AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Inflation: ಅಮೆರಿಕದ ಹಣದುಬ್ಬರ ಏಪ್ರಿಲ್​​ನಲ್ಲಿ ಶೇ. 2.3ಕ್ಕೆ ಇಳಿಕೆ; ಪಾಕಿಸ್ತಾನದ್ದು ಐತಿಹಾಸಿಕ ಕನಿಷ್ಠ ಮಟ್ಟ

US, India and Pakistan's inflation rate in 2025 April: ವಿಶ್ವದ ದೊಡ್ಡಣ್ಣ ಅಮೆರಿಕದ ಹಣದುಬ್ಬರ ದರ ಏಪ್ರಿಲ್ ತಿಂಗಳಲ್ಲಿ ಶೇ. 2.3 ಇದೆ. 2021ರ ಫೆಬ್ರುವರಿ ಬಳಿಕ ಯಾವುದೇ ತಿಂಗಳಲ್ಲಿ ಅಮೆರಿಕದಲ್ಲಿ ದಾಖಲಾದ ಕನಿಷ್ಠ ಹಣದುಬ್ಬರದ ದರ ಇದಾಗಿದೆ. ಭಾರತದ ಹಣದುಬ್ಬರ ಇದೇ ತಿಂಗಳಲ್ಲಿ ಶೇ. 3.16ರಷ್ಟಿದೆ. ಪಾಕಿಸ್ತಾನದ ಹಣದುಬ್ಬರ ಶೇ. 0.3 ಮಾತ್ರವೇ ದಾಖಲಾಗಿರುವುದು. ಇದು ಆ ದೇಶದ ಅತ್ಯಂತ ಕನಿಷ್ಠ ಬೆಲೆ ಏರಿಕೆ ಮಟ್ಟ.

US Inflation: ಅಮೆರಿಕದ ಹಣದುಬ್ಬರ ಏಪ್ರಿಲ್​​ನಲ್ಲಿ ಶೇ. 2.3ಕ್ಕೆ ಇಳಿಕೆ; ಪಾಕಿಸ್ತಾನದ್ದು ಐತಿಹಾಸಿಕ ಕನಿಷ್ಠ ಮಟ್ಟ
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2025 | 11:51 AM

Share

ನವದೆಹಲಿ, ಮೇ 14: ಅಮೆರಿಕದ ಹಣದುಬ್ಬರ (US Inflation) ಏಪ್ರಿಲ್ ತಿಂಗಳಲ್ಲಿ ಶೇ. 2.3ರಷ್ಟಿದೆ. ವಿವಿಧ ಆರ್ಥಿಕ ತಜ್ಞರು ಮಾಡಿದ್ದ ಅಂದಾಜಿಗಿಂತ ತುಸು ಕಡಿಮೆ ಮಟ್ಟದಲ್ಲಿದೆ. ಹಿಂದಿನ ತಿಂಗಳಲ್ಲಿ (ಮಾರ್ಚ್) ಹಣದುಬ್ಬರ ಶೇ. 2.4 ಇತ್ತು. ಈಗ 10 ಮೂಲಾಂಕಗಳಷ್ಟು ಇಳಿಕೆ ಆಗಿದೆ. ನಾಲ್ಕು ವರ್ಷದಲ್ಲೇ ಇದು ಅತ್ಯಂತ ಕಡಿಮೆ ಹಣದುಬ್ಬರ ದರ ಎನಿಸಿದೆ.

ಅಮೆರಿಕದಲ್ಲಿ ಏಪ್ರಿಲ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆ ಸೂಚ್ಯಂಕ ತುಸು ಏರಿಕೆಯಾಗಿದೆ. ಆದರೆ, ಇಂಧನ ಸೂಚ್ಯಂಕ ಕಡಿಮೆ ಆಗಿರುವುದು ಒಟ್ಟಾರೆ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಕೋರ್ ಇನ್​​ಫ್ಲೇಷನ್ ಅಥವಾ ಮುಖ್ಯ ವಸ್ತುಗಳ ಹಣದುಬ್ಬರ ದರ ಶೇ. 2.8ರಲ್ಲೇ ಮುಂದುವರಿದಿದೆ.

ಇದನ್ನೂ ಓದಿ: ಭಾರತದ ರೀಟೇಲ್ ಹಣದುಬ್ಬರ ಏಪ್ರಿಲ್​​ನಲ್ಲಿ ಶೇ. 3.16; ಇದು 6 ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ದರ

ಅಮೆರಿಕದಲ್ಲಿ ಹಣದುಬ್ಬರವನ್ನು ಶೇ. 2ಕ್ಕೆ ಕಟ್ಟಿ ನಿಲ್ಲಿಸುವ ಗುರಿ ಇದೆ. ಇದರಲ್ಲಿ ಹೆಚ್ಚೂಕಡಿಮೆ ಯಶಸ್ವಿಯಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಟ್ಯಾರಿಫ್ ಕ್ರಮಕ್ಕೆ ವಿರಾಮ ನೀಡಿರುವುದು, ಮತ್ತು ಈಗ ಹಣದುಬ್ಬರ ಸತತವಾಗಿ ಕೆಳಮಟ್ಟದಲ್ಲಿರುವುದು ಅಮೆರಿಕದಲ್ಲಿ ಬಡ್ಡಿದರ ಇಳಿಕೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಬಡ್ಡಿದರ ಇಳಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದ ಫೆಡರಲ್ ರಿಸರ್ವ್ ಈಗ ದರ ಇಳಿಸಬೇಕಾಗಬಹುದು ಎನ್ನಲಾಗುತ್ತಿದೆ.

ಭಾರತದ ಹಣದುಬ್ಬರವೂ ಇಳಿಕೆ

ಏಪ್ರಿಲ್ ತಿಂಗಳಲ್ಲಿ ಭಾರತದ ಹಣದುಬ್ಬರ ದರ ಶೇ. 3.16ರಷ್ಟಿದೆ. ಹಣದುಬ್ಬರವನ್ನು ಶೇ. 4ಕ್ಕೆ ಕಟ್ಟಿ ನಿಲ್ಲಿಸುವುದು ಆರ್​​ಬಿಐನ ಗುರಿಯಾಗಿದೆ. ಸತತ ಮೂರನೇ ತಿಂಗಳು ಈ ಮಟ್ಟಕ್ಕಿಂತ ಹಣದುಬ್ಬರ ಮೇಲೇರದಂತೆ ನೋಡಿಕೊಳ್ಳಲಾಗಿದೆ. ಆಹಾರವಸ್ತುಗಳ ಬೆಲೆ, ಅದರಲ್ಲೂ ತರಕಾರಿಗಳ ಬೆಲೆ ಏರಿಕೆ ಗಣನೀಯವಾಗಿ ತಗ್ಗಿರುವುದು ಹಣದುಬ್ಬರ ಇಳಿಕೆಗೆ ಕಾರಣ.

ಇದನ್ನೂ ಓದಿ: ಅಮೆರಿಕ, ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಬ್ರಹ್ಮೋಸ್ ಕ್ಷಿಪಣಿ ಪಡೆಯಲು ಆಸಕ್ತಿ

ಪಾಕಿಸ್ತಾನದ ಹಣದುಬ್ಬರ ಐತಿಹಾಸಿಕ ಕೆಳಮಟ್ಟದಲ್ಲಿ…

ಪಾಕಿಸ್ತಾನದಲ್ಲಿ ಏಪ್ರಿಲ್ ತಿಂಗಳ ಹಣದುಬ್ಬರ ಶೇ. 0.30ಕ್ಕೆ ಇಳಿದಿದೆ. ಮಾರ್ಚ್ ತಿಂಗಳಲ್ಲಿ ಶೇ. 0.70ರಷ್ಟಿತ್ತು. ಇದು ಪಾಕಿಸ್ತಾನದ ಸಾರ್ವಕಾಲಿಕ ಕನಿಷ್ಠ ಹಣದುಬ್ಬರ ದರ ಎನ್ನಲಾಗಿದೆ. ಇತ್ತೀಚಿನ ವರ್ಷಗಳಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ಶೇ. 20-40ರಷ್ಟಿತ್ತು. ಬಹಳ ಅಲ್ಪ ಸಮಯದಲ್ಲಿ ಪಾಕಿಸ್ತಾನವು ಹಣದುಬ್ಬರಕ್ಕೆ ಕಡಿವಾಣ ಹಾಕಲು ಸಫಲವಾಗಿದೆ. ಆರ್ಥಿಕ ನೀತಿಗಳಲ್ಲಿ ಸುಧಾರಣೆ, ಹಣಕಾಸು ಶಿಸ್ತು ಕಾಯ್ದುಕೊಂಡಿದ್ದು ಇತ್ಯಾದಿ ವಿವಿಧ ಅಂಶಗಳು ಈ ಯಶಸ್ಸಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್