ವಸತಿ ಬೆಲೆ ಏರಿಕೆ; ವಿಶ್ವದ ಟಾಪ್ 25 ನಗರಗಳಲ್ಲಿ ಮುಂಬೈ ಮತ್ತು ಬೆಂಗಳೂರು; ಮುಂಬೈ ಒಮ್ಮೆಗೇ 76 ಸ್ಥಾನ ಹೈಜಂಪ್
Housing Price Rise: ನೈಟ್ ಫ್ರಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಪ್ರಕಟಿಸಿರುವ 2023ರ ಎರಡನೇ ಕ್ವಾರ್ಟರ್ನ ಗ್ಲೋಬಲ್ ರೆಸಿಡೆನ್ಷಿಯಲ್ ಸಿಟೀಸ್ ಇಂಡೆಕ್ಸ್ ಪಟ್ಟಿಯಲ್ಲಿ ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ 19 ಮತ್ತು 22ನೇ ಸ್ಥಾನ ಪಡೆದಿವೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ಗೆ ಹೋಲಿಸಿದರೆ ವಸತಿ ಬೆಲೆಗಳು ಎಷ್ಟು ಹೆಚ್ಚಾಗಿವೆ ಎಂಬುದನ್ನು ಈ ಸೂಚ್ಯಂಕ ತೋರಿಸುತ್ತದೆ.
ನವದೆಹಲಿ, ಅಕ್ಟೋಬರ್ 15: ಭಾರತೀಯ ನಗರಗಳಲ್ಲಿ ವಾಸದ ಮನೆಗಳಿಗೆ ಬಹಳ ಬೇಡಿಕೆ ಇದೆ. ಅದರಲ್ಲೂ ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್, ಚೆನ್ನೈನಂತಹ ನಗರಗಳಲ್ಲಿ ಮನೆಗಳ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ವಸತಿ ಬೆಲೆಗಳು (housing prices) ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಆಗಿವೆ. ಈ ಕ್ಯಾಲೆಂಡರ್ ವರ್ಷ ಎರಡನೇ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ವಸತಿ ಬೆಲೆ ಏರಿಕೆಯ ಜಾಗತಿಕ ಸೂಚ್ಯಂಕದಲ್ಲಿ ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ 19 ಮತ್ತು 22 ನೇ ಸ್ಥಾನಕ್ಕೆ ಜಿಗಿದಿವೆ. ಮುಂಬೈಯಂತೂ 95ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಹೈಜಂಕಪ್ ಮಾಡಿದೆ. ಕಳೆದ ಬಾರಿಯ ಸೂಚ್ಯಂಕ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿದ್ದ ಬೆಂಗಳೂರು 22ನೇ ಸ್ಥಾನಕ್ಕೆ ಏರಿದೆ.
ಇದು ನೈಟ್ ಫ್ರಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಪ್ರಕಟಿಸಿದ ವರದಿಯಿಂದ ತಿಳಿದುಬಂದಿದೆ. ‘ಗ್ಲೋಬಲ್ ರೆಸಿಡೆನ್ಷಿಯಲ್ ಸಿಟೀಸ್ ಇಂಡೆಕ್ಸ್’ ಪಟ್ಟಿ ಪ್ರಕಾರ, ಬೆಂಗಳೂರಿನಲ್ಲಿ ಕಳೆದ ವರ್ಷದ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ಗೆ ಹೋಲಿಸಿದರೆ ಈ ವರ್ಷದಲ್ಲಿ ವಸತಿ ಬೆಲೆಗಳಲ್ಲಿ ಶೇ. 5.3ರಷ್ಟು ಏರಿಕೆ ಆಗಿದೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ ಇಎಸ್ಐ ಸ್ಕೀಮ್ಗೆ 19.42 ಲಕ್ಷ ಹೊಸ ಸದಸ್ಯರ ಸೇರ್ಪಡೆ; 9 ಲಕ್ಷಕ್ಕೂ ಹೆಚ್ಚು ಉದ್ಯೋಗಸೃಷ್ಟಿ
ವಸತಿ ಬೆಲೆ ಏರಿಕೆಯಲ್ಲಿ ಅಗ್ರಗಣ್ಯ ಭಾರತೀಯ ನಗರಗಳು ಹಾಗೂ ಜಾಗತಿಕ ಶ್ರೇಯಾಂಕ
- ಮುಂಬೈ: ಶೇ. 6ರಷ್ಟು ಬೆಲೆ ಏರಿಕೆ- ಜಾಗತಿಕ ಪಟ್ಟಿಯಲ್ಲಿ 19ನೇ ಸ್ಥಾನ
- ಬೆಂಗಳೂರು: ಶೇ. 5.3ರಷ್ಟು ಬೆಲೆ ಏರಿಕೆ- ಜಾಗತಿಕ ಪಟ್ಟಿಯಲ್ಲಿ 22 ನೇ ಸ್ಥಾನ
- ನವದೆಹಲಿ: ಶೇ. 4.5 ರಷ್ಟು ಬೆಲೆ ಏರಿಕೆ- ಜಾಗತಿಕ ಪಟ್ಟಿಯಲ್ಲಿ 25ನೇ ಸ್ಥಾನ
- ಚೆನ್ನೈ: ಶೇ. 2.5ರಷ್ಟು ಬೆಲೆ ಏರಿಕೆ- ಜಾಗತಿಕ ಪಟ್ಟಿಯಲ್ಲಿ 39ನೇ ಸ್ಥಾನ
- ಕೋಲ್ಕತಾ: ಶೇ. 2.5ರಷ್ಟು ಬೆಲೆ ಏರಿಕೆ- ಜಾಗತಿಕ ಪಟ್ಟಿಯಲ್ಲಿ 40ನೇ ಸ್ಥಾನ
ಜಾಗತಿಕವಾಗಿ ಅತಿಹೆಚ್ಚು ವಸತಿ ಬೆಲೆ ಏರಿಕೆ ಕಂಡ ನಗರಗಳಿವು
- ಅಂಕಾರ, ಟರ್ಕಿ: ಶೇ. 105.9ರಷ್ಟು ಬೆಲೆ ಏರಿಕೆ
- ಇಸ್ಲಾಂಬುಲ್, ಟರ್ಕಿ: ಶೇ. 85.1 ರಷ್ಟು ಬೆಲೆ ಏರಿಕೆ
- ಸ್ಟಾಕ್ಹಾಮ್, ಸ್ವೀಡನ್: ಶೇ. 14.3ರಷ್ಟು ಬೆಲೆ ಏರಿಕೆ
ಇದನ್ನೂ ಓದಿ: ಬೆಂಗಳೂರಿನಷ್ಟೇ ದುಬಾರಿಯಾಗುತ್ತಿದೆ ಹೈದರಾಬಾದ್; ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳಿಗೆ ಬಲು ಬೇಡಿಕೆ
ಹೌಸಿಂಗ್ ಪ್ರೈಸ್ ಇಂಡೆಕ್ಸ್ನ ದೇಶವಾರು ಪಟ್ಟಿ
- ಟರ್ಕಿ: ಶೇ. 96ರಷ್ಟು ಬೆಲೆ ಏರಿಕೆ
- ಲಿಥುವೇನಿಯಾ: ಶೇ 15.3ರಷ್ಟು ಬೆಲೆ ಏರಿಕೆ
- ಕ್ರೊವೇಶಿಯಾ: ಶೇ. 14ರಷ್ಟು ಬೆಲೆ ಏರಿಕೆ
- ಗ್ರೀಸ್: ಶೇ. 14ರಷ್ಟು ಬೆಲೆ ಏರಿಕೆ
- ನಾರ್ತ್ ಮೆಸಿಡೋನಿಯಾ: ಶೇ. 12.9ರಷ್ಟು ಬೆಲೆ ಏರಿಕೆ
- ಮೆಕ್ಸಿಕೋ: ಶೇ. 11.5ರಷ್ಟು ಬೆಲೆ ಏರಿಕೆ
- ಕೊಲಂಬಿಯಾ: ಶೇ. 10.1ರಷ್ಟು ಬೆಲೆ ಏರಿಕೆ
- ಹಂಗರಿ: ಶೇ. 9.7ರಷ್ಟು ಬೆಲೆ ಏರಿಕೆ
- ಬಲ್ಗೇರಿಯಾ: ಶೇ. 9.5ರಷ್ಟು ಬೆಲೆ ಏರಿಕೆ
- ಎಸ್ಟೋನಿಯಾ: ಶೇ. 9.2ರಷ್ಟು ಬೆಲೆ ಏರಿಕೆ
ಈ ಮೇಲಿನದ್ದು ಹಿಂದಿನ ವರ್ಷದ ಎರಡನೇ ಕ್ವಾರ್ಟರ್ಗೆ ಹೋಲಿಸಿದರೆ ಕಂಡು ಬಂದಿರುವ ಬೆಲೆ ಏರಿಕೆಯ ಆಧಾರದಲ್ಲಿ ಮಾಡಲಾದ ಪಟ್ಟಿ. ಭಾರತದಲ್ಲಿ ವಸತಿ ಬೆಲೆಳು ಶೇ. 5.1ರಷ್ಟು ಏರಿವೆ. ಇದರೊಂದಿಗೆ ಪಟ್ಟಿಯಲ್ಲಿ ಭಾರತ 22ನೇ ಸ್ಥಾನ ಪಡೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ