AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Semiconductor: ಬೆಂಗಳೂರಲ್ಲಿ 3nm ಚಿಪ್ ಡಿಸೈನ್ ಸೆಂಟರ್ ಆಯ್ತು, ಈಗ 6ನೇ ಸೆಮಿಕಂಡಕ್ಟರ್ ಘಟಕಕ್ಕೆ ಸಂಪುಟ ಒಪ್ಪಿಗೆ

India's sixth semiconductor unit to come at Jewar, UP: ಭಾರತದಲ್ಲಿ ಆರನೇ ಸೆಮಿಕಂಡಕ್ಟರ್ ಸ್ಥಾಪನೆಗೆ ಕೇಂದ್ರ ಸಂಪುಟ ಇಂದು ಮೇ 14, ಒಪ್ಪಿಗೆ ನೀಡಿದೆ. ಎಚ್​​ಸಿಎಲ್ ಟೆಕ್ನಾಲಜೀಸ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಉತ್ತರಪ್ರದೇಶದ ಜೇವರ್​​​ನಲ್ಲಿ ಈ ಘಟಕ ಸ್ಥಾಪಿಸಲಿವೆ. ಬೆಂಗಳೂರು ಮತ್ತು ನೋಯ್ಡಾದಲ್ಲಿ ಜಪಾನ್​​ನ ರಿನಿಸಾಸ್ ಸಂಸ್ಥೆಯಿಂದ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್​​ಗಳ ಉದ್ಘಾಟನೆ ಆಗಿತ್ತು.

Semiconductor: ಬೆಂಗಳೂರಲ್ಲಿ 3nm ಚಿಪ್ ಡಿಸೈನ್ ಸೆಂಟರ್ ಆಯ್ತು, ಈಗ 6ನೇ ಸೆಮಿಕಂಡಕ್ಟರ್ ಘಟಕಕ್ಕೆ ಸಂಪುಟ ಒಪ್ಪಿಗೆ
ಸೆಮಿಕಂಡಕ್ಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2025 | 4:15 PM

Share

ನವದೆಹಲಿ, ಮೇ 14: ಎಚ್​​ಸಿಎಲ್ ಟೆಕ್ನಾಲಜೀಸ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಸ್ಥಾಪಿಸಬೇಕೆಂದಿರುವ ಸೆಮಿಕಂಡಕ್ಟರ್ ಘಟಕಕ್ಕೆ (semiconductor unit) ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. ಈ ವಿಷಯವನ್ನು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಉತ್ತರಪ್ರದೇಶ ಜೇವರ್​​​ನಲ್ಲಿ (Jewar, UP) 3,076 ರೂ ಹೂಡಿಕೆಯಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ಮಾಣವಾಗಲಿದೆ. ಕೇಂದ್ರ ಅನುಮತಿಸಿರುವ ಆರನೇ ಸೆಮಿಕಂಡಕ್ಟರ್ ಘಟಕ ಇದಾಗಿದೆ. ಈ ಹಿಂದೆ ಅನುಮೋದನೆ ನೀಡಿರುವ ಐದು ಘಟಕಗಳು ಅಂತಿಮ ನಿರ್ಮಾಣ ಹಂತದಲ್ಲಿವೆ ಎನ್ನುವ ಮಾಹಿತಿಯನ್ನು ಎ ವೈಷ್ಣವ್ ನೀಡಿದ್ದಾರೆ.

2027ಕ್ಕೆ ಕಾರ್ಯಾರಂಭಿಸುವ ಉದ್ದೇಶ ಇರುವ ಎಚ್​​ಸಿಎಲ್ ಮತ್ತು ಫಾಕ್ಸ್​​ಕಾನ್​​ನ ಈ ಘಟಕದಲ್ಲಿ ಡಿಸ್​​ಪ್ಲೇ ಇರುವಂತಹ ಮೊಬೈಲ್ ಫೋನ್, ಲ್ಯಾಪ್​ಟಾಪ್, ಆಟೊಮೊಬೈಲ್, ಕಂಪ್ಯೂಟರ್ ಹಾಗೂ ಇತರ ಸಾಧನಗಳಿಗೆ ಡಿಸ್​​ಪ್ಲೇ ಡ್ರೈವರ್ ಚಿಪ್​​ಗಳನ್ನು ತಯಾರಿಸಲಾಗುತ್ತದೆ. ಒಂದು ತಿಂಗಳಲ್ಲಿ 20,000 ವೇಫರ್​​ಗಳು ಹಾಗೂ 3.6 ಕೋಟಿ ಚಿಪ್​​ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕೆ ಇರಲಿದೆ. ಉತ್ತರಪ್ರದೇಶದ ಜೇವರ್ ವಿಮಾನ ನಿಲ್ದಾಣ ಸಮೀಪವೇ ಇರುವ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಈ ಘಟಕದಲ್ಲಿ 2,000 ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?

ಅನುಮೋದನೆಗೊಂಡಿರುವ ಇತರ ಐದು ಸೆಮಿಕಂಡ್ಟರ್ ಘಟಕಗಳು

  1. ಮೈಕ್ರಾನ್ ಟೆಕ್ನಾಲಜಿ, (ಸಾನಂದ್, ಗುಜರಾತ್)
  2. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಪವರ್​​ಚಿಪ್ ಸೆಮಿಕಂಡಕ್ಟರ್, (ಧೊಲೇರಾ ಗುಜರಾತ್)
  3. ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್, (ಅಸ್ಸಾಮ್)
  4. ಸಿಜಿ ಪವರ್, ರಿನಿಸಾಸ್ ಎಲೆಕ್ಟ್ರಾನಿಕ್ಸ್ ಮತ್ತು ಸ್ಟಾರ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ (ಸಾನಂದ್, ಗುಜರಾತ್)
  5. ಕೇನೆಸ್ ಸೆಮಿಕಾನ್ (ಸಾನಂದ್, ಗುಜರಾತ್)

ಭಾರತದಲ್ಲಿ ಅನುಮೋದನೆಗೊಂಡಿರುವ ಆರು ಸೆಮಿಕಂಡಕ್ಟರ್ ಘಟಕಗಳಲ್ಲಿ ನಾಲ್ಕು ಗುಜರಾತ್​​​ನಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ.

ಬೆಂಗಳೂರು ಮತ್ತು ನೋಯ್ಡಾದಲ್ಲಿ ಭಾರತದ ಮೊದಲ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್

ಬಹಳ ಮುಖ್ಯವಾದ ಮತ್ತು ಕ್ಲಿಷ್ಟಕರಾದ 3 ನ್ಯಾನೋಮೀಟರ್ ಚಿಪ್ ಡಿಸೈನ್ ಸೌಲಭ್ಯ ಭಾರತದಲ್ಲಿ ಲಭ್ಯ ಇರಲಿದೆ. ನಿನ್ನೆ ಮಂಗಳವಾರ ಸಚಿವ ಎ ವೈಷ್ಣವ್ ಅವರು ಬೆಂಗಳೂರು ಮತ್ತು ನೋಯ್ಡಾದಲ್ಲಿ ಈ ಚಿಪ್ ಡಿಸೈನ್ ಸೆಂಟರ್​​​ಗಳನ್ನು ಉದ್ಘಾಟನೆ ಮಾಡಿದ್ದಾರೆ.

ಜಪಾನ್ ಮೂಲದ ರೆನಿಸಾಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಈ ಎರಡು ಕಡೆ 3 ಎನ್​ಎಂ ಚಿಪ್ ಸಿಸೈನ್ ಸೆಂಟರ್ ಸ್ಥಾಪಿಸುತ್ತಿದೆ. ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್, ಲ್ಯಾಮ್ ರಿಸರ್ಚ್ ಸಂಸ್ಥೆಗಳೂ ಕೂಡ ಈ ಭಾರತದ ಸೆಮಿಕಂಡಕ್ಟರ್ ಉದ್ಯಮ ಬೆಳವಣಿಗೆಗೆ ಸಹಾಯಕವಾಗಿವೆ.

ಇದನ್ನೂ ಓದಿ: ಅಮೆರಿಕ, ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಬ್ರಹ್ಮೋಸ್ ಕ್ಷಿಪಣಿ ಪಡೆಯಲು ಆಸಕ್ತಿ

ಭಾರತದಲ್ಲಿ 5 ನ್ಯಾನೋಮೀಟರ್ ಮತ್ತು 7 ನ್ಯಾನೋಮೀಟರ್ ಚಿಪ್ ಡಿಸೈನ್ ಸೆಂಟರ್​​ಗಳಿವೆ. ಈಗ ಮೊದಲ ಬಾರಿಗೆ 3 ಎನ್​​ಎಂಗೆ ಅಪ್​​ಗ್ರೇಡ್ ಆಗಲಾಗುತ್ತಿದೆ. ಇಲ್ಲಿ ನ್ಯಾನೋಮೀಟರ್ ಅಂಕಿಯು ಚಿಪ್​​ನಲ್ಲಿರುವ ಟ್ರಾನ್ಸಿಸ್ಟರ್ ಗಾತ್ರವನ್ನು ಸೂಚಿಸುತ್ತದೆ. 5 ಎನ್​​ಎಂ ಚಿಪ್​​ಗಿಂತ 3 ಎನ್​​ಎಂ ಚಿಪ್ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ, ಹೆಚ್ಚು ಟ್ರಾನ್ಸಿಸ್ಟರ್​​ಗಳನ್ನು ಹೊಂದಿರುತ್ತದೆ.

ಸದ್ಯ, ಉದ್ಯಮ ವಲಯದಲ್ಲಿ 3 ಎನ್​​ಎಂ ಚಿಪ್​​ಗಳು ಸ್ಟ್ಯಾಂಡರ್ಡ್ ಎನಿಸಿವೆ. 2 ಎನ್​ಎಂ ಮತ್ತು 1 ಎನ್​​ಎಂ ಚಿಪ್​​​ಗಳು ಇನ್ನೂ ಪ್ರಯೋಗ ಹಂತದಲ್ಲಿದ್ದು, ಕಮರ್ಷಿಯಲ್ ಬಿಡುಗಡೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್ ಆರಂಭವಾಗಿರುವುದು ಸ್ವಾಗತಾರ್ಹದ ಸಂಗತಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ