Inflation Target: ಇನ್ನೂ ಕೆಲ ಕಾಲ ಹಣದುಬ್ಬರ ಇದ್ದರೆ ಚಿಂತೆ ಬೇಡ; ಅಭಿವೃದ್ದಿಗೋಸ್ಕರ ಹಣದುಬ್ಬರ ಇರಲಿಬಿಡಿ: ಎಂಪಿಸಿ ಸದಸ್ಯ ಜಯಂತ್ ವರ್ಮಾ

RBI MPC Member Jayant Varma: ಆರ್ಥಿಕ ಬೆಳವಣಿಗೆಗೋಸ್ಕರ ಒಂದಷ್ಟು ಕಾಲ ಹಣದುಬ್ಬರವನ್ನು ಸಹಿಸಿಕೊಳ್ಳಬೇಕು. ಹಣದುಬ್ಬರ ಶೇ. 4ಕ್ಕಿಂತ ಹೆಚ್ಚಿದ್ದರೂ ಹೆಚ್ಚು ಚಿಂತೆ ಪಡಬೇಕಿಲ್ಲ. ಹಣದುಬ್ಬರವನ್ನು ಮೇಲಿನ ಮಿತಿಗಿಂತ ಕೆಳಗೆ ತರಬೇಕೆಂಬ ಆತುರತೆ ಇದೆಯಾದರೂ ನಾವು ಇನ್ನಷ್ಟು ಸಂಯಮ ಹೊಂದಿರಬೇಕು. ಬಹಳ ವೇಗದಲ್ಲಿ ಹಣದುಬ್ಬರ ಇಳಿಕೆಯಾದಷ್ಟೂ ಆರ್ಥಿಕ ಬೆಳವಣಿಗೆಯನ್ನು ಬಲಿಕೊಡಬೇಕಾಗುತ್ತದೆ ಎಂದು ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಸದಸ್ಯ ಜಯಂತ್ ವರ್ಮಾ ಹೇಳಿದ್ದಾರೆ.

Inflation Target: ಇನ್ನೂ ಕೆಲ ಕಾಲ ಹಣದುಬ್ಬರ ಇದ್ದರೆ ಚಿಂತೆ ಬೇಡ; ಅಭಿವೃದ್ದಿಗೋಸ್ಕರ ಹಣದುಬ್ಬರ ಇರಲಿಬಿಡಿ: ಎಂಪಿಸಿ ಸದಸ್ಯ ಜಯಂತ್ ವರ್ಮಾ
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2023 | 1:38 PM

ನವದೆಹಲಿ, ಅಕ್ಟೋಬರ್ 23: ಪ್ರತೀ ಬಾರಿ ಆರ್​ಬಿಐನ ದ್ವೈಮಾಸಿಕ ಎಂಪಿಸಿ ಸಭೆ (RBI MPC Meeting) ನಡೆದಾಗೆಲ್ಲ ಹೆಚ್ಚಿನವರ ಕಣ್ಣು ಹಣದುಬ್ಬರ ಮತ್ತು ರೆಪೋದರಗಳತ್ತಲೇ ನೆಟ್ಟಿರುತ್ತದೆ. ಆರ್​ಬಿಐ ಗುರಿ ಇಟ್ಟಿರುವ ಶೇ. 4ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ (inflation) ಕಳೆದ 4 ವರ್ಷಗಳಿಂದಲೂ ಇದೆ. ಹಣದುಬ್ಬರ ಶೇ. 4ಕ್ಕೆ ಇಳಿಯುತ್ತಿಲ್ಲವಲ್ಲ ಎಂದು ಕೆಲವರು ವ್ಯಾಕುಲಗೊಂಡಿರುವುದು ಹೌದು. ಆರ್​ಬಿಐನ ಎಂಪಿಸಿ ಸಭೆ ಹಣದುಬ್ಬರ ನಿಯಂತ್ರಿಸಲು ರೆಪೋ ದರ ಏರಿಸುತ್ತಿಲ್ಲ ಎಂದೂ ಕೆಲವರು ಪ್ರಶ್ನಿಸಿರುವುದುಂಟು. ಆದರೆ, ಎಂಪಿಸಿ ಸದಸ್ಯರೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಹೊರಗಿನ ಸದಸ್ಯರಲ್ಲೊಬ್ಬರಾದ ಜಯಂತ್ ವರ್ಮಾ ಅವರು ಹಣದುಬ್ಬರವನ್ನು ಇಳಿಸುವುದಷ್ಟೇ ಗುರಿಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಬೆಳವಣಿಗೆಗೋಸ್ಕರ ಒಂದಷ್ಟು ಕಾಲ ಹಣದುಬ್ಬರವನ್ನು ಸಹಿಸಿಕೊಳ್ಳಬೇಕು. ಹಣದುಬ್ಬರ ಶೇ. 4ಕ್ಕಿಂತ ಹೆಚ್ಚಿದ್ದರೂ ಹೆಚ್ಚು ಚಿಂತೆ ಪಡಬೇಕಿಲ್ಲ ಎಂಬುದು ಜಯಂತ್ ವರ್ಮಾ ಅವರ ವಾದ.

ಇದನ್ನೂ ಓದಿ: ಪಿಎಂಜೆಡಿವೈ ಅಡಿಯ ಬ್ಯಾಂಕ್ ಖಾತೆಗಳು; ಯಾತಕ್ಕಾಗಿ ಈ ಯೋಜನೆ? ಪ್ರಯೋಜನಗಳೇನು?

‘ಹಣದುಬ್ಬರವನ್ನು ಮೇಲಿನ ಮಿತಿಗಿಂತ ಕೆಳಗೆ ತರಬೇಕೆಂಬ ಆತುರತೆ ಇದೆಯಾದರೂ ನಾವು ಇನ್ನಷ್ಟು ಸಂಯಮ ಹೊಂದಿರಬೇಕು. ಬಹಳ ವೇಗದಲ್ಲಿ ಹಣದುಬ್ಬರ ಇಳಿಕೆಯಾದಷ್ಟೂ ಆರ್ಥಿಕ ಬೆಳವಣಿಗೆಯನ್ನು ಬಲಿಕೊಡಬೇಕಾಗುತ್ತದೆ,’ ಎಂದು ಜಯಂತ್ ವರ್ಮಾ ಹೇಳಿದ್ದಾರೆ.

ಹಣದುಬ್ಬರವನ್ನು ಶೇ. 4ಕ್ಕೆ ಸೀಮಿತಗೊಳಿಸುವುದು ಆರ್​ಬಿಐ ಹಾಕಿರುವ ಗುರಿ. ಹಾಗೆಯೇ, ಗುರಿಯ ಆಚೆ ಮತ್ತು ಈಚೆ ಶೇ. 2ರಷ್ಟು ತಾಳಿಕೆ ಮಿತಿ ಹಾಕಿದೆ. ಅಂದರೆ, ಹಣದುಬ್ಬರವು ಶೇ. 2ರಿಂದ ಶೇ. 6ರೊಳಗೆ ಇರುವಂತೆ ನೋಡಿಕೊಳ್ಳುವುದು ಆರ್​ಬಿಐನ ಸಂಕಲ್ಪ. 2019ರಲ್ಲಿ ಹಣದುಬ್ಬರ ಶೇ. 4ಕ್ಕಿಂತಲೂ ಒಳಗೆ ಇತ್ತು. ಆದರೆ, ಕಳೆದ 4 ವರ್ಷಗಳಿಂದ ಸತತವಾಗಿ ಶೇ. 4ಕ್ಕಿಂತ ಹೊರಗೇ ಇದೆ. ಮುಂದಿನ 18 ತಿಂಗಳು, ಅಂದರೆ 2025ರ ಮಾರ್ಚ್​ವರೆಗೂ ಹೆಚ್ಚಿನ ಮಟ್ಟದಲ್ಲೇ ಹಣದುಬ್ಬರ ಇರಬಹುದು ಎಂಬುದು ಆರ್​ಬಿಐ ಅಂದಾಜು.

ಇದನ್ನೂ ಓದಿ: ಚೀನಾದಲ್ಲಿ ಫಾಕ್ಸ್​ಕಾನ್ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು, ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳಿಂದ ಶೋಧ

ಹಣದುಬ್ಬರ ನಿಯಂತ್ರಣಕ್ಕೆ ಆರ್​ಬಿಐ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ರೆಪೋ ದರ ಅಥವಾ ಬಡ್ಡಿದರ. ಬಡ್ಡಿದರ ಹೆಚ್ಚಿಸಿದರೆ ಹಣದುಬ್ಬರವನ್ನು ಬೇಗನೇ ಕಡಿಮೆ ಮಾಡಬಹುದು. ಆದರೆ, ಬಡ್ಡಿದರ ಹೆಚ್ಚಳದ ಸೈಡ್ ಎಫೆಕ್ಟ್ ಆಗಿ ಆರ್ಥಿಕತೆ ನಲುಗುತ್ತದೆ. ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳಬಹುದು. ಹೀಗಾಗಿ, ರಿಸರ್ವ್ ಬ್ಯಾಂಕ್ ಕಳೆದ ಕೆಲ ತಿಂಗಳುಗಳಿಂದ ಬಡ್ಡಿದರವನ್ನು ಹೆಚ್ಚಿಸುತ್ತಿಲ್ಲ. ಜಯಂತ್ ವರ್ಮಾ ಹೇಳಿಕೆ ಕೂಡ ಈ ಕ್ರಮವನ್ನು ಸಮರ್ಥಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ