ಸಿಟಿಯಲ್ಲಿ ಸೈಟ್ ಕೊಳ್ಳಲು ಹೊರಟಿದ್ದೀರಾ? ಇಲ್ಲಿದೆ ನೀವು ನಿಗಾ ಇರಿಸಬೇಕಾದ ಅಂಶಗಳು

Things to remember before buying property: ಭೂಮಿ ಮೇಲೆ ಹೂಡಿಕೆ ಮಾಡಿದರೆ ಲಾಭ ಹೌದು. ಹಾಗಂತ ಭೂಮಿ ಎಂದು ಸಿಕ್ಕಸಿಕ್ಕಿದ್ದನ್ನು ಖರೀದಿಸಿದರೆ ನಷ್ಟ ಮಾಡಿಕೊಳ್ಳುವ ಪ್ರಮೇಯ ಹೆಚ್ಚಿರುತ್ತದೆ. ಆಸ್ತಿಪತ್ರಗಳು ಸರಿಯಾಗಿವೆಯಾ, ಬಡವಾಣೆ ಅಧಿಕೃತವಾ, ಮೂಲಸೌಕರ್ಯ ವ್ಯವಸ್ಥೆ ಸರಿ ಇದೆಯಾ ಇತ್ಯಾದಿ ಕೆಲವಾರು ಅಂಶಗಳನ್ನು ಅವಲೋಕಿಸಿ ಆ ಬಳಿಕ ನಿವೇಶನ ಖರೀದಿ ಬಗ್ಗೆ ನಿರ್ಧಾರ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಈ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿದೆ...

ಸಿಟಿಯಲ್ಲಿ ಸೈಟ್ ಕೊಳ್ಳಲು ಹೊರಟಿದ್ದೀರಾ? ಇಲ್ಲಿದೆ ನೀವು ನಿಗಾ ಇರಿಸಬೇಕಾದ ಅಂಶಗಳು
ಆಸ್ತಿಪತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2023 | 12:51 PM

ವಾಸಕ್ಕೆ ನಮ್ಮದೇ ಒಂದು ಸ್ಥಳ ಹೊಂದಿರುವುದು (residential site) ಮತ್ತು ನಮ್ಮದೇ ಕನಸಿನ ಮನೆ ನಿರ್ಮಾಣ ಮಾಡುವುದು ಎಲ್ಲರ ಜೀವನದ ಪರಮಗುರಿಗಳಲ್ಲಿ ಒಂದು. ಹಾಗೆಯೇ, ಬೆಂಗಳೂರಿನಂಥ ನಗರಗಳಲ್ಲಿ ಭೂಮಿಯ ಮೇಲೆ ನಾವು ಮಾಡುವ ಹೂಡಿಕೆ ಅದ್ವಿತೀಯ ರಿಟರ್ನ್ ಕೊಡುತ್ತದೆ. ಅಂತೆಯೇ, ರಿಯಲ್ ಎಸ್ಟೇಟ್ ಕ್ಷೇತ್ರ ಹೂಡಿಕೆಗೆ (Investment) ಹೇಳಿ ಮಾಡಿಸಿದ್ದಾಗಿದೆ. ಆದರೆ, ಭೂಮಿ ಎಂದು ಸಿಕ್ಕಸಿಕ್ಕಿದ್ದನ್ನು ಖರೀದಿಸಿದರೆ ನಷ್ಟ ಮಾಡಿಕೊಳ್ಳುವ ಪ್ರಮೇಯ ಹೆಚ್ಚಿರುತ್ತದೆ. ಆಸ್ತಿಪತ್ರಗಳು (property documents) ಸರಿಯಾಗಿವೆಯಾ, ಬಡವಾಣೆ ಅಧಿಕೃತವಾ, ಮೂಲಸೌಕರ್ಯ ವ್ಯವಸ್ಥೆ ಸರಿ ಇದೆಯಾ ಇತ್ಯಾದಿ ಕೆಲವಾರು ಅಂಶಗಳನ್ನು ಅವಲೋಕಿಸಿ ಆ ಬಳಿಕ ನಿವೇಶನ ಖರೀದಿ ಬಗ್ಗೆ ನಿರ್ಧಾರ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಈ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿದೆ…

ಆಸ್ತಿಪತ್ರ ಸರಿ ಇದೆಯಾ ಮೊದಲು ಪರೀಕ್ಷಿಸಿ…

ನೀವು ಖರೀದಿಸಲಿರುವ ನಿವೇಶನದ ಕ್ರಯಪತ್ರ (sale deed), ಇಸಿ (EC- encumbrance certificate) ಇತ್ಯಾದಿ ಎಲ್ಲಾ ದಾಖಲೆಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಮೂಲ ಮಾಲೀಕರಿಂದ ಹಿಡಿದು ಈ ನಿವೇಶನ ಯಾರಿಗೆಲ್ಲಾ ಮಾರಾಟವಾಗಿದೆ ಅವೆಲ್ಲಾ ದಾಖಲೆಗಳೂ ಇರಬೇಕು. ಅಗತ್ಯ ಇರುವೆಡೆ ಮಾಲೀಕರ ಕುಟುಂಬ ಸದಸ್ಯರ ಸಹಿ ಇದೆಯಾ ಇವೆಲ್ಲವನ್ನೂ ನೋಡಬೇಕಾಗುತ್ತದೆ. ಕೆಲ ಸೇಲ್ ಡೀಡ್​ಗಳಲ್ಲಿ ಆಸ್ತಿ ಹಕ್ಕುಗಳನ್ನು ಪೂರ್ಣವಾಗಿ ಬಿಟ್ಟುಕೊಟ್ಟಿರುವುದಿಲ್ಲ. ಇದರಿಂದ ಮುಂದಕ್ಕೆ ಕಾನೂನು ತೊಂದರೆಗಳು ಏರ್ಪಡಬಹುದು. ಎಲ್ಲಾ ವರ್ಷಗಳ ಎನ್​ಕಂಬರೆನ್ಸ್ ಸರ್ಟಿಫಿಕೇಟ್​​ಗಳನ್ನು ಕಡ್ಡಾಯವಾಗಿ ಪಡೆದು ಪರಿಶೀಲಿಸಿ. ಈ ಎಲ್ಲಾ ದಾಖಲೆಗಳನ್ನು ವಕೀಲರಂತಹ ಕಾನೂನು ಪರಿಣಿತರಿಗೆ ಕೊಟ್ಟು ಸಲಹೆ ಪಡೆಯಬಹುದು.

ಇದನ್ನೂ ಓದಿ: ವಸತಿ ಬೆಲೆ ಏರಿಕೆ; ವಿಶ್ವದ ಟಾಪ್ 25 ನಗರಗಳಲ್ಲಿ ಮುಂಬೈ ಮತ್ತು ಬೆಂಗಳೂರು; ಮುಂಬೈ ಒಮ್ಮೆಗೇ 76 ಸ್ಥಾನ ಹೈಜಂಪ್

ಪ್ರದೇಶದ ಸಂಶೋಧನೆ ನಡೆಸಿ

ನೀವು ನಿವೇಶನ ಕೊಳ್ಳಬೇಕೆಂದಿರುವ ಜಾಗ ಇರುವ ಪ್ರದೇಶದ ಬಗ್ಗೆ ರಿಸರ್ಚ್ ನಡೆಸಿ. ಈ ಪ್ರದೇಶ ಮುಂದಿನ ದಿನಗಳಲ್ಲಿ ಎಷ್ಟರಮಟ್ಟಿಗೆ ಬೆಳವಣಿಗೆ ಹೊಂದಬಹುದು? ರಸ್ತೆ, ಸಾರಿಗೆ ಇತ್ಯಾದಿ ವ್ಯವಸ್ಥೆ ಎಷ್ಟಿರುತ್ತದೆ? ಏರಿಯಾದಲ್ಲಿ ನಿವೇಶನ ಬೆಲೆ ಎಷ್ಟಿದೆ? ರಾಜಕಾಲುವೆಯ ಒತ್ತುವರಿಯಾ? ಇದು ಹಿಂದೆ ಕೆರೆ ಪ್ರದೇಶವಾಗಿತ್ತಾ? ಇವೆಲ್ಲಾ ಪ್ರಶ್ನೆಗಳನ್ನು ಇಟ್ಟುಕೊಂಡು ಒಂದಷ್ಟು ಸಂಶೋಧನೆ ನಡೆಸಿ. ಆ ಬಳಿಕ ನಿವೇಶನ ಖರೀದಿ ಬಗ್ಗೆ ನಿರ್ಧಾರ ಮಾಡಿ.

ಭೂಪರಿವರ್ತನೆ ಆಗಿದೆಯಾ?

ಬೆಂಗಳೂರಿನಲ್ಲಿ ಬಹಳಷ್ಟು ನಿವೇಶನಗಳು ಅನಧಿಕೃತ ಲೇ ಔಟ್ ಅಥವಾ ರೆವೆನ್ಯೂ ನಿವೇಶನಗಳಾಗಿರುತ್ತವೆ. ಇವುಗಳಿಗೆ ಬಿಡಿಎ ಅಥವಾ ಬಿಎಂಆರ್​ಡಿಎ ಅನುಮೋದನೆ ಇರುವುದಿಲ್ಲ. ಭೂಪರಿವರ್ತನೆ (ಡಿಸಿ ಕನ್ವರ್ಷನ್) ಆಗಿಲ್ಲದೇ ಇರಬಹುದು. ಲೇಔಟ್​ಗೆ ಪ್ರಾಧಿಕಾರದ ಅನುಮೋದನೆ ಇಲ್ಲದಿದ್ದರೆ ಮುಂದಕ್ಕೆ ಕಾನೂನು ತೊಂದರೆ ಎದುರಾಗಬಹುದು. ಅನುಮೋದಿತ ರಿಯಲ್ ಎಸ್ಟೇಟ್ ಕಂಪನಿ ತಯಾರಿಸಿದ ಲೇಔಟ್​ನಲ್ಲಿ ನಿವೇಶನ ಖರೀದಿಸುವುದು ಸುರಕ್ಷಿತ.

ಇದನ್ನೂ ಓದಿ: ಬೆಂಗಳೂರಿನಷ್ಟೇ ದುಬಾರಿಯಾಗುತ್ತಿದೆ ಹೈದರಾಬಾದ್; ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳಿಗೆ ಬಲು ಬೇಡಿಕೆ

ಬ್ರೋಕರ್​ಗಳ ಬಗ್ಗೆ ಹುಷಾರ್..!

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬ್ರೋಕರ್​ಗಳು ಒಳ್ಳೆಯ ಲಾಭ ಮಾಡಿಕೊಳ್ಳುತ್ತಾರೆ. ಮಾಲೀಕರು ಮತ್ತು ಗ್ರಾಹಕರು ಇಬ್ಬರಿಂದಲೂ ಇವರು ದಂಡಿಯಾಗಿ ಕಮಿಷನ್ ಪಡೆಯುತ್ತಾರೆ. ಶೇ. 2ರಿಂದ 5ರವರೆಗೂ ಇವರು ಕಮಿಷನ್ ಪಡೆಯಬಹುದು. ಅಥವಾ ಮೂಲಬೆಲೆಗಿಂತ ಬಹಳ ಹೆಚ್ಚುಬೆಲೆಗೆ ನಿವೇಶನ ಮಾರಾಟ ಮಾಡಿಸಿ ಹೆಚ್ಚುವರಿ ಹಣದಲ್ಲಿ ಸಿಂಹಪಾಲು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ