Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?

Festival Shopping guide: ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಬಹಳಷ್ಟು ಕ್ಯಾಷ್​ಬ್ಯಾಕ್ ಆಫರ್​ಗಳನ್ನು ಕಾಣಬಹುದು. ಕೆಲ ನಿರ್ದಿಷ್ಟ ವರ್ಗದ ಉತ್ಪನ್ನಗಳಿಗೆ ಈ ಕ್ಯಾಷ್​ಬ್ಯಾಕ್ ಹೆಚ್ಚು ಸೀಮಿತವಾಗಿರಬಹುದು. ಕ್ಯಾಷ್​ಬ್ಯಾಕ್ ಆಸೆಗೆ ಬಿದ್ದು ಉತ್ಪನ್ನ ಖರೀದಿಸುವುದಕ್ಕಿಂತ, ಆ ಉತ್ಪನ್ನ ಉಪಯುಕ್ತ ಎನಿಸಿದಲ್ಲಿ ಮಾತ್ರ ಪಡೆಯಿರಿ. ಇಲ್ಲದಿದ್ದರೆ ಹೊರೆಯಾದೀತು. ಈ ನಿಟ್ಟಿನಲ್ಲಿ ಒಂದಷ್ಟು ಟಿಪ್ಸ್ ಇಲ್ಲಿದೆ..

ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?
ಶಾಪಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2023 | 12:17 PM

ಈಗ ಹಬ್ಬದ ಸೀಸನ್ ಇದೆ. ನವರಾತ್ರಿಯೂ ಶುರುವಾಗಿದೆ. ದೀಪಾವಳಿವರೆಗೂ ಸೀಸನ್ (festival season) ಮುಂದುವರಿಯುತ್ತದೆ. ಅಮೇಜಾನ್, ಫ್ಲಿಪ್​ಕಾರ್ಟ್​​ಗಳಲ್ಲಿ ಶೇ. 70ರವರೆಗೂ ಡಿಸ್ಕೌಂಟ್​ಗಳನ್ನು ನೋಡಬಹುದು. ಸಾಕಷ್ಟು ಕ್ಯಾಷ್​ಬ್ಯಾಕ್​ಗಳನ್ನೂ ಪಡೆಯಬಹುದು. ಅಮೇಜಾನ್​ನ ಗ್ರೇಟ್ ಇಂಡಿಯಾ ಫೆಸ್ಟಿವಲ್ ಮತ್ತು ಫ್ಲಿಪ್​ಕಾರ್ಟ್​ನ ಬಿಗ್ ಬಿಲಿಯನ್ ಡೇಸ್ ಸೇಲ್ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ ವಹಿವಾಟು ನಡೆಯುತ್ತವೆ. ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಮಾತ್ರವಲ್ಲ, ವಿವಿಧ ಮಳಿಗೆಗಳಲ್ಲೂ ಫೆಸ್ಟಿವಲ್ ಆಫರ್​ಗಳು ರಾರಾಜಿಸುತ್ತಿವೆ.

ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಬಹಳಷ್ಟು ಕ್ಯಾಷ್​ಬ್ಯಾಕ್ ಆಫರ್​ಗಳನ್ನು ಕಾಣಬಹುದು. ಕೆಲ ನಿರ್ದಿಷ್ಟ ವರ್ಗದ ಉತ್ಪನ್ನಗಳಿಗೆ ಈ ಕ್ಯಾಷ್​ಬ್ಯಾಕ್ ಹೆಚ್ಚು ಸೀಮಿತವಾಗಿರಬಹುದು. ಕ್ಯಾಷ್​ಬ್ಯಾಕ್ ಆಸೆಗೆ ಬಿದ್ದು ಉತ್ಪನ್ನ ಖರೀದಿಸುವುದಕ್ಕಿಂತ, ಆ ಉತ್ಪನ್ನ ಉಪಯುಕ್ತ ಎನಿಸಿದಲ್ಲಿ ಮಾತ್ರ ಪಡೆಯಿರಿ. ಇಲ್ಲದಿದ್ದರೆ ಹೊರೆಯಾದೀತು.

ಇದನ್ನೂ ಓದಿ: ರೆಪೋ ದರ ಏರಿಕೆಗೆ ಅನುಗುಣವಾಗಿ ಬ್ಯಾಂಕ್ ಠೇವಣಿ ದರ ಏರಿಲ್ಲವಾ? ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್​ಗಳಲ್ಲಿ ಹೆಚ್ಚು ಬಡ್ಡಿ ಎಲ್ಲಿ ಸಿಗುತ್ತದೆ?

ಹಾಗೆಯೇ, ಕ್ಯಾಷ್ ಬ್ಯಾಕ್, ಡಿಸ್ಕೌಂಟ್ ಆಫರ್​ಗಳು ಯಾವ್ಯಾವ ಪ್ಲಾಟ್​ಫಾರ್ಮ್​ಗಳಲ್ಲಿ ಎಷ್ಟೆಷ್ಟು ಇವೆ ಎಂಬುದನ್ನು ಮೊದಲು ಅವಲೋಕಿಸಿ. ಕೆಲವೊಮ್ಮೆ ಐದತ್ತು ರುಪಾಯಿ ಕ್ಯಾಷ್​ಬ್ಯಾಕ್ ಬರಬಹುದು. ಬೇರೆ ಇಕಾಮರ್ಸ್ ಪ್ಲಾಟ್​ಫಾರ್ಮ್​ನಲ್ಲಿ ಹೆಚ್ಚಿನ ಕ್ಯಾಷ್​ಬ್ಯಾಕ್ ಬರಬಹುದು.

ಕ್ರೆಡಿಟ್ ಕಾರ್ಡ್ ಅಗತ್ಯವಿದ್ದರೆ ಬಳಸಿ…

ಕೆಲವೊಮ್ಮೆ ಕ್ರೆಡಿಟ್ ಕಾರ್ಡ್​ಗಳ ಮೂಲಕ ಶಾಪಿಂಗ್ ಮಾಡಿದರೆ ಸಾಕಷ್ಟು ಕ್ಯಾಷ್​ಬ್ಯಾಕ್, ಡಿಸ್ಕೌಂಟ್ ಸಿಗುತ್ತದೆ. ಶೇ. 10ರವರೆಗೂ ರಿಯಾಯಿತಿ ಸಿಗಬಹುದು. ಕೆಲ ಪ್ಲಾಟ್​ಫಾರ್ಮ್​ಗಳಲ್ಲಿ ನಿರ್ದಿಷ್ಟ ಕಂಪನಿಯ ಮತ್ತು ವಿಧದ ಕ್ರೆಡಿಟ್ ಕಾರ್ಡ್​ಗೆ ಹೆಚ್ಚಿನ ಆಫರ್ ಕೊಡಬಹುದು. ಶಾಪಿಂಗ್ ಮಾಡುವ ಮುನ್ನ ಇದೆಲ್ಲವನ್ನೂ ಪರಿಶೀಲಿಸಿ.

ಇದನ್ನೂ ಓದಿ: ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲವಾ? ಕ್ರೆಡಿಟ್ ಸ್ಕೋರ್ ಹೋದೀತೆಂಬ ಭಯವಾ? ನಿಮ್ಮ ಮುಂದಿರುವ ಆಯ್ಕೆಗಳು ಇಲ್ಲಿವೆ

ಇಎಂಐ ಆಯ್ಕೆ ಮುಂಚೆ ಪರಿಶೀಲನೆ

ಅಧಿಕ ಮೊತ್ತದ ವಸ್ತುವನ್ನು ಖರೀದಿಸಿದರೆ ಇಎಂಐ ಸೌಲಭ್ಯ ಇರುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಅದನ್ನು ಇಎಂಐ ಆಗಿ ಪರಿವರ್ತಿಸಬಹುದು. ಝೀರೋ ಕಾಸ್ಟ್ ಇಎಂಐ ಎಂದಿರುತ್ತದೆ. ಕೆಲವೊಮ್ಮೆ ಬಡ್ಡಿ ಅಥವಾ ಪ್ರೋಸಸಿಂಗ್ ಶುಲ್ಕ ವಿಧಿಸಬಹುದು. ಹೀಗಾಗಿ, ಅದನ್ನು ವಿಚಾರಿಸಿ ಮುಂದುವರಿಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ