AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brahmos power: ಅಮೆರಿಕ, ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಬ್ರಹ್ಮೋಸ್ ಕ್ಷಿಪಣಿ ಪಡೆಯಲು ಆಸಕ್ತಿ

World interested to buy Indian brahmos missile: ಭಾರತದ ಸೂಪರ್​​​ಸಾನಿಕ್ ಕ್ರೂಸ್ ಮಿಸೈಲ್ ಆದ ಬ್ರಹ್ಮೋಸ್ ಈಗ ವಿಶ್ವದ ಗಮನ ಸೆಳೆದಿದೆ. ಫಿಲಿಪ್ಪೈನ್ಸ್ ದೇಶ ಮಾತ್ರ ಖರೀದಿಸಿರುವ ಈ ಮೇಡ್ ಇನ್ ಇಂಡಿಯಾ ಕ್ಷಿಪಣಿಯನ್ನು ಪಡೆಯಲು ಹಲವು ದೇಶಗಳು ಮುಂದಾಗಿವೆ. ಇಂಡೋನೇಷ್ಯಾ, ವಿಯೆಟ್ನಾಂನಿಂದ ಹಿಡಿದು ದಕ್ಷಿಣ ಆಫ್ರಿಕಾ, ಬಲ್ಗೇರಿಯಾವರೆಗೆ ಹಲವು ದೇಶಗಳು ಭಾರತದಿಂದ ಬ್ರಹ್ಮೋಸ್ ಅನ್ನು ಖರೀದಿಸಲು ಆಸಕ್ತಿ ಹೊಂದಿವೆ.

Brahmos power: ಅಮೆರಿಕ, ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಬ್ರಹ್ಮೋಸ್ ಕ್ಷಿಪಣಿ ಪಡೆಯಲು ಆಸಕ್ತಿ
ಬ್ರಹ್ಮೋಸ್ ಕ್ಷಿಪಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 13, 2025 | 6:48 PM

Share

ನವದೆಹಲಿ, ಮೇ 13: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರದಲ್ಲಿ ಭಾರತಕ್ಕೆ ಸ್ಪಷ್ಟ ಮೇಲುಗೈ ತಂದುಕೊಟ್ಟ ಅಸ್ತ್ರಗಳಲ್ಲಿ ಬ್ರಹ್ಮೋಸ್ ಎನ್ನುವ ಕ್ರ್ಯೂಸ್ ಮಿಸೈಲ್ ಒಂದು. ಪಾಕಿಸ್ತಾನದ ಕೆಲ ಸ್ಥಳಗಳ ಮೇಲೆ ಈ ಕ್ಷಿಪಣಿಗಳಿಂದ ಬಹಳ ಕರಾರುವಾಕ್ ದಾಳಿ ಮಾಡಲಾಗಿತ್ತೆನ್ನಲಾಗಿದೆ. ಇದು ಯಾವ ರಾಡಾರ್ ಮತ್ತು ರಕ್ಷಣಾ ಕಣ್ಗಾವಲಿಗೂ ನಿಲುಕದಂತೆ ವೇಗವಾಗಿ ಹಾಯ್ದು ನಿಗದಿತ ಗುರಿಗೆ ಹೊಡೆದೇ ಹೊಡೆಯುವಂಥ ಕ್ಷಿಪಣಿ. ಇದೆಂಥ ಮಹತ್ವದ್ದು ಎಂಬುದು ಆಪರೇಷನ್ ಸಿಂದೂರದಲ್ಲಿ ರುಜುವಾತಾಗಿದೆ. ಈ ಕ್ಷಿಪಣಿ ಖರೀದಿಸಲು ಆಸಕ್ತಿ ತೋರುತ್ತಿರುವ ದೇಶಗಳ ಸಂಖ್ಯೆ ಈಗ ಹೆಚ್ಚಾಗತೊಡಗಿದೆ. ವರದಿಯೊಂದರ ಪ್ರಕಾರ 17 ದೇಶಗಳು ಈಗ ಬ್ರಹ್ಮೋಸ್ ಖರೀದಿಗೆ ಸಾಲುಗಟ್ಟಿವೆಯಂತೆ.

ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಸೂಪರ್​​ಸೋನಿಕ್ ವೇಗ, ಕರಾರುವಾಕ್ ದಾಳಿ, ಮತ್ತು ವಿವಿಧ ವಾತಾವರಣಗಳಿಗೆ ತಾಳೆಯಾಗಬಲ್ಲಂತಹದ್ದು ಇದು ಬ್ರಹ್ಮೋಸ್ ಮೇಲೆ ಆಸಕ್ತಿ ಹೆಚ್ಚಲು ಕಾರಣ. ನೆಲ, ವಾಯು ಮತ್ತು ಸಮುದ್ರದಿಂದ ಇವುಗಳನ್ನು ಪ್ರಯೋಗಿಸಬಹುದು.

ಇದನ್ನೂ ಓದಿ: ಮಾರುಕಟ್ಟೆ ಏರುಪೇರು, ಚೀನಾದ ಸುಳ್ಳು ಸುದ್ದಿ ತಂತ್ರ; ರಫೇಲ್ ಮತ್ತು ಚೆಂಗ್ಡು ಅಸಲಿ ಷೇರು ಆಟ

ಬ್ರಹ್ಮೋಸ್ ಖರೀದಿಸಲು ಆಸಕ್ತಿ ತೋರಿರುವ ದೇಶಗಳಿವು…

ಸದ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ಒಪ್ಪಂದಕ್ಕೆ ಸಹಿಹಾಕಿರುವುದು ಫಿಲಿಪ್ಪೈನ್ಸ್ ಮಾತ್ರವೇ. 2022ರಲ್ಲಿ ಆ ದೇಶದ ಕರಾವಳಿ ಪಡೆಗೆ ಮೂರು ಡಿಫೆನ್ಸ್ ಬ್ಯಾಟರಿಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆಯಲಾಗಿತ್ತು. ಒಂದೊಂದು ಬ್ಯಾಟರಿಯಲ್ಲೂ ಹತ್ತಾರು ಕ್ಷಿಪಣಿಗಳಿರುತ್ತವೆ. ಈಗಾಗಲೇ ಒಂದು ಡಿಫೆನ್ಸ್ ಬ್ಯಾಟರಿಯನ್ನು ಭಾರತವು ಫಿಲಿಪ್ಪೈನ್ಸ್​​ಗೆ ನೀಡಿದೆ.

ಈಗ ಮತ್ತಷ್ಟು ದೇಶಗಳು ಬ್ರಹ್ಮೋಸ್ ಕ್ಷಿಪಣಿ ಮೇಲೆ ಆಸಕ್ತಿ ತೋರಿವೆ. ಅವುಗಳ ಪಟ್ಟಿ ಇಲ್ಲಿದೆ:

  • ಆಗ್ನೇಯ ಏಷ್ಯನ್ ದೇಶಗಳು: ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಥಾಯ್ಲೆಂಡ್, ಸಿಂಗಾಪುರ್, ಬ್ರೂನೇ,
  • ಅಮೆರಿಕನ್ ದೇಶಗಳು: ಬ್ರೆಜಿಲ್, ಚಿಲಿ, ಅರ್ಜೆಂಟೀನಾ, ವೆನಿಜುವೆಲಾ
  • ಮಧ್ಯಪ್ರಾಚ್ಯ ದೇಶಗಳು: ಸೌದಿ ಅರೇಬಿಯಾ, ಕತಾರ್, ಓಮನ್, ಯುಎಇ, ಈಜಿಪ್ಟ್
  • ಇತರೆ: ದಕ್ಷಿಣ ಆಫ್ರಿಕಾ, ಬಲ್ಗೇರಿಯಾ.

ಈ ಮೇಲಿನ ಪಟ್ಟಿಯಲ್ಲಿ ಹೆಚ್ಚಿನವರು ಅಮೆರಿಕ ಮತ್ತು ಚೀನಾದ ಸಮೀಪ ಇರುವಂಥ ದೇಶಗಳಾಗಿರುವುದು ಕುತೂಹಲದ ಸಂಗತಿ. ವಿಯೆಟ್ನಾಂ ದೇಶವು ತನ್ನ ಭೂಸೇನೆ ಮತ್ತು ನೌಕಾಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಪಡೆಯಲು 700 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಭಾರತವು ಬಹಳ ಬೇಗ ಚೀನಾವನ್ನು ಮೀರಿಸಿ ಬೆಳೆಯಬಹುದು: ಜಿಮ್ ರೋಜರ್ಸ್ ಭವಿಷ್ಯ

ಮಲೇಷ್ಯಾ ಬಳಿಕ ರಷ್ಯಾ ನಿರ್ಮಿತ ಸುಖೋಯ್ ಎಸ್​​ಯು-30 ಎಂಕೆಎಂ ಫೈಟರ್ ಜೆಟ್​​ಗಳಿದ್ದು, ಅವುಗಳೊಂದಿಗೆ ಬ್ರಹ್ಮೋಸ್ ಕ್ಷಿಪಣಿ ಸೇರಿಸಲು ಆಸಕ್ತಿ ತೋರಿದೆ. ಇನ್ನು, ಇಂಡೋನೇಷ್ಯಾ ದೇಶವು ಹೊಸ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿಗಾಗಿ 300 ಮಿಲಿಯನ್ ಡಾಲರ್ ಡೀಲ್ ಕುದುರಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್