ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

Difference between Bank and NBFC: ಬ್ಯಾಂಕುಗಳು ಆರ್​ಬಿಐನ ಹಲವು ಕಟ್ಟುಪಾಡು ಮತ್ತು ಸೌಲಭ್ಯಗಳಿಗೆ ಒಳಪಟ್ಟಿರುತ್ತವೆ. ಆದರೆ, ಎನ್​ಬಿಎಫ್​ಸಿಗಳಿಗೆ ಅಷ್ಟು ಕಟ್ಟುಪಾಡು ಮತ್ತು ಸೌಲಭ್ಯಗಳು ಇರುವುದಿಲ್ಲ. ಉದಾಹರಣೆಗೆ, ಬ್ಯಾಂಕುಗಳು ಕಾಸಾ (ಸಿಎಎಸ್​ಎ) ಖಾತೆಗಳನ್ನು ಗ್ರಾಹಕರಿಗೆ ನೀಡಬಹುದು. ಅಂದರೆ, ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಳನ್ನು ಆಫರ್ ಮಾಡಬಹುದು. ಬ್ಯಾಂಕುಗಳಿಗೆ ಕಡಿಮೆ ದರದಲ್ಲಿ ಬಂಡವಾಳ ಸಂಗ್ರಹಿಸಲು ಈ ಖಾತೆಗಳೇ ಮೂಲವಾಗಿರುತ್ತವೆ.

ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?
ಬ್ಯಾಂಕಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2023 | 4:12 PM

ಸಾಮಾನ್ಯ ಹೂಡಿಕೆ ಯೋಜನೆಗಳಲ್ಲಿ ಎಫ್​ಡಿ ಮುಂಚೂಣಿಯಲ್ಲಿದೆ. ಹೆಚ್ಚಿನ ಜನರು ಈಗಲೂ ನಿಶ್ಚಿತ ಠೇವಣಿಗಳಲ್ಲಿ (fixed deposits) ಹೂಡಿಕೆಗೆ ಆದ್ಯತೆ ಕೊಡುತ್ತಾರೆ. ಆರ್​ಬಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಭಾರತದ ವಿವಿಧ ಬ್ಯಾಂಕುಗಳಲ್ಲಿ 160 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹಣ ಎಫ್​ಡಿಗಳಲ್ಲಿ ಹೂಡಿಕೆ ಆಗಿವೆಯಂತೆ. ಈಗ ಎಫ್​ಡಿಗಳಿಗೆ ಬ್ಯಾಂಕುಗಳು ಶೇ. 6.2ರಿಂದ ಶೇ. 8ರವರೆಗೂ ಬಡ್ಡಿ ಕೊಡುತ್ತವೆ. ಆದರೆ, ಕೆಲ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಥವಾ ಎನ್​ಬಿಎಫ್​​ಸಿಗಳು (NBFCs) ಶೇ. 10ರವರೆಗೂ ಬಡ್ಡಿ ಆಫರ್ ಮಾಡುವುದನ್ನು ನೀವು ಗಮನಿಸಿರಬಹುದು. ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಹೆಚ್ಚು ಇರುವುದು ಯಾಕೆ? ಈ ಪ್ರಶ್ನೆಗೆ ಉತ್ತರ ತಿಳಿಯಲು ಎನ್​ಬಿಎಫ್​ಸಿ ಮತ್ತು ಬ್ಯಾಂಕ್ ನಡುವಿನ ವ್ಯತ್ಯಾಸ ಏನು ಎಂಬುದು ಗೊತ್ತಿರಬೇಕು.

ಎನ್​ಬಿಎಫ್​ಸಿ ಮತ್ತು ಬ್ಯಾಂಕ್ ಮಧ್ಯೆ ಏನು ವ್ಯತ್ಯಾಸ?

ಕೆಲ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡಲು ಅನುವಾಗಬೇಕೆನ್ನುವುದು ಎನ್​ಬಿಎಫ್​ಸಿಗಳ ಉಗಮಕ್ಕೆ ನಾಂದಿ ಹಾಡಿತ್ತು. ಬ್ಯಾಂಕುಗಳ ಹಲವು ಚಟುವಟಿಕೆಗಳನ್ನು ಎನ್​ಬಿಎಫ್​ಸಿಗಳು ನಡೆಸುತ್ತವೆ. ಗ್ರಾಹಕರಿಗೆ ಸಾಲ ಒದಗಿಸುತ್ತವೆ.

ಬ್ಯಾಂಕುಗಳು ಆರ್​ಬಿಐನ ಹಲವು ಕಟ್ಟುಪಾಡು ಮತ್ತು ಸೌಲಭ್ಯಗಳಿಗೆ ಒಳಪಟ್ಟಿರುತ್ತವೆ. ಆದರೆ, ಎನ್​ಬಿಎಫ್​ಸಿಗಳಿಗೆ ಅಷ್ಟು ಕಟ್ಟುಪಾಡು ಮತ್ತು ಸೌಲಭ್ಯಗಳು ಇರುವುದಿಲ್ಲ. ಉದಾಹರಣೆಗೆ, ಬ್ಯಾಂಕುಗಳು ಕಾಸಾ (CASA- Current Account and Savings Account) ಖಾತೆಗಳನ್ನು ಗ್ರಾಹಕರಿಗೆ ನೀಡಬಹುದು. ಅಂದರೆ, ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಳನ್ನು ಆಫರ್ ಮಾಡಬಹುದು. ಬ್ಯಾಂಕುಗಳಿಗೆ ಕಡಿಮೆ ದರದಲ್ಲಿ ಬಂಡವಾಳ ಸಂಗ್ರಹಿಸಲು ಈ ಖಾತೆಗಳೇ ಮೂಲವಾಗಿರುತ್ತವೆ. ಯಾಕೆಂದರೆ ಚಾಲ್ತಿ ಖಾತೆಯಲ್ಲಿರುವ ಹಣಕ್ಕೆ ಬ್ಯಾಂಕ್ ಯಾವ ಬಡ್ಡಿ ಕೊಡುವುದಿಲ್ಲ. ಸೇವಿಂಗ್ಸ್ ಅಕೌಂಟ್​ನಲ್ಲಿರುವ ಹಣಕ್ಕೆ ಅಬ್ಬಬ್ಬಾ ಎಂದರೆ ಗರಿಷ್ಠ ಶೇ. 4ರವರೆಗೂ ಮಾತ್ರವೇ ಬಡ್ಡಿ ನೀಡಬಹುದು. ಜನರ ಉಳಿತಾಯ ಹಣದ ಹೆಚ್ಚಿನ ಭಾಗವು ಈ ಎಸ್​ಬಿ ಖಾತೆಗಳಲ್ಲಿ ಇರುತ್ತವೆ. ಹೀಗಾಗಿ ಬ್ಯಾಂಕುಗಳಿಗೆ ಸುಲಭವಾಗಿ ಬಂಡವಾಳ ಸಿಗುತ್ತದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?

ಎನ್​​ಬಿಎಫ್​ಸಿಗಳಿಗೆ ಈ ಭಾಗ್ಯ ಇರುವುದಿಲ್ಲ. ಕರೆಂಟ್ ಅಕೌಂಟ್ ಆಗಲೀ ಸೇವಿಂಗ್ಸ್ ಅಕೌಂಟ್ ಆಗಲೀ ಎನ್​ಬಿಎಫ್​ಸಿಗಳು ತೆರೆಯಲು ಅವಕಾಶ ಇರುವುದಿಲ್ಲ. ಬಂಡವಾಳ ಸಂಗ್ರಹಿಸಲು ಇವು ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಸಾಲಪತ್ರಗಳು ಒಂದು ಪ್ರಮುಖ ವಿಧಾನ. ಹಾಗೆಯೇ ವಿದೇಶೀ ಬಂಡವಾಳ ಪಡೆಯುವ ಅವಕಾಶ ಇರುತ್ತದೆ. ಇವೆಲ್ಲವೂ ಕೂಡ ಅಧಿಕ ಬಡ್ಡಿ ಬೇಡುವ ವಿಧಾನಗಳು. ಇದರ ಜೊತೆಗೆ ಎನ್​ಬಿಎಫ್​ಸಿಗಳು ಫಿಕ್ಸೆಡ್ ಡೆಪಾಸಿಟ್ ಮೂಲಕವೂ ಬಂಡವಾಳ ಪಡೆಯುತ್ತವೆ. ಎಫ್​ಡಿಗಳನ್ನು ಆಕರ್ಷಿಸಲು ಬ್ಯಾಂಕುಗಳಿಗಿಂತ ಹೆಚ್ಚು ಬಡ್ಡಿ ಆಫರ್ ಮಾಡುವುದು ಎನ್​ಬಿಎಫ್​ಸಿಗಳಿಗೆ ಅನಿವಾರ್ಯ.

ಎನ್​ಬಿಎಫ್​ಸಿಗಳ ವಿಶ್ವಾಸಾರ್ಹತೆ ಪರಿಶೀಲಿಸುವುದು ಹೇಗೆ?

ಬ್ಯಾಂಕುಗಳಾದರೆ ಆರ್​ಬಿಐನ ಗ್ಯಾರಂಟಿ ಇದೆ. 5 ಲಕ್ಷ ರೂವರೆಗಿನ ಠೇವಣಿಗಳಿಗೆ ಆರ್​ಬಿಐ ಇನ್ಷೂರೆನ್ಸ್ ಒದಗಿಸುತ್ತದೆ. ಅಂದರೆ ನೀವು ಬ್ಯಾಂಕ್​ನಲ್ಲಿ ಇಡುವ 5 ಲಕ್ಷ ರೂ ಹಣಕ್ಕೆ ಗ್ಯಾರಂಟಿ ಇರುತ್ತದೆ. ಈ ಗ್ಯಾರಂಟಿಯು ಎನ್​ಬಿಎಫ್​ಸಿ ವಿಚಾರದಲ್ಲಿ ಇರುವುದಿಲ್ಲ.

ಇದನ್ನೂ ಓದಿ: ರೆಪೋ ದರ ಏರಿಕೆಗೆ ಅನುಗುಣವಾಗಿ ಬ್ಯಾಂಕ್ ಠೇವಣಿ ದರ ಏರಿಲ್ಲವಾ? ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್​ಗಳಲ್ಲಿ ಹೆಚ್ಚು ಬಡ್ಡಿ ಎಲ್ಲಿ ಸಿಗುತ್ತದೆ?

ನೀವು ಅಧಿಕ ಮೊತ್ತದ ಹಣವನ್ನು ಎನ್​ಬಿಎಫ್​ಸಿಯಲ್ಲಿ ಹೂಡಿಕೆ ಮಾಡಬೇಕೆಂದಿದ್ದರೆ ಮೊದಲು ಆ ಸಂಸ್ಥೆಯ ಕ್ರೆಡಿಟ್ ರೇಟಿಂಗ್ ಪರಿಶೀಲಿಸಬೇಕಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು ಎನ್​ಬಿಎಫ್​ಸಿಗಳಿಗೆ ರೇಟಿಂಗ್ ನೀಡುತ್ತವೆ. ಮೂಡೀಸ್ ಸಂಸ್ಥೆಯ ಕ್ರಿಸಿಲ್ ಸೇರಿದಂತೆ ವಿವಿಧ ರೇಟಿಂಗ್ ಏಜೆನ್ಸಿಗಳು ಈ ಸೇವೆ ಒದಗಿಸುತ್ತವೆ. ಆದಿತ್ಯ ಬಿರ್ಲಾ ಫೈನಾನ್ಸ್ ಇತ್ಯಾದಿ ಎನ್​ಬಿಎಫ್​ಸಿಗಳಿಗೆ ಟಾಪ್ ರೇಟಿಂಗ್ ಇದೆ. ಕಡಿಮೆ ರೇಟಿಂಗ್ ಇರುವ ಎನ್​ಬಿಎಫ್​ಸಿಗಳಲ್ಲಿ ನೀವು ಹಣ ಇರಿಸುವುದು ಸುರಕ್ಷಿತವಲ್ಲ ಎಂಬುದು ಮೇಲ್ನೋಟಕ್ಕೆಯೇ ಗೊತ್ತಾಗಿಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ