ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?

Nominee vs Legal Heir: ಮ್ಯುಚುವಲ್ ಫಂಡ್, ಇನ್ಷೂರೆನ್ಸ್, ಎಫ್​ಡಿ, ಬ್ಯಾಂಕ್ ಅಕೌಂಟ್, ಪಿಎಫ್, ವಿವಿಧ ಹೂಡಿಕೆ ಯೋಜನೆಗಳು ಹೀಗೆ ಬಹಳಷ್ಟು ಕಾರ್ಯಗಳಿಗೆ ನಾಮಿನಿ ಅಗತ್ಯ. ಆದರೆ, ನಾಮಿನಿ ವಿಚಾರದಲ್ಲಿ ಒಂದು ತಪ್ಪು ಅಭಿಪ್ರಾಯ ನೆಲಸಿದೆ. ವ್ಯಕ್ತಿ ನಿಧನ ಹೊಂದಿದಾಗ ಅವರ ಆಸ್ತಿ ಎಲ್ಲವೂ ನಾಮಿನಿಗೆ ಹೋಗುತ್ತದೆ ಎಂದು ತಿಳಿಯಲಾಗಿದೆ. ವಾಸ್ತವದಲ್ಲಿ ಇದು ತಪ್ಪು ಅನಿಸಿಕೆ. ನಾಮಿನಿ ಆದಾಕ್ಷಣ ಹಣ ಅಥವಾ ಆಸ್ತಿಗೆ ವಾರಸುದಾರರಾಗುವುದಿಲ್ಲ. ಕಾನೂನು ಇರುವುದೇ ಬೇರೆ.

ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2023 | 6:02 PM

ನಮ್ಮ ಪ್ರತಿಯೊಂದು ಹಣಕಾಸು ಸ್ಕೀಮ್​ಗಳಿಗೆ ನಾಮಿನಿ (nominee) ಹೆಸರಿಸುವುದು ಕಡ್ಡಾಯ. ಇತ್ತೀಚೆಗೆ ಮ್ಯುಚುವಲ್ ಫಂಡ್​ಗಳಿಗೆ ನಾಮಿನಿ ಹೆಸರಿಸಲು ಡೆಡ್​ಲೈನ್ ಕೊಡಲಾಗಿತ್ತು. ಮ್ಯುಚುವಲ್ ಫಂಡ್ ಮಾತ್ರವಲ್ಲ, ಇನ್ಷೂರೆನ್ಸ್, ಎಫ್​ಡಿ, ಬ್ಯಾಂಕ್ ಅಕೌಂಟ್, ಪಿಎಫ್, ವಿವಿಧ ಹೂಡಿಕೆ ಯೋಜನೆಗಳು ಹೀಗೆ ಬಹಳಷ್ಟು ಕಾರ್ಯಗಳಿಗೆ ನಾಮಿನಿ ಅಗತ್ಯ. ಆದರೆ, ನಾಮಿನಿ ವಿಚಾರದಲ್ಲಿ ಒಂದು ತಪ್ಪು ಅಭಿಪ್ರಾಯ ನೆಲಸಿದೆ. ವ್ಯಕ್ತಿ ನಿಧನ ಹೊಂದಿದಾಗ ಅವರ ಆಸ್ತಿ ಎಲ್ಲವೂ ನಾಮಿನಿಗೆ ಹೋಗುತ್ತದೆ ಎಂದು ತಿಳಿಯಲಾಗಿದೆ. ವಾಸ್ತವದಲ್ಲಿ ಇದು ತಪ್ಪು ಅನಿಸಿಕೆ. ನಾಮಿನಿ ಆದಾಕ್ಷಣ ಹಣ ಅಥವಾ ಆಸ್ತಿಗೆ ವಾರಸುದಾರರಾಗುವುದಿಲ್ಲ. ಕಾನೂನು ಇರುವುದೇ ಬೇರೆ.

ಕಾನೂನು ಏನು ಹೇಳುತ್ತದೆ?

ನಮ್ಮ ಆಸ್ತಿಗೆ ನಾಮಿನಿ ಹೆಸರಿಸುವುದು ಸಾಮಾನ್ಯ. ಆದರೆ, ಕಾನೂನು ಪ್ರಕಾರ ನಾಮಿನಿ ಆದವರು ವ್ಯಕ್ತಿ ನಿಧನ ಹೊಂದಿದ ಬಳಿಕ ಅವರ ಆಸ್ತಿಯ ಪಾಲನೆಗೆ ಜವಾಬ್ದಾರರಾಗಿರುತ್ತಾರೆಯೇ ಹೊರತು ಆಸ್ತಿಗೆ ವಾರಸುದಾರ ಎನಿಸುವುದಿಲ್ಲ.

ಇದನ್ನೂ ಓದಿ: ಒಂದೇ ಸಣ್ಣ ತಂತ್ರ; 1 ಕೋಟಿ ಬದಲು 11 ಕೋಟಿ ರೂ ರಿಟರ್ನ್; ಇದು ಸ್ಟೆಪ್ ಅಪ್ ಹೂಡಿಕೆ ಸೂತ್ರ

ವ್ಯಕ್ತಿಯ ನಿಧನದ ಬಳಿಕ ಕಾನೂನು ಪ್ರಕಾರ ಯಾರು ವಾರಸುದಾರರಿರುತ್ತಾರೋ ಅವರಿಗೆ ಆ ಆಸ್ತಿಯನ್ನು ತಲುಪಿಸುವ ಜವಾಬ್ದಾರಿ ನಾಮಿನಿಗೆ ಇರುತ್ತದೆ ಅಷ್ಟೇ. ನಾಮಿನಿಯೇ ಕಾನೂನು ಪ್ರಕಾರ ವಾರಸುದಾರರಾಗಿದ್ದರೆ ಮಾತ್ರ ಅವರಿಗೆ ಆಸ್ತಿ ದಕ್ಕುತ್ತದೆ.

ನಾಮಿನಿ ಮತ್ತು ವಾರಸುದಾರರ ಉದಾಹರಣೆ

ನಾಮಿನಿ ಮತ್ತು ವಾರಸುದಾರರ ನಡುವೆ ಏನು ವ್ಯತ್ಯಾಸ ಎಂಬುದಕ್ಕೆ ಒಂದು ನಿದರ್ಶನ ನೀಡಬಹುದು. ಒಬ್ಬ ವ್ಯಕ್ತಿ ಮ್ಯೂಚುವಲ್ ಫಂಡ್​ನಲ್ಲಿ ಮಾಡಿದ ಹೂಡಿಕೆಗಳಿಗೆ ತನ್ನ ಚಿಕ್ಕಪ್ಪನ ಮಗನನ್ನು ನಾಮಿನಿಯನ್ನಾಗಿ ಮಾಡಿರುತ್ತಾನೆ. ಆದರೆ, ಆ ವ್ಯಕ್ತಿಗೆ ಮದುವೆ ಆಗುತ್ತದೆ. ಈ ಮಧ್ಯೆ ವ್ಯಕ್ತಿ ಮೃತಪಡುತ್ತಾನೆ. ಈ ಸಂದರ್ಭದಲ್ಲಿ ಕಾನೂನು ಪ್ರಕಾರ ಆ ವ್ಯಕ್ತಿಯ ಆಸ್ತಿಗೆ ಆತನ ಪತ್ನಿ ಮತ್ತು ಮಗಳು ವಾರಸುದಾರರಾಗುತ್ತಾರೆ. ನಾಮಿನಿ ಆಗಿದ್ದ ಚಿಕ್ಕಪ್ಪನ ಮಗನಿಗೆ ಈ ಆಸ್ತಿ ಮೇಲೆ ಹಕ್ಕು ಇರುವುದಿಲ್ಲ.

ಇದನ್ನೂ ಓದಿ: ಸಿಟಿಯಲ್ಲಿ ಸೈಟ್ ಕೊಳ್ಳಲು ಹೊರಟಿದ್ದೀರಾ? ಇಲ್ಲಿದೆ ನೀವು ನಿಗಾ ಇರಿಸಬೇಕಾದ ಅಂಶಗಳು

ವಾರಸುದಾರರಿಗೆ ಆಸ್ತಿ ನೀಡುವುದು ಬೇಡವೆಂದರೆ ಬೇರೇನು ಮಾರ್ಗ?

ಒಬ್ಬ ವ್ಯಕ್ತಿಗೆ ತನ್ನ ನಿಧನಾನಂತರ ಕುಟುಂಬ ಸದಸ್ಯರಿಗೆ ಆಸ್ತಿ ಹೋಗುವುದು ಬೇಡ ಎಂದನಿಸಿದರೆ ಅದಕ್ಕೆ ಇರುವ ಮಾರ್ಗೋಪಾಯವೆಂದರೆ ವಿಲ್. ಹೌದು, ವಿಲ್ ಬರೆದಿಟ್ಟು ಸತ್ತರೆ ಅವರಿಗೆ ಆಸ್ತಿ ಹಕ್ಕು ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ