AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಾಗುವ ಮೊದಲೇ ಮರೆವಿನ ಕಾಯಿಲೆ ಬಾರದಿರಲು 7 ಸೂಪರ್ ಫುಡ್​ಗಳು ಇಲ್ಲಿವೆ

ಮೆದುಳಿನ ಆರೋಗ್ಯದ ಕ್ಷೀಣತೆ, ನೆನಪಿನ ಶಕ್ತಿ, ಆಲ್ಝೈಮರ್ ಅಥವಾ ಬುದ್ಧಿಮಾಂದ್ಯತೆಯು ವಯಸ್ಸಾದ ಜನರು ಎದುರಿಸುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಆದರೆ, ಆಹಾರದ ಆಯ್ಕೆಗಳನ್ನು ಬದಲಿಸುವ ಮೂಲಕ ಈ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿವಾರಿಸಬಹುದು.

ವಯಸ್ಸಾಗುವ ಮೊದಲೇ ಮರೆವಿನ ಕಾಯಿಲೆ ಬಾರದಿರಲು 7 ಸೂಪರ್ ಫುಡ್​ಗಳು ಇಲ್ಲಿವೆ
ಮೆದುಳಿನ ಆರೋಗ್ಯ ಹೆಚ್ಚಿಸುವ ಆಹಾರಗಳುImage Credit source: iStock
ಸುಷ್ಮಾ ಚಕ್ರೆ
|

Updated on: Oct 26, 2023 | 10:39 AM

Share

ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿಯೂ ಕಡಿಮೆಯಾಗುತ್ತದೆ. ಆದರೆ, ಕೆಲವರಿಗೆ ವಯಸ್ಸಾಗುವ ಮೊದಲೇ ಜ್ಞಾಪಕಶಕ್ತಿ ಕ್ಷೀಣಿಸಲಾರಂಭಿಸುತ್ತದೆ. ವೃದ್ಧಾಪ್ಯದಲ್ಲಿ ಬರುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗುವುದಿಲ್ಲ. ಆದರೆ, ಮಧ್ಯವಯಸ್ಸಿನಲ್ಲಿ ಬರುವ ಕೆಲವು ಆರೋಗ್ಯ ಸಮಸ್ಯೆಗಳನ್ನು ನಮ್ಮ ಜೀವನಶೈಲಿ, ಆಹಾರ ಪದ್ಧತಿಯ ಮೂಲಕ ನಿಯಂತ್ರಿಸಬಹುದಾಗಿದೆ. ಮೆದುಳಿನ ಆರೋಗ್ಯದ ಕ್ಷೀಣತೆ, ನೆನಪಿನ ಶಕ್ತಿ, ಆಲ್ಝೈಮರ್ ಅಥವಾ ಬುದ್ಧಿಮಾಂದ್ಯತೆಯು ವಯಸ್ಸಾದ ಜನರು ಎದುರಿಸುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಆದರೆ, ಆಹಾರದ ಆಯ್ಕೆಗಳನ್ನು ಬದಲಿಸುವ ಮೂಲಕ ಈ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿವಾರಿಸಬಹುದು. ಅದರಲ್ಲೂ 50 ವರ್ಷವಾಗುತ್ತಿದ್ದಂತೆ ನಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು.

ನೆನಪಿನ ಶಕ್ತಿಯ ಸಮಸ್ಯೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ 7 ಸೂಪರ್‌ಫುಡ್‌ಗಳು ಇಲ್ಲಿವೆ.

ಒಮೆಗಾ-3-ಫ್ಯಾಟಿ ಆಸಿಡ್‌ಗಳು:

ಕೊಬ್ಬಿನ ಮೀನು ಸಾಲ್ಮನ್, ಟ್ರೌಟ್, ಮ್ಯಾಕೆರೆಲ್, ಹೆರಿಂಗ್ ಮತ್ತು ಸಾರ್ಡೀನ್‌ಗಳು ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳಾಗಿವೆ.

ಬೆರಿ ಹಣ್ಣುಗಳು:

ಬೆರಿಹಣ್ಣುಗಳು, ಸ್ಟ್ರಾಬೆರಿಗಳು, ರಾಸ್​ಬೆರೀಸ್ ಮತ್ತು ಬ್ಲ್ಯಾಕ್​ಬೆರಿಗಳಲ್ಲಿ ಆ್ಯಂಟಿಆಕ್ಸಿಡೆಂಟ್​ಗಳು ಸಮೃದ್ಧವಾಗಿವೆ. ಇದು ಮೆದುಳಿಗೆ ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನೆನಪಿನ ಶಕ್ತಿ, ಮೆದುಳಿನ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಿದ 5 ಜ್ಯೂಸ್​ಗಳು ಇಲ್ಲಿವೆ

ಹಸಿರು ತರಕಾರಿಗಳು:

ಪಾಲಕ್, ಎಲೆಕೋಸು ಮತ್ತು ಕೊಲಾರ್ಡ್ ಗ್ರೀನ್ಸ್ ವಿಟಮಿನ್ ಕೆ, ಫೋಲೇಟ್ ಮತ್ತು ಲುಟೀನ್ ನಂತಹ ಮೆದುಳಿನ ಆರೋಗ್ಯಕ್ಕೆ ಪ್ರಮುಖವಾದ ವಿಟಮಿನ್​ಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ.

ನಟ್ಸ್​:

ಬಾದಾಮಿ, ವಾಲ್‌ನಟ್ಸ್ ಮತ್ತು ಚಿಯಾ ಸೀಡ್ಸ್​ಗಳಲ್ಲಿ ವಿಟಮಿನ್ ಇ ಹೆಚ್ಚಾಗಿರುತ್ತವೆ. ಇದು ಉತ್ಕರ್ಷಣ ನಿರೋಧಕವಾಗಿದ್ದು, ಮೆದುಳಿಗೆ ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತವೆ.

ಧಾನ್ಯಗಳು:

ಬ್ರೌನ್ ರೈಸ್, ಕ್ವಿನೋವಾ ಮತ್ತು ಓಟ್ಸ್ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲಗಳಾಗಿವೆ. ಇದು ಮೆದುಳಿಗೆ ಉತ್ತಮ ಶಕ್ತಿಯ ಪೂರೈಕೆಯನ್ನು ಒದಗಿಸುತ್ತದೆ.

ಬ್ರೊಕೊಲಿ:

ಬ್ರೊಕೊಲಿ ಕ್ರೂಸಿಫೆರಸ್ ತರಕಾರಿಯಾಗಿದ್ದು, ಇದು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದರಲ್ಲಿ ವಿಟಮಿನ್ ಕೆ, ಖನಿಜಗಳು ಮತ್ತು ಇತರ ಜೀವಸತ್ವಗಳು ಅಧಿಕವಾಗಿದೆ.

ಕುಂಬಳಕಾಯಿ ಬೀಜ:

ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕಗಳ ಪ್ರಬಲ ಮೂಲವಾಗಿದೆ. ಇದರಲ್ಲಿ ತಾಮ್ರ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಪ್ರಮುಖ ಅಂಶಗಳಿವೆ. ಈ ಪ್ರತಿಯೊಂದು ಖನಿಜಗಳು ಆಲ್ಝೈಮರ್​ ಕಾಯಿಲೆ, ಖಿನ್ನತೆ ಸೇರಿದಂತೆ ಮೆದುಳಿನ ಅಸ್ವಸ್ಥತೆಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Skin Care: ಮುಖದ ಕಾಂತಿ ಹೆಚ್ಚಾಗಲು ದಿನಕ್ಕೊಂದು ಕ್ಯಾರೆಟ್ ತಿನ್ನಿ

ಈ ಆಹಾರಗಳನ್ನು ತಿನ್ನುವುದರ ಜೊತೆಗೆ, ಸಂಸ್ಕರಿಸಿದ ಆಹಾರಗಳು, ಸಕ್ಕರೆ ಪಾನೀಯಗಳು, ಅತಿಯಾದ ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸದಿರುವುದು ಕೂಡ ಮುಖ್ಯವಾಗಿದೆ. ಈ ವಸ್ತುಗಳು ದೇಹವನ್ನು ನಿರ್ಜಲೀಕರಣಗೊಳಿಸಬಹುದು ಮತ್ತು ನೆನಪಿನ ಶಕ್ತಿ ಕಡಿಮೆ ಮಾಡಬಹುದು.

ಆಲ್ಝೈಮರ್ ಕಾಯಿಲೆಯ ಲಕ್ಷಣಗಳೆಂದರೆ, ಬೇರೆಯವರೊಂದಿಗೆ ಮಾತನಾಡಲು ತೊಂದರೆಯಾಗುವುದು, ಇತ್ತೀಚಿನ ಅನುಭವಗಳು ಅಥವಾ ಸುತ್ತಮುತ್ತಲಿನವರ ಬಗ್ಗೆ ನೆನಪಿಲ್ಲದಿರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಹಲ್ಲಿನ, ಚರ್ಮದ ಮತ್ತು ಕಾಲಿನ ಸಮಸ್ಯೆಗಳು ಹೆಚ್ಚಾಗುವುದು, ನುಂಗಲು ತೊಂದರೆಯಾಗುವುದು, ನರಳುವುದು, ಹೆಚ್ಚು ನಿದ್ರೆ ಮಾಡುವುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್