ಒಂದೇ ತಿಂಗಳಲ್ಲಿ ಇಎಸ್ಐ ಸ್ಕೀಮ್ಗೆ 19.42 ಲಕ್ಷ ಹೊಸ ಸದಸ್ಯರ ಸೇರ್ಪಡೆ; 9 ಲಕ್ಷಕ್ಕೂ ಹೆಚ್ಚು ಉದ್ಯೋಗಸೃಷ್ಟಿ
ESIC payroll data: ಇಎಸ್ಐಸಿಯ ಸಂಬಳದ ದತ್ತಾಂಶದ ಪ್ರಕಾರ ಆಗಸ್ಟ್ ತಿಂಗಳಲ್ಲಿ 19.42 ಲಕ್ಷ ಹೊಸ ಉದ್ಯೋಗಿಗಳ ಸೇರ್ಪಡೆಯಾಗಿದೆ. 24,849 ಹೊಸ ಸಂಸ್ಥೆಗಳು ಇಎಸ್ಐಸಿಯ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ಇದರಿಂದ ಆಗಸ್ಟ್ ತಿಂಗಳಲ್ಲಿ ಯೋಜನೆಗೆ ಹೆಚ್ಚು ಮಂದಿ ಸೇರ್ಪಡೆಯಾಗಲು ಸಹಾಯಕವಾಗಿದೆ. ಆಗಸ್ಟ್ ತಿಂಗಳಲ್ಲಿ ಒಟ್ಟು ಇಎಸ್ಐಸಿಯ ಸ್ಕೀಮ್ಗೆ ಸೇರ್ಪಡೆಯಾದ 19.42 ಲಕ್ಷ ಹೊಸ ಸದಸ್ಯರ ಪೈಕಿ 25 ವರ್ಷದವರೆಗಿನ ವಯಸ್ಸಿನ 9.22 ಲಕ್ಷ ಉದ್ಯೋಗಿಗಳದ್ದು ಹೊಸ ನೊಂದಣಿಯಾಗಿದೆ ಎನ್ನಲಾಗಿದೆ.
ನವದೆಹಲಿ, ಅಕ್ಟೋಬರ್ 15: ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC– employees state insurance corporation) ಸಂಸ್ಥೆ ನಡೆಸುವ ಇಎಸ್ಐ ಸ್ಕೀಮ್ನ ಆಗಸ್ಟ್ ತಿಂಗಳ ದತ್ತಾಂಶ ಪ್ರಕಟವಾಗಿದ್ದು, 9 ಲಕ್ಷಕ್ಕೂ ಹೆಚ್ಚಿ ಹೊಸ ಉದ್ಯೋಗಸೃಷ್ಟಿಯಾಗಿರುವುದು ತಿಳಿದುಬಂದಿದೆ. ಆಗಸ್ಟ್ ತಿಂಗಳಲ್ಲಿ 19.42 ಲಕ್ಷ ಹೊಸ ಸದಸ್ಯರ ಸೇರ್ಪಡೆಯಾಗಿದೆ. 9.22 ಲಕ್ಷ ಲಕ್ಷ ಹೊಸ ಉದ್ಯೋಗಿಗಳ ನೊಂದಣಿಯಾಗಿದೆ.
‘ಇಎಸ್ಐಸಿಯ ಸಂಬಳದ ದತ್ತಾಂಶದ (provisional payroll data) ಪ್ರಕಾರ ಆಗಸ್ಟ್ ತಿಂಗಳಲ್ಲಿ 19.42 ಲಕ್ಷ ಹೊಸ ಉದ್ಯೋಗಿಗಳ ಸೇರ್ಪಡೆಯಾಗಿದೆ. 24,849 ಹೊಸ ಸಂಸ್ಥೆಗಳು ಇಎಸ್ಐಸಿಯ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ಇದರಿಂದ ಆಗಸ್ಟ್ ತಿಂಗಳಲ್ಲಿ ಯೋಜನೆಗೆ ಹೆಚ್ಚು ಮಂದಿ ಸೇರ್ಪಡೆಯಾಗಲು ಸಹಾಯಕವಾಗಿದೆ.
ಇದನ್ನೂ ಓದಿ: ದಿನಕ್ಕೆ 210 ರೂ ಕಟ್ಟಿರಿ; ತಿಂಗಳಿಗೆ 5,000 ರೂ ಪಿಂಚಣಿ ಪಡೆಯಿರಿ; ಇದು ಎಪಿವೈ ಸ್ಕೀಮ್ ಅನುಕೂಲ
‘ಆಗಸ್ಟ್ ತಿಂಗಳಲ್ಲಿ ಒಟ್ಟು ಇಎಸ್ಐಸಿಯ ಸ್ಕೀಮ್ಗೆ ಸೇರ್ಪಡೆಯಾದ 19.42 ಲಕ್ಷ ಹೊಸ ಸದಸ್ಯರ ಪೈಕಿ 25 ವರ್ಷದವರೆಗಿನ ವಯಸ್ಸಿನ 9.22 ಲಕ್ಷ ಉದ್ಯೋಗಿಗಳದ್ದು ಹೊಸ ನೊಂದಣಿಯಾಗಿದೆ. ಒಟ್ಟು ಸದಸ್ಯರಲ್ಲಿ ಇವರ ಪ್ರಮಾಣ ಶೇ. 47.48ರಷ್ಟಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮೊನ್ನೆ (ಅ. 13) ಮಾಹಿತಿ ನೀಡಿದೆ.
ಇನ್ನು, ಈ ದತ್ತಾಂಶದ ಪ್ರಕಾರ ಆಗಸ್ಟ್ ತಿಂಗಳಲ್ಲಿ ಇಎಸ್ಐಸಿಯ ಸ್ಕೀಮ್ನಲ್ಲಿ ಸೇರ್ಪಡೆಯಾದ ಮಹಿಳಾ ಸದಸ್ಯರ ಸಂಖ್ಯೆ 3.73 ಲಕ್ಷ ಇದೆ. 75 ಮಂದಿ ತೃತೀಯ ಲಿಂಗಿಗಳಿದ್ದಾರೆ.
ಇದನ್ನೂ ಓದಿ: ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲವಾ? ಕ್ರೆಡಿಟ್ ಸ್ಕೋರ್ ಹೋದೀತೆಂಬ ಭಯವಾ? ನಿಮ್ಮ ಮುಂದಿರುವ ಆಯ್ಕೆಗಳು ಇಲ್ಲಿವೆ
ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಸಂಸ್ಥೆಯ ಯೋಜನೆ ಏನು?
ತನ್ನಲ್ಲಿ ನೊಂದಣಿಯಾದ ಸಂಸ್ಥೆಯ ಉದ್ಯೋಗಿಗಳಿಗೆ ಇದು ಇನ್ಷೂರೆನ್ಸ್ ಸ್ಕೀಮ್ ಒದಗಿಸುತ್ತದೆ. ದೇಶಾದ್ಯಂತ ಇರುವ ಇಎಸ್ಐ ಆಸ್ಪತ್ರೆಗಳಲ್ಲಿ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರೆಲ್ಲರಿಗೂ ಉಚಿತ ವೈದ್ಯಕೀಯ ಚಿಕಿತ್ಸೆ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ