Explained: ಕ್ಯಾಷ್​ಬ್ಯಾಕ್, ಡಿಸ್ಕೌಂಟ್ ಆಫರ್​ಗಳಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಮಾರ್ಕೆಟಿಂಗ್ ರಹಸ್ಯ

Reality of Cashback and Discount Offers: ಹಬ್ಬದ ಋತುವಿನಲ್ಲಿ ದೇಶದಾದ್ಯಂತ ಆಫ್‌ಲೈನ್ ಮತ್ತು ಆನ್‌ಲೈನ್ ಶಾಪಿಂಗ್ ಮಾರಾಟದ ಭರಾಟೆ ಹೆಚ್ಚು. ಈ ಮಾರಾಟದ ಸಮಯದಲ್ಲಿ, ಇ-ಕಾಮರ್ಸ್ ಕಂಪನಿಗಳು ವಿವಿಧ ಬ್ಯಾಂಕ್‌ಗಳು ಅಥವಾ ಕಂಪನಿಗಳ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಜನರಿಗೆ ಯಥೇಚ್ಛವಾಗಿ ರಿಯಾಯಿತಿಗಳನ್ನು ನೀಡುತ್ತವೆ. ಇದು ನಿಜವಾಗಿಯೂ ನಿಮ್ಮ ಖರ್ಚುಗಳನ್ನು ಉಳಿಸುತ್ತದೆಯೇ ಅಥವಾ ಬ್ಯಾಂಕ್‌ಗಳು ಮತ್ತು ಕಂಪನಿಗಳ ಗಳಿಕೆಯನ್ನು ಹೆಚ್ಚಿಸುತ್ತದೆಯೇ? ತಪ್ಪದೇ ಓದಿ...

Explained: ಕ್ಯಾಷ್​ಬ್ಯಾಕ್, ಡಿಸ್ಕೌಂಟ್ ಆಫರ್​ಗಳಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಮಾರ್ಕೆಟಿಂಗ್ ರಹಸ್ಯ
ಡಿಸ್ಕೌಂಟ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Oct 23, 2023 | 4:38 PM

ಈಗಂತೂ ಹಬ್ಬದ ಸೀಸನ್. ಜೊತೆಗೆ ಮದುವೆ ಸೀಸನ್ ಕೂಡ ಹೌದು. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪನಿಗಳಿಗೆ ಸಖತ್ ಬಿಸಿನೆಸ್. ಈ ಎಲ್ಲಾ ಸೈಟ್‌ಗಳಲ್ಲಿ ಶಾಪಿಂಗ್ ಮಾಡಲು ನೀವು ವಿವಿಧ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳಲ್ಲಿ ಭರ್ಜರಿ ರಿಯಾಯಿತಿ ಅಥವಾ ಕ್ಯಾಶ್‌ಬ್ಯಾಕ್ ಆಫರ್​ಗಳಿರುವುದನ್ನು (cashback and discount offers) ಗಮನಿಸಿರಬಹುದು. ಇಷ್ಟೊಂದು ರಿಯಾಯಿತಿ, ಕ್ಯಾಷ್ ಬ್ಯಾಕ್ ಕೊಡುವವರಿಗೆ ಏನು ಉಪಯೋಗ ಎಂಬ ಅನುಮಾನ ಯಾರಿಗಾದರೂ ಬರಬಹುದು. ಈ ಡಿಸ್ಕೌಂಟ್, ಕ್ಯಾಷ್​ಬ್ಯಾಕ್​ಗಳ ಹಿಂದೆ ಕ್ರೆಡಿಟ್ ಕಾರ್ಡ್ ಕಂಪನಿಗಳು, ಇಕಾಮರ್ಸ್ ಕಂಪನಿಗಳು ಹೇಗೆಲ್ಲಾ ಲಾಭ ಮಾಡುತ್ತವೆ ಎಂಬ ವಿವರಣೆ ಇಲ್ಲಿದೆ.

ಮೊದಲನೆಯದಾಗಿ, ಆನ್‌ಲೈನ್ ಮಾರಾಟದ ಸಮಯದಲ್ಲಿ ಖರೀದಿಗಳನ್ನು ಹೆಚ್ಚಿಸಲು, ಇ-ಕಾಮರ್ಸ್ ಕಂಪನಿಗಳು ಪ್ರಚಾರಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತವೆ. ಇದರ ಒಂದು ಭಾಗವನ್ನು ಬ್ಯಾಂಕ್‌ಗಳಿಗೂ ನೀಡಲಾಗುತ್ತದೆ. ಏಕೆಂದರೆ ಬ್ಯಾಂಕುಗಳು ಆನ್‌ಲೈನ್ ಸೈಟ್‌ಗಳಲ್ಲಿ ವಹಿವಾಟು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಾರೆ. ಬ್ಯಾಂಕ್‌ಗಳು ಇದರ ಸ್ವಲ್ಪ ಭಾಗವನ್ನು ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಆಗಿ ನೀಡುತ್ತವೆ. ಇದಲ್ಲದೆ, ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್‌ಗಳ ಬಳಕೆಯನ್ನು ಹೆಚ್ಚಿಸಲು ಮಾರಾಟದ ಸಮಯದಲ್ಲಿ ಗ್ರಾಹಕರಿಗೆ ರಿಯಾಯಿತಿಗಳನ್ನು ನೀಡುತ್ತವೆ. ಇದರ ಹೊರತಾಗಿ, ಜನರು ಇತರ ಹಲವು ರೀತಿಯ ಮಾರ್ಕೆಟಿಂಗ್ ಬಜೆಟ್ ಮತ್ತು ಕಮಿಷನ್‌ಗಳಿಂದ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.

ನಿಮ್ಮ ಗಳಿಕೆ ಅಲ್ಪಕಾಲಿಕ ಮಾತ್ರ…

ಶಾಪಿಂಗ್‌ಗೆ ಬ್ಯಾಂಕ್‌ಗಳು ಇಷ್ಟು ದೊಡ್ಡ ರಿಯಾಯಿತಿಗಳನ್ನು ಹೇಗೆ ನೀಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ವಾಸ್ತವವಾಗಿ, ರಿಯಾಯಿತಿಯಲ್ಲಿ ನೀಡಲಾಗುವ ಮೊತ್ತವು ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳ ಮಾರ್ಕೆಟಿಂಗ್ ಬಜೆಟ್‌ನ ಭಾಗವಾಗಿದೆ. ಅವರು ಗ್ರಾಹಕರನ್ನು ಆಕರ್ಷಿಸಲು ಖರ್ಚು ಮಾಡುತ್ತಾರೆ. ಕ್ಯಾಶ್‌ಬ್ಯಾಕ್ ಅಥವಾ ಡಿಸ್ಕೌಂಟ್‌ಗಳ ಆಮಿಷದಿಂದಾಗಿ, ಕ್ರೆಡಿಟ್ ಕಾರ್ಡ್ ಗ್ರಾಹಕರು ಹೆಚ್ಚಿನ ಖರೀದಿಗಳನ್ನು ಮಾಡುತ್ತಾರೆ. ಅದೇ ಸಮಯದಲ್ಲಿ ಬ್ಯಾಂಕ್‌ಗಳು ಹೊಸ ಗ್ರಾಹಕರನ್ನು ಪಡೆಯುತ್ತವೆ. ಆದ್ದರಿಂದ, ಅಂತಿಮವಾಗಿ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಂಪನಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತವೆ.

ಇದನ್ನೂ ಓದಿ: ವಿಕಿಪೀಡಿಯಾ ಹೆಸರು ಬದಲಿಸಿದರೆ 8,000 ಕೋಟಿ ರೂ ಕೊಡ್ತೀನಿ ಎಂದು ಇಲಾನ್ ಮಸ್ಕ್ ಸವಾಲು

ಡಿಸ್ಕೌಂಟ್ ಮತ್ತು ಕ್ಯಾಷ್​ಬ್ಯಾಕ್ ಇತ್ಯಾದಿ ಆಫರ್ ಪಡೆಯುವ ಗ್ರಾಹಕರಿಗೆ ಇದು ಕ್ಷಣಿಕ ಸುಖದ ರೀತಿಯದ್ದು. ಈ ರೀತಿ ರಿಯಾಯಿತಿಗಳಿಂದ ನಿಮಗೆ ಹಣ ಉಳಿಸಿದ ತೃಪ್ತಿ ಸಿಗುತ್ತದಾದರೂ ಅವುಗಳಿಗೆ ನೀವು ದಾಸರಾಗಿ ಹೋಗುತ್ತೀರಿ. ಆನ್​ಲೈನ್ ಶಾಪಿಂಗ್ ಹುಚ್ಚು ಹೆಚ್ಚಾಗುತ್ತದೆ. ಇಕಾಮರ್ಸ್ ಆ್ಯಪ್ ತೆರೆದರೆ ಡಿಸ್ಕೌಂಟ್, ಕ್ಯಾಷ್​ಬ್ಯಾಕ್ ಮೇಲೆಯೇ ಕಣ್ಣು ನೆಟ್ಟು ನೀವು ಅಗತ್ಯವಿಲ್ಲದ ವಸ್ತುಗಳನ್ನೂ ಖರೀದಿಸುವ ಮಟ್ಟಕ್ಕೆ ಹೋಗುತ್ತೀರಿ. ಇದರಿಂದ ದೀರ್ಘಾವಧಿಯಲ್ಲಿ ನಿಮ್ಮ ಹಣ ಕರಗುತ್ತಾ ಹೋಗುತ್ತದೆ. ಬ್ಯಾಂಕು, ಕ್ರೆಡಿಟ್ ಕಾರ್ಡ್ ಕಂಪನಿಗಳು ಮತ್ತು ಇಕಾಮರ್ಸ್ ಕಂಪನೊಇಗಳು ಲಾಭ ಮಾಡಿಕೊಳ್ಳುತ್ತವೆ.

ಕ್ರೆಡಿಟ್ ಕಾರ್ಡ್ ಅನ್ನೂ ಅತಿಯಾಗಿ ಬಳಸಿ, ಮಿತಿಮೀರಿದ ಬಿಲ್ ಪಡೆದು ಅದಕ್ಕೆ ಹೆಚ್ಚುವರಿ ಬಡ್ಡಿ, ಶುಲ್ಕ, ತಡವಾಗಿ ಕಟ್ಟಿದರೆ ದಂಡ ಇತ್ಯಾದಿ ವಿವಿಧ ರೀತಿಯ ಹೊರೆಗಳು ನಿಮ್ಮ ಮೇಲೆ ಬೀಳುತ್ತವೆ. ಅದಕ್ಕೆ ಇಂಗ್ಲೀಷ್​ನಲ್ಲಿ ಒಂದು ಗಾದೆ ಮಾತಿದೆ: ಯಾವುದೂ ಬಿಟ್ಟಿ ಕೂಳಲ್ಲ (No Such This As a Free Lunch) ಎಂದು.

ಬ್ಯಾಂಕುಗಳು ಮತ್ತು ಇ-ಕಾಮರ್ಸ್ ಕಂಪನಿಗಳ ಚಾಲಾಕಿತನ

ಕ್ಯಾಶ್‌ಬ್ಯಾಕ್‌ನ ಈ ಲೆಕ್ಕಾಚಾರದಲ್ಲಿ, ಬ್ಯಾಂಕ್‌ಗಳು ಮತ್ತು ಇ-ಕಾಮರ್ಸ್ ಕಂಪನಿಗಳ ಚಾಕಚಕ್ಯತೆ ಬಹಳಷ್ಟು ಕೆಲಸ ಮಾಡುತ್ತದೆ. ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದ ವಹಿವಾಟಿನ ಮೇಲೆ ಇ-ಕಾಮರ್ಸ್ ಕಂಪನಿಗಳಿಂದ ವ್ಯಾಪಾರಿ ಶುಲ್ಕವನ್ನು ಪಡೆಯುತ್ತವೆ. ಇದು 2.5 ರಿಂದ 4 ಪ್ರತಿಶತದವರೆಗೆ ಇರುತ್ತದೆ. ಅವರು ಕ್ಯಾಶ್ಬ್ಯಾಕ್ ರೂಪದಲ್ಲಿ ಗ್ರಾಹಕರಿಗೆ ಇದರ ಒಂದು ಭಾಗವನ್ನು ಹಿಂದಿರುಗಿಸುತ್ತಾರೆ.

ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

ಅದೇ ಸಮಯದಲ್ಲಿ, ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಕೊಡುಗೆಗಳಿಂದಾಗಿ ಇ-ಕಾಮರ್ಸ್ ಕಂಪನಿಗಳ ಮಾರಾಟವು ಹೆಚ್ಚಾಗುತ್ತದೆ. ಕಂಪನಿಗಳ ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತದೆ. ಬ್ಯಾಂಕ್ ತನ್ನ ಕಮಿಷನ್ ಪಡೆಯುತ್ತದೆ. ಅದನ್ನು ಕ್ಯಾಶ್‌ಬ್ಯಾಕ್ ಆಫರ್‌ನಲ್ಲಿ ಅಲ್ಪ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸುತ್ತದೆ ಅಷ್ಟೇ. ಅಂತಿಮವಾಗಿ ಹೊರೆಯಾಗುವುದು ಗ್ರಾಹಕರಿಗೆಯೇ.

MRP ಮೇಲೆ ರಿಯಾಯಿತಿ ಲಭ್ಯವಿದೆ, ಕಂಪನಿಗಳು ಲಾಭ

ಕ್ಯಾಶ್‌ಬ್ಯಾಕ್‌ನ ಗಣಿತದಲ್ಲಿ ಇನ್ನೊಂದು ವಿಷಯ ಕೆಲಸ ಮಾಡುತ್ತದೆ. ಜನರಿಗೆ MRP ಯಲ್ಲಿ ಸರಕುಗಳನ್ನು ನೀಡಲಾಗುತ್ತದೆ, ಆದರೆ ಸಾಮಾನ್ಯವಾಗಿ ಈಗಾಗಲೇ ಉತ್ಪನ್ನದ ಮೇಲೆ ಭಾರಿ ಮಾರ್ಜಿನ್ ಇರುತ್ತದೆ . ಯಾವುದೇ ವಸ್ತುವಿನ ಸಗಟು ದರ ಮತ್ತು ಚಿಲ್ಲರೆ ದರದ ನಡುವಿನ ವ್ಯತ್ಯಾಸದಿಂದ ನೀವು ಇದನ್ನು ಅರ್ಥಮಾಡಿಕೊಳ್ಳಬಹುದು. ಈಗ, ಆನ್‌ಲೈನ್ ಮಾರಾಟದಲ್ಲಿ ಮಾರಾಟವನ್ನು ಹೆಚ್ಚಿಸಬೇಕಾಗಿರುವುದರಿಂದ, ಇ-ಕಾಮರ್ಸ್ ಕಂಪನಿಗಳು ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತವೆ. ಈ ಕಾರಣದಿಂದಾಗಿ, ಇ-ಕಂಪನಿಗಳಿಗೆ ಬಹಳಷ್ಟು ಲಾಭದ ಮಾರ್ಜಿನ್‌ ಸಿಗುತ್ತದೆ. ಅವರು ಬ್ಯಾಂಕ್‌ಗಳಿಂದ ಕ್ಯಾಶ್‌ಬ್ಯಾಕ್ ಮೂಲಕ ಗ್ರಾಹಕರಿಗೆ ಅಲ್ಪಭಾಗವನ್ನು ನೀಡುತ್ತಾರೆ ಮತ್ತು ಮಾರಾಟದ ಹೆಚ್ಚಳದೊಂದಿಗೆ ಅವರ ಗಳಿಕೆಯು ಹೆಚ್ಚಾಗುತ್ತದೆ.

ಬ್ಯಾಂಕ್‌ಗಳು ಮಾರಾಟದಲ್ಲಿ ಮಾತ್ರ ಏಕೆ ರಿಯಾಯಿತಿಗಳನ್ನು ನೀಡುತ್ತವೆ?

ಬ್ಯಾಂಕ್‌ಗಳು ಮಾರಾಟದಲ್ಲಿ ಮಾತ್ರ ಏಕೆ ದೊಡ್ಡ ರಿಯಾಯಿತಿಗಳನ್ನು ನೀಡುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಕಾರಣವೆಂದರೆ ಮೊದಲೆ ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿದರೆ, ಶಾಪಿಂಗ್ ಸಮಯದಲ್ಲಿ ನಿಮ್ಮ ಬಿಲ್ ಮೊತ್ತ ಅಂದರೆ ಟಿಕೆಟ್ ಗಾತ್ರವು ಚಿಕ್ಕದಾಗಿರುತ್ತದೆ. ಇದರಿಂದ ಬ್ಯಾಂಕ್‌ಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದೇ ಸಮಯದಲ್ಲಿ, ಬಿಲ್ ಗಾತ್ರವು ದೊಡ್ಡದಾಗಿದ್ದರೆ, ಬ್ಯಾಂಕ್ ಹೆಚ್ಚಿನ ಕಮಿಷನ್, ವ್ಯಾಪಾರಿ ಶುಲ್ಕ ಇತ್ಯಾದಿಗಳನ್ನು ಪಡೆಯುತ್ತದೆ. ಆದ್ದರಿಂದ ಈ ಮಾರಾಟದ ಸಮಯದಲ್ಲಿ ಅದು ತನ್ನ ಪಾಲನ್ನು ಕೆಲವು ಬ್ಯಾಂಕ್‌ಗಳಿಗೆ ಹಿಂತಿರುಗಿಸುತ್ತದೆ.

ಇದನ್ನೂ ಓದಿ: ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?

ನೀವು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯದ್ದು ಮತ್ತೊಂದು ಸಂಗತಿ. ಬ್ಯಾಂಕ್‌ಗಳು ಅದನ್ನು ತಕ್ಷಣವೇ ಕಂಪನಿಗಳಿಗೆ ವರ್ಗಾಯಿಸುವುದಿಲ್ಲ, ಬದಲಿಗೆ ಅದು ಬ್ಯಾಂಕ್ ಖಾತೆಯಿಂದ ಕಂಪನಿ ಖಾತೆಗೆ ಒಂದು ಅಥವಾ ಎರಡು ದಿನಗಳಲ್ಲಿ ಹೋಗುತ್ತದೆ. ಈ ಮಧ್ಯೆ ಬ್ಯಾಂಕುಗಳು ಈ ಮೊತ್ತದಿಂದ ಬಡ್ಡಿ ಗಳಿಸುತ್ತವೆ. ಇಷ್ಟು ಮಾತ್ರವಲ್ಲದೆ, ಬ್ಯಾಂಕ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರಿಗೆ ಮಿತಿಯೊಳಗೆ ಮಾತ್ರ ಕ್ಯಾಶ್‌ಬ್ಯಾಕ್ ನೀಡುತ್ತವೆ. ನೀವು ಈ ಮಿತಿಯನ್ನು ದಾಟಿದಾಗ, ಭಾರೀ ದಂಡ ಪಾವತಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ