ಬೆಂಗಳೂರು-ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್ ಸ್ಟಾಪ್ ಫ್ಲೈಟ್; ಸಮಯ, ಟಿಕೆಟ್ ಬೆಲೆ ಇತ್ಯಾದಿ ವಿವರ

Bangalore to Singapore Air India Non-stop Flight Service: ಏರ್ ಇಂಡಿಯಾ ಸಂಸ್ಥೆ ಬೆಂಗಳೂರು ಮತ್ತು ಸಿಂಗಾಪುರ ಮಧ್ಯೆ ನೇರ ಫ್ಲೈಟ್ ಸೇವೆ ಆರಂಭಿಸಿದೆ. ವಾರದಲ್ಲಿ ನಾಲ್ಕು ದಿನ, ಅಂದರೆ ಪ್ರತೀ ಭಾನುವಾರ, ಸೋಮವಾರ, ಗುರುವಾರ ಮತ್ತು ಶುಕ್ರವಾರಗಳಂದು ಬೆಂಗಳೂರಿನಿಂದ ಸಿಂಗಾಪುರಕ್ಕೆ ಮತ್ತು ಸಿಂಗಾಪುರದಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನಗಳು ಸಂಚರಿಸುತ್ತವೆ. ಈ ಫ್ಲೈಟ್ ಟೈಮ್, ಟಿಕೆಟ್ ಬೆಲೆ ಇತ್ಯಾದಿ ವಿವರ ಇಲ್ಲಿದೆ...

ಬೆಂಗಳೂರು-ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್ ಸ್ಟಾಪ್ ಫ್ಲೈಟ್; ಸಮಯ, ಟಿಕೆಟ್ ಬೆಲೆ ಇತ್ಯಾದಿ ವಿವರ
ಏರ್ ಇಂಡಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2023 | 12:12 PM

ಬೆಂಗಳೂರು, ಅಕ್ಟೋಬರ್ 24: ಭಾರತದ ಅತಿದೊಡ್ಡ ವಿಮಾನ ಸೇವೆ ಕಂಪನಿಗಳಲ್ಲಿ ಒಂದಾದ ಏರ್ ಇಂಡಿಯಾ (Air India) ಇದೀಗ ಬೆಂಗಳೂರಿನಿಂದ ಸಿಂಗಾಪುರಕ್ಕೆ ನಾನ್ ಸ್ಟಾಪ್ ಫ್ಲೈಟ್ ಸರ್ವಿಸ್ (Bangalore to Singapore Air India Non-stop Flight Service) ಆಫರ್ ಮಾಡಿದೆ. ಮೊನ್ನೆ ಅಕ್ಟೋಬರ್ 22ರಿಂದಲೇ ಈ ಸರ್ವಿಸ್ ಶುರುವಾಗಿದೆ. ಬೆಂಗಳೂರು ಮತ್ತು ಸಿಂಗಾಪುರ ಮಧ್ಯೆ ತಡೆರಹಿತ (non stop) ಸಂಚಾರವನ್ನು ಏರ್ ಇಂಡಿಯಾ ಆರಂಭಸಿದ್ದು ಇದೇ ಮೊದಲು. ವಾರದಲ್ಲಿ ನಾಲ್ಕು ದಿನ ನೇರ ಫ್ಲೈಟ್ ಸೇವೆ ಇರುತ್ತದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರಗಳಂದು ಬೆಂಗಳೂರಿನಿಂದ ಸಿಂಗಾಪುರಕ್ಕೆ, ಮತ್ತು ಸಿಂಗಾಪುರದಿಂದ ಬೆಂಗಳೂರಿಗೆ ಏರ್ ಇಂಡಿಯಾ ಫ್ಲೈಟ್ ಹತ್ತಬಹುದು.

ಬೆಂಗಳೂರಿನಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್-ಸ್ಟಾಪ್ ಫ್ಲೈಟ್ ಯಾವ ಸಮಯಕ್ಕೆ?

ಬೆಂಗಳೂರು ಮತ್ತು ಸಿಂಗಾಪುರ ನಡುವೆ ತಡೆರಹಿತ ವಿಮಾನ ಪ್ರಯಾಣಕ್ಕೆ ಕೇವಲ 4:45 ಗಂಟೆಗಳಾಗಬಹುದು. ಬೆಂಗಳೂರಿನಿಂದ ರಾತ್ರಿ 10:30ಕ್ಕೆ ಏರ್ ಇಂಡಿಯಾ ಫ್ಲೈಟ್ ಹೊರಟು, ಬೆಳಗ್ಗೆ 3:10ಕ್ಕೆ ಸಿಂಗಾಪುರ ತಲುಪುತ್ತದೆ. ಸಿಂಗಾಪುರದ ಸ್ಥಳೀಯ ಕಾಲಮಾನದಲ್ಲಿ ಬೆಳಗ್ಗೆ 5:40 ಆಗಿರುತ್ತದೆ.

ಇದನ್ನೂ ಓದಿ: ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್

ಇನ್ನು, ಸಿಂಗಾಪುರದ ಸ್ಥಳೀಯ ಕಾಲಮಾನದಲ್ಲಿ ಬೆಳಗ್ಗೆ 6:40ಕ್ಕೆ ಫ್ಲೈಟ್ ಹೊರಟರೆ ಬೆಂಗಳೂರನ್ನು 8:35ಕ್ಕೆ ತಲುಪುತ್ತದೆ. ಪ್ರತೀ ಭಾನುವಾರ, ಸೋಮವಾರ, ಗುರುವಾರ ಮತ್ತು ಶುಕ್ರವಾರಗಳಂದು ಎರಡು ಫ್ಲೈಟ್​ಗಳಿರುತ್ತವೆ.

ಬೆಂಗಳೂರಿನಿಂದ ಸಿಂಗಾಪುರಕ್ಕೆ ಫ್ಲೈಟ್ ಬೆಲೆ ಎಷ್ಟು?

ಬೆಂಗಳೂರಿನಿಂದ ಸಿಂಗಾಪುರಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲು ಏರ್​ಬಸ್ ಎ321 ಏರ್​ಕ್ರಾಫ್ಟ್ ಅನ್ನು ನಿಯೋಜಿಸಲಾಗಿದೆ. ಇದರಲ್ಲಿ 170 ಎಕನಾಮಿ ಸೀಟು, 12 ಲಕ್ಷುರಿ ಬಿಸಿನೆಸ್ ಕ್ಲಾಸ್ ಸೀಟ್​ಗಳಿವೆ. ಎಕನಾಮಿ ಕ್ಲಾಸ್​ನಲ್ಲಿ ಟಿಕೆಟ್ ಬೆಲೆ 10ರಿಂದ 15 ಸಾವಿರ ರೂ ಇರುತ್ತದೆ.

ಇದನ್ನೂ ಓದಿ: Explained: ಕ್ಯಾಷ್​ಬ್ಯಾಕ್, ಡಿಸ್ಕೌಂಟ್ ಆಫರ್​ಗಳಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಮಾರ್ಕೆಟಿಂಗ್ ರಹಸ್ಯ

ಬೆಂಗಳೂರು ಮತ್ತು ಸಿಂಗಾಪುರ ಮಧ್ಯೆ ಏರ್ ಇಂಡಿಯಾ ಮಾತ್ರವಲ್ಲ ಇನ್ನೂ ಹಲವಾರು ವಿಮಾನ ಸಂಸ್ಥೆಗಳು ಫ್ಲೈಟ್ ಸರ್ವಿಸ್ ನೀಡುತ್ತವೆ. ಎರಡು ನಗರಗಳ ಮಧ್ಯೆ ನಾನ್-ಸ್ಟಾಪ್ ಫ್ಲೈಟ್​ಗಳು ಕಡಿಮೆ. ಮುಂಬೈ, ಅಥವಾ ಕೌಲಾಲಂಪುರ ಇತ್ಯಾದಿ ಕಡೆ ನಿಲ್ಲಿಸಿ ಸಂಚರಿಸುವ ವಿಮಾನಗಳು ಹಲವಿವೆ. ಏರ್ ಇಂಡಿಯಾ ಅಲ್ಲದೇ ಏರ್ ಏಷ್ಯಾ, ಅಲಾಯನ್ಸ್ ಏರ್ವೇಸ್, ಬ್ರಿಟಿಷ್ ಏರ್ವೇಸ್, ಎಮಿರೇಟ್ಸ್, ಲುಫ್ತಾನ್ಸ, ಇಂಡಿಗೋ, ಮಲೇಷ್ಯಾ ಏರ್ಲನ್ಸ್, ಕಾಂಟಾಸ್, ಕತಾರ್ ಏರ್ವೇಸ್, ಸಿಂಗಾಪುರ್ ಏರ್ಲೈನ್ಸ್, ಶ್ರೀಲಂಕನ್ ಏರ್ಲೈನ್ಸ್,, ಥಾಯ್ ಏರ್ ಏಷ್ಯಾ ಇತ್ಯಾದಿ ವಿಮಾನ ಸಂಸ್ಥೆಗಳು ಬೆಂಗಳೂರಿನಿಂದ ಸಿಂಗಾಪುರಕ್ಕೆ ಫ್ಲೈಟ್ ಸೇವೆ ನೀಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ