Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಪೋ ದರ ಏರಿಕೆಗೆ ಅನುಗುಣವಾಗಿ ಬ್ಯಾಂಕ್ ಠೇವಣಿ ದರ ಏರಿಲ್ಲವಾ? ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್​ಗಳಲ್ಲಿ ಹೆಚ್ಚು ಬಡ್ಡಿ ಎಲ್ಲಿ ಸಿಗುತ್ತದೆ?

Bank FDs vs Post Office Deposits: ಠೇವಣಿ ಸ್ಕೀಮ್​ಗಳನ್ನು ಬ್ಯಾಂಕುಗಳಷ್ಟೇ ಅಲ್ಲ ಅಂಚೆ ಕಚೇರಿಗಳೂ ನೀಡುತ್ತವೆ. ಪೋಸ್ಟ್ ಆಫೀಸ್​ನಲ್ಲಿ ಡೆಪಾಸಿಟ್ ದರಗಳು ಶೇ. 7.5ರವರೆಗೂ ಇವೆ. ಇನ್ನೊಂದೆಡೆ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಶೇ. 8ರ ಆಸುಪಾಸಿನವರೆಗೆ ಬಡ್ಡಿದರ ನೀಡಲಾಗುತ್ತಿದೆ. ಪೋಸ್ಟ್ ಆಫೀಸ್​ನಲ್ಲಿ ಒಂದು ವರ್ಷದ ಡೆಪಾಸಿಟ್​ಗೆ ಶೇ. 6.9ರಷ್ಟು ಬಡ್ಡಿ ಇದ್ದರೆ, ಎರಡು ಮತ್ತು ಮೂರು ವರ್ಷದ ಸ್ಕೀಮ್​ಗೆ ಶೇ 7, ಐದು ವರ್ಷದ ಡೆಪಾಸಿಟ್​ಗೆ ಗರಿಷ್ಠ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.

ರೆಪೋ ದರ ಏರಿಕೆಗೆ ಅನುಗುಣವಾಗಿ ಬ್ಯಾಂಕ್ ಠೇವಣಿ ದರ ಏರಿಲ್ಲವಾ? ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್​ಗಳಲ್ಲಿ ಹೆಚ್ಚು ಬಡ್ಡಿ ಎಲ್ಲಿ ಸಿಗುತ್ತದೆ?
ಡೆಪಾಸಿಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2023 | 7:07 PM

ಆರ್​ಬಿಐ ಕಳೆದ ಆರೇಳು ತಿಂಗಳಿಂದ ರೆಪೋ ದರ ಅಥವಾ ಬಡ್ಡಿದರ (repo rate) ಏರಿಕೆ ಮಾಡಿಲ್ಲ. ಮೂರು ದ್ವೈಮಾಸಿಕ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿ ಮುಂದುವರಿಸಲಾಗಿದೆ. ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ನೀಡುವ ಬಡ್ಡಿಯಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಪೋಸ್ಟ್ ಆಫೀಸ್​ನ ಡೆಪಾಸಿಟ್ ಸ್ಕೀಮ್​ನ ಬಡ್ಡಿಯಲ್ಲಿ ಬದಲಾವಣೆ ಮಾಡಲಾಗಿಲ್ಲ. ಇನ್ನು ಬ್ಯಾಂಕ್​ನಲ್ಲಿ ಠೇವಣಿ ದರಗಳಲ್ಲಿ ಆಗಾಗ್ಗೆ ಒಂದಷ್ಟು ವ್ಯತ್ಯಯಗಳಾಗುತ್ತಿವೆ. ಆದರೆ, ಒಂದು ವರ್ಷದ ಅಂತದಲ್ಲಿ ಆರ್​ಬಿಐ ರೆಪೋದರವನ್ನು 250 ಮೂಲಾಂಕಗಳಷ್ಟು ಏರಿಕೆ ಮಾಡಿತ್ತು. ಅದಕ್ಕೆ ಅನುಗುಣವಾಗಿ ಬ್ಯಾಂಕುಗಳು ಠೇವಣಿ ದರ ಏರಿಸಿಲ್ಲ ಎನ್ನುವುದನ್ನು ಆರ್​ಬಿಐ ಗಮನಿಸಿದೆ. ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ರೆಪೋ ರೇಟ್ ಹೆಚ್ಚಿಸಲಾಗಿದೆಯಾದರೂ ಅದು ಫಲಿಸಬೇಕಾದರೆ ಬ್ಯಾಂಕುಗಳು ಠೇವಣಿಗಳಿಗೆ ಆಕರ್ಷಕ ಬಡ್ಡಿದರದ ಆಫರ್ ಕೊಡಬೇಕು.

ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸಬೇಕೆನ್ನುವುದು ಆರ್​ಬಿಐ ಸಂಕಲ್ಪ. ಆದರೆ, ಈ ಮಟ್ಟ ದಾಟಿ ಹೋಗಿ ಬಹಳ ತಿಂಗಳುಗಳೇ ಆಗಿವೆ. ಸದ್ಯ ಹಣದುಬ್ಬರ ಶೇ. 6ಕ್ಕಿಂತಲೂ ಕಡಿಮೆಗೆ ಬಂದಿದೆಯಾದರೂ ಒಂದು ಅಥವಾ ಎರಡು ವರ್ಷದಲ್ಲಿ ಅದು ಶೇ. 4ಕ್ಕೆ ಇಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ, ಆರ್​ಬಿಐ ತನ್ನ ರೆಪೋ ದರ ಮುಂದೆ ಹೆಚ್ಚಿಸುತ್ತದೆಯೇ ಹೊರತು ಇಳಿಸುವ ಸಾಧ್ಯತೆ ಇಲ್ಲ. ಆದರೆ, ತಾನು ರೆಪೋ ದರ ಹೆಚ್ಚಿಸಿದರೆ ಬ್ಯಾಂಕುಗಳೂ ಕೂಡ ಠೇವಣಿ ದರ ಹೆಚ್ಚಿಸಲಿ ಎಂಬುದು ಆರ್​ಬಿಐ ಅಪೇಕ್ಷೆ.

ಇದನ್ನೂ ಓದಿ: ಒಂದೇ ಸಣ್ಣ ತಂತ್ರ; 1 ಕೋಟಿ ಬದಲು 11 ಕೋಟಿ ರೂ ರಿಟರ್ನ್; ಇದು ಸ್ಟೆಪ್ ಅಪ್ ಹೂಡಿಕೆ ಸೂತ್ರ

ಠೇವಣಿ ಸ್ಕೀಮ್​ಗಳನ್ನು ಬ್ಯಾಂಕುಗಳಷ್ಟೇ ಅಲ್ಲ ಅಂಚೆ ಕಚೇರಿಗಳೂ ನೀಡುತ್ತವೆ. ಪೋಸ್ಟ್ ಆಫೀಸ್​ನಲ್ಲಿ ಡೆಪಾಸಿಟ್ ದರಗಳು ಶೇ. 7.5ರವರೆಗೂ ಇವೆ. ಇನ್ನೊಂದೆಡೆ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಶೇ. 8ರ ಆಸುಪಾಸಿನವರೆಗೆ ಬಡ್ಡಿದರ ನೀಡಲಾಗುತ್ತಿದೆ.

ಪೋಸ್ಟ್ ಆಫೀಸ್​ನಲ್ಲಿ ಒಂದು ವರ್ಷದ ಡೆಪಾಸಿಟ್​ಗೆ ಶೇ. 6.9ರಷ್ಟು ಬಡ್ಡಿ ಇದ್ದರೆ, ಎರಡು ಮತ್ತು ಮೂರು ವರ್ಷದ ಸ್ಕೀಮ್​ಗೆ ಶೇ 7, ಐದು ವರ್ಷದ ಡೆಪಾಸಿಟ್​ಗೆ ಗರಿಷ್ಠ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?

ಕಮರ್ಷಿಯಲ್ ಬ್ಯಾಂಕಿಗಿಂತ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿಗಳಿಗೆ ಅತಿಹೆಚ್ಚು ಬಡ್ಡಿ ಸಿಗುತ್ತದೆ. ಕೆಲ ಕೋಆಪರೇಟಿವ್ ಬ್ಯಾಂಕುಗಳಲ್ಲಿ ಶೇ. 9ರವರೆಗೂ ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ