AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onam 2023: ಓಣಂ ಹಬ್ಬಕ್ಕೆ ಆರೋಗ್ಯಕರ ತಿಂಡಿ ಅವಿಯಲ್ ಮಾಡುವ ವಿಧಾನ ಹೇಗೆ? ಇಲ್ಲಿದೆ ಪಾಕವಿಧಾನ

ಹಬ್ಬಕ್ಕೆ ಏನು ಮಾಡಬಹುದು ಅಂದರೆ ಚಟ್ ಪಟ್ ಅಂತ ಅವಿಯಲ್ ಮಾಡಬಹುದು. ಇದು ಸುಲಭವೂ ಹೌದು, ರುಚಿಕರವೂ ಕೂಡ. ಇನ್ನು ಹಬ್ಬದ ದಿನ ಆರೋಗ್ಯ ಕೆಡುತ್ತದೆ ಎಂಬ ಭಯವೂ ಇರುವುದಿಲ್ಲ. ಹಾಗಾಗಿ ಎಲ್ಲ ತರಕಾರಿಗಳನ್ನು ಬಳಸಿ ಈ ಅವಿಯಲ್ ಮಾಡುವ ಸುಲಭ ವಿಧಾನ ಇಲ್ಲಿದೆ.

Onam 2023: ಓಣಂ ಹಬ್ಬಕ್ಕೆ ಆರೋಗ್ಯಕರ ತಿಂಡಿ ಅವಿಯಲ್ ಮಾಡುವ ವಿಧಾನ ಹೇಗೆ? ಇಲ್ಲಿದೆ ಪಾಕವಿಧಾನ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 29, 2023 | 1:19 PM

Share

ಅವಿಯಲ್ ಎಂಬ ಹೆಸರು ನಿಮಗೆ ವಿಚಿತ್ರ ಎನಿಸಬಹುದು ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಬ್ಬಕ್ಕೆ ಏನು ಮಾಡಬಹುದು ಅಂದರೆ ಚಟ್ ಪಟ್ ಅಂತ ಅವಿಯಲ್ ಮಾಡಬಹುದು. ಇದು ಸುಲಭವೂ ಹೌದು, ರುಚಿಕರವೂ ಕೂಡ. ಇನ್ನು ಹಬ್ಬದ ದಿನ ಆರೋಗ್ಯ ಕೆಡುತ್ತದೆ ಎಂಬ ಭಯವೂ ಇರುವುದಿಲ್ಲ. ಹಾಗಾಗಿ ಎಲ್ಲ ತರಕಾರಿಗಳನ್ನು ಬಳಸಿ ಈ ಅವಿಯಲ್ ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಹಿರೇಕಾಯಿ

ಕ್ಯಾರೆಟ್

ನುಗ್ಗೆಕಾಯಿ

ಕಾಯಿ ಇರುವ ಬಾಳೆಹಣ್ಣು

ಬೀನ್ಸ್

ಸುವರ್ಣಗಡ್ಡೆ (ಈ ಎಲ್ಲ ತರಕಾರಿಗಳನ್ನು ನಿಮಗೆ ಬೇಕಾದ ಹಾಗೆ ಹೆಚ್ಚಿಟ್ಟುಕೊಳ್ಳಿ)

ಮಸಾಲೆಗೆ ಬೇಕಾಗುವ ಸಾಮಗ್ರಿಗಳು:

ತುರಿದ ತೆಂಗಿನಕಾಯಿ – ಅರ್ಧ ಕಪ್

ಹಸಿಮೆಣಸು – 1

ಜೀರಿಗೆ – 1 ಚಮಚ

ಕರಿಬೇವು – 2 ರಿಂದ 3

ಒಣ ಮೆಣಸು – 1

ಅರಿಶಿನ – 1 ಚಮಚ

ಕೊಬ್ಬರಿ ಎಣ್ಣೆ – 1 ಅಥವಾ 2 ಚಮಚ

ಸಾಸಿವೆ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಹುಣಸೆ ಹಣ್ಣು ಅಥವಾ ಮೊಸರು – ಸ್ವಲ್ಪ

ಇದನ್ನೂ ಓದಿ: ದೇವರ ನಾಡಿಗೆ ಓಣಂ ಹಬ್ಬ ತುಂಬಾ ವಿಶೇಷ, ಈ ಆಚರಣೆಯ ಇತಿಹಾಸ, ಮಹತ್ವ ಇಲ್ಲಿದೆ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಂಡ ತರಕಾರಿಗಳನ್ನು ಕುಕ್ಕರನಲ್ಲಿ ಬೇಯಿಸುವುದಕ್ಕಿಂತ ಹಾಗೆಯೇ ಬೇಯಿಸಿಕೊಳ್ಳುವುದು ಒಳ್ಳೆಯದು. ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ. ನಂತರ ಸ್ವಲ್ಪ ಅರಿಶಿನ ಮತ್ತು ಉಪ್ಪನ್ನು ಸೇರಿಸಿ 15 ನಿಮಿಷ ತರಕಾರಿ ಕರಗಿ ಹೋಗದಂತೆ ಬೇಯಿಸಿಕೊಳ್ಳಿ. ಮಸಾಲೆಗೆ ತುರಿದ ತೆಂಗಿನಕಾಯಿ, ಜೀರಿಗೆ ಒಂದು ಮೆಣಸನ್ನು ಸೇರಿಸಿ ನೀರು ಹಾಕದೆ ರುಬ್ಬಿಕೊಳ್ಳಿ. ಬಳಿಕ ಬೆಂದಿರುವ ತರಕಾರಿಗೆ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅವಿಯಲ್, ನಿಮಗೆ ಗ್ರೇವಿ ಬೇಕಾದರೆ ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಬಹುದು. ಇದು ಚೆನ್ನಾಗಿ ಹೋಳುಗಳ ಜೊತೆ ಮಿಶ್ರವಾಗಬೇಕು ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ. ನೀವು ಮೊಸರು ಬಳಸುವುದಿಲ್ಲ ಎಂದಾದಲ್ಲಿ ಈ ಸ್ಟೇಜ್ ನಲ್ಲಿಯೇ ಹುಣಸೆ ರಸ ಸೇರಿಸಿ ಮತ್ತೆ ಬೇಯಿಸಿಕೊಳ್ಳಿ. ಹೋಳುಗಳು ಮಸಾಲೆ ಜೊತೆ ಚೆನ್ನಾಗಿ ಬೆಂದಿರುತ್ತದೆ. ಅದ್ಕಕೆ ಕೊನೆಯ ಹಂತವಾದ ಒಗ್ಗರಣೆ ಸೇರಿಸಿ ಬಳಿಕ ಮೊಸರು ಸೇರಿಸಿ. ಗ್ರೇವಿ ಬೇಕಾದಲ್ಲಿ ಹೆಚ್ಚು ಮೊಸರನ್ನು ಸೇರಿಸಿಕೊಳ್ಳಬಹುದು. ಇದನ್ನು ಊಟದ ಜೊತೆಯಲ್ಲಿ ಅಥವಾ ಪಲ್ಯದ ಹಾಗೆ ಬಳಸಿಕೊಳ್ಳಬಹುದು. ಮನೆಯಲ್ಲಿ ನೀವು ಪ್ರಯತ್ನಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: