ಸೋಡಾ ಕುಡಿಯುವುದು ನಿಯಮಿತ ಅಭ್ಯಾಸವಾದಾಗ, ಅನೇಕ ಜನರು ಅಮೂಲ್ಯ ನೀರಿನ ಸೇವನೆಯನ್ನು ಬಿಟ್ಟುಬಿಟ್ಟು, ಸೋಡಾ ಸೇವನೆಗೆ ಬದಲಾಗುತ್ತಾರೆ.

ಇದನ್ನೂ ಓದಿ: ಹೆಚ್ಚು ಸೋಡಾ ಕುಡಿಯುತ್ತಿದ್ದೀರಾ, ಅದರಿಂದ ಹಾನಿಯೇ ಹೆಚ್ಚು ತಿಳಿಯಿರಿ -ಹಾಗಾದರೆ ಪರ್ಯಾಯವೇನು?

ಮೂಳೆಗಳು (Bones and osteoporosis) ಸೋಡಾದಲ್ಲಿರುವ ಫಾಸ್ಪರಿಕ್ ಆಮ್ಲವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನಿಮ್ಮ ದೇಹಕ್ಕೆ ಹೆಚ್ಚು ಕಷ್ಟಕರವಾಗಿಸುತ್ತದೆ. ಇದು ಆಸ್ಟಿಯೊಪೊರೋಸಿಸ್ಗೆ ಕಾರಣವಾಗಬಹುದು. ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕ್ಷೀಣಿಸಿದಾಗ ಸೋಡಾ ಸೇವನೆಯಿಂದ ಈಗಾಗಲೇ ದುರ್ಬಲಗೊಂಡ ಹಲ್ಲುಗಳಲ್ಲಿ, ಅಪಾಯಕಾರಿ ಕುಳಿಗಳು ಗುಣಿಗಳಾಗಿ ತೆರೆದುಕೊಳ್ಳಬಹುದು.

ಆರೋಗ್ಯ ಸಂಬಂಧಿ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ