AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರೇ ಎಚ್ಚರ.. ತರಕಾರಿ ಬೆಳೆಯಲು ತ್ಯಾಜ್ಯ ನೀರು ಬಳಸಲಾಗುತ್ತಿದೆ: ಸಂಶೋಧನೆ

ತರಕಾರಿಗಳನ್ನು ಬೆಳೆಯಲು ತ್ಯಾಜ್ಯ ನೀರುಗಳನ್ನು ಬಳಸಲಾಗುತ್ತಿದೆ ಎಂದು EMPR ಯ ಸಂಶೋಧಕರು ತಿಳಿಸಿದ್ದಾರೆ. ಇಂತಹ ತರಕಾರಿಗಳಲ್ಲಿ ಭಾರೀ ಲೋಹದ ಸಾಂದ್ರತೆಗಳು ಇದೆ ಎಂದು ಹೇಳಲಾಗಿದೆ. ಇದರ ಅಧ್ಯಯನಕ್ಕಾಗಿ 10 ತರಕಾರಿಗಳ 400 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ ನಿಗದಿಪಡಿಸಿದ ಮಿತಿಗಳಿಗಿಂತ ಹೆಚ್ಚಿನ ಮಾಲಿನ್ಯಗಳನ್ನು ಈ ತರಕಾರಿಗಳಲ್ಲಿ ಪತ್ತೆ ಮಾಡಲಾಗಿದೆ.

ಬೆಂಗಳೂರಿಗರೇ ಎಚ್ಚರ.. ತರಕಾರಿ ಬೆಳೆಯಲು ತ್ಯಾಜ್ಯ ನೀರು ಬಳಸಲಾಗುತ್ತಿದೆ: ಸಂಶೋಧನೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 25, 2023 | 2:34 PM

ಬೆಂಗಳೂರು, ಅ.25: ತರಕಾರಿಗಳನ್ನು ಬೆಳೆಯಲು ತ್ಯಾಜ್ಯ ನೀರುಗಳನ್ನು ಬಳಸಲಾಗುತ್ತಿದೆ ಎಂದು EMPRಯ (ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್) ಸಂಶೋಧಕರು ತಿಳಿಸಿದ್ದಾರೆ. ಇಂತಹ ತರಕಾರಿಗಳಲ್ಲಿ ಭಾರೀ ಲೋಹದ ಸಾಂದ್ರತೆಗಳು ಇದೆ ಎಂದು ಹೇಳಲಾಗಿದೆ. ಇದರ ಅಧ್ಯಯನಕ್ಕಾಗಿ 10 ತರಕಾರಿಗಳ 400 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ ನಿಗದಿಪಡಿಸಿದ ಮಿತಿಗಳಿಗಿಂತ ಹೆಚ್ಚಿನ ಮಾಲಿನ್ಯಗಳನ್ನು ಈ ತರಕಾರಿಗಳಲ್ಲಿ ಪತ್ತೆ ಮಾಡಲಾಗಿದೆ. ರಾಜ್ಯದ ಐದನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದ ಹೊರ ಪ್ರದೇಶದ ರೈತರಿಂದ ಈ ತರಕಾರಿಗಳನ್ನು ಪಡೆಯಲಾಗುತ್ತಿದೆ.

ಹಾಪ್‌ಕಾಮ್ಸ್​​ಗಳು ಜನರಿಗೆ 70 ಟನ್ ತರಕಾರಿಗಳನ್ನು ತಲುಪಿಸುತ್ತಿದೆ. ಆದರೆ ಜನರು ತಳ್ಳುಗಾಡಿಗಳು ಹಾಗೂ ಸೂಪರ್‌ ಮಾರ್ಕೆಟ್‌ಗಳು, ಖಾಸಗಿ ಅಂಗಡಿಗಳಿಂದ ಈ ತರಕಾರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎಂದು ಈ ಸಂಶೋಧನೆ ಹೇಳಿದೆ. ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (EMPRI) ಸಂಶೋಧಕರು ಬೆಂಗಳೂರಿನ 20 ಮಳಿಗೆಗಳಿಂದ ತರಕಾರಿಗಳ 400 ಮಾದರಿಯನ್ನು ಸಂಗ್ರಹ ಮಾಡಿದ್ದಾರೆ. ಈ ತರಕಾರಿಗಳನ್ನು ಐದು ಉನ್ನತ ಮಟ್ಟದ ಸೂಪರ್ ಮಾರ್ಕೆಟ್​​, ಐದು ಸ್ಥಳೀಯ ಮಾರುಕಟ್ಟೆಗಳು, ಸಾವಯವ ಮಳಿಗೆಗಳು ಮತ್ತು ಹಾಪ್ಕಾಮ್ಸ್​​ಗಳಿಂದ ಸಂಗ್ರಹ ಮಾಡಲಾಗಿದೆ.

ಬದನೆ, ಟೊಮೆಟೊ, ಕ್ಯಾಪ್ಸಿಕಂ, ಬೀನ್ಸ್, ಕ್ಯಾರೆಟ್, ಹಸಿರು ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಪಾಲಕ ಮತ್ತು ಕೊತ್ತಂಬರಿ ಸೇರಿದಂತೆ 10 ತರಕಾರಿಗಳ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಈ ತರಕಾರಿಗಳಲ್ಲಿ ಭಾರೀ ಲೋಹದ ಅಂಶಗಳನ್ನು ಪತ್ತೆ ಮಾಡಿದ್ದಾರೆ. ಒಂದು ತರಕಾರಿಯಲ್ಲಿ ಲೋಹದ ಅಂಶ ಗರಿಷ್ಠ 425.5 mg/kg ಇರಬೇಕು. ಆದರೆ ಹೆಚ್ಚು ಜನಪ್ರಿಯತೆ ಹೊಂದಿರುವ ಮಾರುಕಟ್ಟೆಗಳಲ್ಲಿ ಸಿಗುವ ಬೀನ್ಸ್​​ನಲ್ಲಿ 810.20 mg/kg, ಕೊತ್ತಂಬರಿ 945.70 mg/kg ಮತ್ತು ಪಾಲಕ 554.58 mg/kg ಸಾಂದ್ರತೆಯನ್ನು ಹೊಂದಿದೆ. ಇನ್ನು ಹಾಪ್‌ಕಾಮ್ಸ್‌ನಲ್ಲಿ ಖರೀದಿಸಲಾದ ಈರುಳ್ಳಿಯಲ್ಲಿ 592.18 ಮಿಗ್ರಾಂ/ಕೆಜಿ ಲೋಹವನ್ನು ಹೊಂದಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಸೂಪರ್​​ ಮಾರ್ಕೆಟ್​​ಗಳಲ್ಲಿ ಮತ್ತು ಸಣ್ಣ ಮಳಿಗೆಗಳಲ್ಲಿ ಖರೀದಿ ಮಾಡಿದ ತರಕಾರಿಗಳಲ್ಲಿ ಲೋಹದ ಅಂಶ ವಿಪರೀತವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. FAO ಪ್ರಕಾರ ಕ್ಯಾಡ್ಮಿಯಂಗಳು 0.2 mg/kg ಹೊಂದಿರಬೇಕು. ಆದರೆ ಬಿಟಿಎಂ ಲೇಔಟ್‌ನಲ್ಲಿರುವ ಸೂಪರ್ ಮಾರ್ಕೆಟ್‌ನಿಂದ ಖರೀದಿಸಿದ ಬದನೆಕಾಯಿಯಲ್ಲಿ 52.30 ಮಿಗ್ರಾಂ/ಕೆಜಿ ಕ್ಯಾಡ್ಮಿಯಂ ಇತ್ತು. ಕೊತ್ತಂಬರಿಯಲ್ಲಿ 53.30/ಕೆಜಿ, ಪಾಲಕ್ 53.50 mg/kg ಮತ್ತು ಕ್ಯಾರೆಟ್ 54.60 mg/kg ಇತ್ತು ಎಂದು ಹೇಳಲಾಗಿದೆ.

ಕ್ಯಾಡ್ಮಿಯಮ್ ಅಪಾಯಕಾರಿ ಅಂಶವಾಗಿದ್ದು ಅದು ಯಕೃತ್ತು ಮತ್ತು ಶ್ವಾಸಕೋಶದಲ್ಲಿ ವಿಷತ್ವವನ್ನು ಉಂಟುಮಾಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ. EMPRI ತಿಳಿಸಿದ ವರದಿಗಳ ಪ್ರಕಾರ ನಾವು ಪಡೆದಿರುವ ಎಲ್ಲ ಮಾದರಿಗಳಲ್ಲಿ ವಿಷದ ಅಂಶಗಳು ಹೆಚ್ಚಾಗಿದೆ. ಆಹಾರ ಮತ್ತು ಕೃಷಿ ಇಲಾಖೆ ತಿಳಿಸಿದ ಮಿತಿಗಳಿಂತ ತರಕಾರಿಗಳಲ್ಲಿ ಹೆಚ್ಚಿನ ಲೋಹ ಅಂಶಗಳು ಇದೆ ಎಂದು ಹೇಳಿದೆ.

ಇದನ್ನೂ ಓದಿ:  ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯುಂಟಾಗಿದ್ದರೆ, ಈ ಜ್ಯೂಸ್​ಗಳನ್ನು ಕುಡಿಯಿರಿ

ಇವುಗಳ ಜನರ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಗಳು ಹೆಚ್ಚು. ಇದರ ಜತೆಗೆ ಈಗಾಗಲೇ ಸೂಪರ್​​ ಮಾರ್ಕೆಟ್​​ಗಳಲ್ಲಿ ಖರೀದಿಸಿದ ಹಸಿರು ಮೆಣಸಿನಕಾಯಿ, ಕ್ಯಾರೆಟ್, ಆಲೂಗಡ್ಡೆ, ಟೊಮೆಟೊ ಮತ್ತು ಬೀನ್ಸ್‌ಗಳಲ್ಲಿ ನಿಕಲ್‌ನ ಸಾಂದ್ರತೆ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ತರಕಾರಿಗಳ ಸೇವೆನೆಯಿಂದ ಜನರ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕೃಷಿಗೆ ತ್ಯಾಜ್ಯ ನೀರನ್ನು ಮೂಲವಾಗಿ ಬಳಸಬಾರದು ಎಂದು ಸೂಚಿಸಲಾಗಿದೆ. ರೈತರು ಒಳಚರಂಡಿ ಮತ್ತು ಹೊರಹರಿವಿನ ನೀರಿಗಳನ್ನು ಬೆಳೆಗಳಿಗೆ ಹಾಕಬಾರದು. ಇಂತಹ ಅನೈತಿಕ ಕೃಷಿ ಪದ್ಧತಿಗಳನ್ನು ಆಶ್ರಯಿಸಬಾರದು ಎಂದು ಸಂಶೋಧಕರು ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ತರಕಾರಿಗಳಿಗಿಂತ ಸೊಪ್ಪುಗಳಲ್ಲಿ ಲೋಹ ಅಂಶಗಳು ಹೆಚ್ಚಿದೆ ಎಂದು ಹೇಳಿದ್ದಾರೆ, ರೈತರು ಸಾಗಣೆ ದರ ಹೆಚ್ಚಾಗಿದೆ ಎಂಬ ಕಾರಣಕ್ಕೆ ಈ ದಾರಿಯಲ್ಲಿ ಸಾಗುತ್ತಿದ್ದಾರೆ. ಇನ್ನು ಒಂದು ವರ್ಷಗಳಿಂದ ಈ ಅಧ್ಯಯನವನ್ನು ನಡೆಸಲಾಗಿದೆ. ಈ ಸಂಶೋಧನೆಯ ನೇತೃತ್ವವನ್ನು ಸಂಶೋಧನಾ ವಿಜ್ಞಾನಿ ಎನ್ ಹೇಮಾ ಅವರು ವಹಿಸಿಕೊಂಡಿದ್ದರು. ಇವರ ಈ ಅಧ್ಯಯನದ ಮೂಲಕ ಮೂರು ಪ್ರಮುಖ ಸಮಸ್ಯೆಗಳನ್ನು ಪತ್ತೆ ಮಾಡಿದ್ದಾರೆ. ಅದಕ್ಕಾಗಿ ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದು ತಿಳಿಸಿದರು. ಈ ಅಧ್ಯಯನದ ಮೊದಲ ಹಂತ ಪುರಾವೆ ಆಧಾರಿತ ವಿಧಾನವನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ತರಕಾರಿಗಳ ಮೂಲವನ್ನು ಕಂಡುಹಿಡಿಯಬೇಕು. ಎರಡನೆಯದ್ದು, ಈ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಿದೆ. ಪ್ರತಿ ತರಕಾರಿಗೆ ಗರಿಷ್ಠ ಮಿತಿಗಳನ್ನು ಮತ್ತು ಮಾನ್ಯತೆ ಅವಧಿಯನ್ನು ತಿಳಿದುಕೊಳ್ಳಬೇಕು. ಮೂರನೆಯದ್ದು, ಮಕ್ಕಳು, ವಯಸ್ಕರು ಮತ್ತು ವಯಸ್ಸಾದವರ ಮೇಲೆ ಇವುಗಳು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಬೇಕು. ಕೊನೆಯದಾಗಿ ಇದು ಜನರ ಆರೋಗ್ಯ ಮೇಲೆ ಹೇಗೆ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:18 pm, Wed, 25 October 23

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?