Sleeping with Socks: ನೀವು ರಾತ್ರಿ ವೇಳೆ ಸಾಕ್ಸ್ ಧರಿಸಿ ಮಲಗುತ್ತೀರಾ? ಅಂದರೆ ನೀವು ಈ ಸಮಸ್ಯೆಗಳಿಗೆ ಹತ್ತಿರದಲ್ಲಿದ್ದೀರಿ!
ಮಲಗುವಾಗ ಸಾಕ್ಸ್ ಧರಿಸುವುದರಿಂದ ರಕ್ತ ಪರಿಚಲನೆ ಹೆಚ್ಚುಕಮ್ಮಿ ಆಗುತ್ತದೆ. ಸಾಕ್ಸ್ ಅನ್ನು ದೀರ್ಘಕಾಲದವರೆಗೆ ಧರಿಸಿದರೆ, ಪಾದಗಳು ಬಿಗಿಯಾಗಿ, ರಕ್ತದ ಹರಿವು ಕಡಿಮೆಯಾಗುತ್ತದೆ. ಆಗ ರಕ್ತದೊತ್ತಡ ಹೆಚ್ಚಾಗುತ್ತದೆ. ಗಮನಿಸಿ, ವೈದ್ಯರು ಸಾಕ್ಸ್ ಧರಿಸಲು ಸಲಹೆ ನೀಡದ ಹೊರತು, ನೀವು ಮಲಗುವಾಗ ಸಾಕ್ಸ್ ಧರಿಸಬಾರದು. ಪ್ರತಿನಿತ್ಯ ಸಾಕ್ಸ್ ಧರಿಸಲು ಯೋಚಿಸುವವರ ದೇಹದ ಉಷ್ಣತೆಯೂ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ
ಮಂದ ಬೆಳಕು, ನಿಧಾನ ಸಂಗೀತ.. ಪ್ರಶಾಂತ ವಾತಾವರಣ. ಬಹಳಷ್ಟು ಮಂದಿ ಉತ್ತಮ ನಿದ್ರೆಗಾಗಿ (sleeping) ಈ ರೀತಿಯ ವಾತಾವರಣವನ್ನು ಬಯಸುತ್ತಾರೆ. ಇನ್ನು ಕೆಲವರು ರಾತ್ರಿ ಮಲಗುವ ಮುನ್ನವೇ ತುಂಬಾ ಅಚ್ಚುಕಟ್ಟಾಗಿ ತಯಾರಾಗುತ್ತಾರೆ.. ಕೆಲವರು ರಾತ್ರಿ ಸಾಕ್ಸ್ ಧರಿಸಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ನಂಬುತ್ತಾರೆ. ಆದಾಗ್ಯೂ, ಹೀಗೆ ಸಾಕ್ಸ್ ಹಾಕಿಕೊಂಡು ಮಲಗುವುದರಲ್ಲಿ ಸ್ವಲ್ಪ ಸಂತೋಷವಿದೆ. ಆದರೆ ಇದು ಸರಿಯಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ‘ಶೀತ ವಾತಾವರಣದಲ್ಲಿ ಬಳಸುವ ಬೆಡ್ ಸಾಕ್ಸ್‌ಗಳು (Socks) ನಿದ್ರೆಯ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರಬಹುದು… ಜೊತೆ ಜೊತೆಗೆ ಕೆಲವು ನಕಾರಾತ್ಮಕ ಪರಿಣಾಮಗಳನ್ನೂ ಬೀರಬಹುದು ಎಚ್ಚರಾ! (Health)
ಸಾಕ್ಸ್ ಧರಿಸುವುದರಿಂದ ನೀವು ಹೆಚ್ಚು ಸಮಯ ನಿದ್ರಿಸಬಹುದು ಮತ್ತು ರಾತ್ರಿಯಲ್ಲಿ ಕಡಿಮೆ ಎಚ್ಚರಗೊಳ್ಳಬಹುದು ಎಂದು ಸಂಶೋಧನೆ ತೋರಿಸಿದೆ. ರಾತ್ರಿ ಸಾಕ್ಸ್ ಧರಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಆದರೆ ಮತ್ತೊಂದೆಡೆ, ಯಾರಾದರೂ ಬಿಗಿಯಾದ ಸಾಕ್ಸ್ ಧರಿಸಿದರೆ, ಕೆಲವು ದೈಹಿಕ ಸಮಸ್ಯೆಗಳು ಸಹ ಉಂಟಾಗಬಹುದು.
ರಕ್ತದೊತ್ತಡ ಅಧಿಕವಾಗುವುದು: ಮಲಗುವಾಗ ಸಾಕ್ಸ್ ಧರಿಸುವುದರಿಂದ ರಕ್ತ ಪರಿಚಲನೆ ಹೆಚ್ಚುಕಮ್ಮಿ ಆಗುತ್ತದೆ. ಸಾಕ್ಸ್ ಅನ್ನು ದೀರ್ಘಕಾಲದವರೆಗೆ ಧರಿಸಿದರೆ, ಪಾದಗಳು ಬಿಗಿಯಾಗಿ, ರಕ್ತದ ಹರಿವು ಕಡಿಮೆಯಾಗುತ್ತದೆ.
ಗಮನಿಸಿ, ವೈದ್ಯರು ಸಾಕ್ಸ್ ಧರಿಸಲು ಸಲಹೆ ನೀಡದ ಹೊರತು, ನೀವು ಮಲಗುವಾಗ ಸಾಕ್ಸ್ ಧರಿಸಬಾರದು. ನಿಜವಾಗಿಯೂ ಬಿಗಿಯಾದ ಸಾಕ್ಸ್ ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪ್ರತಿನಿತ್ಯ ಸಾಕ್ಸ್ ಧರಿಸಲು ಯೋಚಿಸುವವರ ದೇಹದ ಉಷ್ಣತೆಯೂ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ನಿಮ್ಮ ಸಾಕ್ಸ್ ಬಿಗಿಯಾದಾಗ, ಗಾಳಿಯು ಅವುಗಳ ಮೂಲಕ ಹೋಗದಿದ್ದರೆ, ವ್ಯಕ್ತಿಯ ಪಾದಗಳು ತುಂಬಾ ಬಿಸಿಯಾಗಿರುತ್ತದೆ ಮತ್ತು ಬೆವರುತ್ತದೆ. ಇದು ಫಂಗಲ್ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಫಂಗಲ್ ಉಗುರು ಸೋಂಕು.. ರಾಷ್ಟ್ರೀಯ ಆರೋಗ್ಯ ಸೇವೆಗಳ ಪ್ರಕಾರ, ಶಿಲೀಂಧ್ರ ಉಗುರು ಸೋಂಕು ಸಾಮಾನ್ಯವಾಗಿ ಉಗುರಿನ ಅಂಚಿನಲ್ಲಿ ಪ್ರಾರಂಭವಾಗುತ್ತವೆ ಮತ್ತು ನಂತರ ಅದು ಹರಡುತ್ತದೆ. ಶಿಲೀಂಧ್ರದ ಉಗುರಿನ ಸೋಂಕು ಉಗುರನ್ನು ಬಣ್ಣಬಣ್ಣವಾಗಿಸಿ, ದಪ್ಪವಾಗಿಸಿಬಿಡುತ್ತದೆ. ಶಿಲೀಂಧ್ರದ ಉಗುರು ಸೋಂಕು ಸುತ್ತಮುತ್ತಲಿನ ಚರ್ಮದಲ್ಲಿ ನೋವು, ಊತ, ಯಾತನೆಯವನ್ನು ಉಂಟುಮಾಡಬಹುದು. ನಿಮಗೂ ಈ ಸಮಸ್ಯೆ ಇದ್ದರೆ ಮತ್ತು ನೀವು ಸಾಕ್ಸ್ ಧರಿಸಿ ಮಲಗುತ್ತಿದ್ದರೆ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿ.
ಮಹಿಳೆಯರಿಗಿಂತ ಪುರುಷರಲ್ಲಿ ಉಗುರು ಸೋಂಕು ಹೆಚ್ಚಾಗಿ ಕಂಡುಬರುತ್ತವೆ. ಈ ಸೋಂಕು ಮಕ್ಕಳಿಗಿಂತ ವಯಸ್ಕರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ನಿಮ್ಮ ಕುಟುಂಬದ ಸದಸ್ಯರು ಈ ರೀತಿಯ ಶಿಲೀಂಧ್ರಗಳ ಸೋಂಕಿಗೆ ಒಳಗಾಗಿದ್ದರೆ, ನಿಮಗೂ ಸಹ ಅದು ಹರಸಡುವ ಸಾಧ್ಯತೆಗಳಿವೆ. ವಯಸ್ಸಾದ ಜನರು ಕಡಿಮೆ ರಕ್ತ ಪರಿಚಲನೆ ಹೊಂದಿರುವ ಕಾರಣ ಶಿಲೀಂಧ್ರ ಉಗುರು ಸೋಂಕಿಗೆ ಒಳಗಾಗುವ ಸಾಧ್ಯತೆಯಿರುತ್ತದೆ.
ಆರೋಗ್ಯ ಸಂಬಂಧಿ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ