AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ

ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ

ಮದನ್​ ಕುಮಾರ್​
|

Updated on: Jul 31, 2025 | 9:42 PM

Share

ನಟ ಪ್ರಥಮ್ ಅವರು ಇಂದು (ಜುಲೈ 31) ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಮಹಜರು ಮುಗಿಸಿ ಮತ್ತೆ ಅವರನ್ನು ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಅವರನ್ನು ದಲಿತ ಸಂಘಟನೆ ಕಾರ್ಯಕರ್ತರು ಪ್ರಶ್ನಿಸಿದರು. ಅಲ್ಲದೇ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನಿಸಲಾಯಿತು. ಕೂಡಲೇ ಪ್ರಥಮ್ ಅವರನ್ನು ಪೊಲೀಸರು ರಕ್ಷಿಸಿದರು.

ಕಳೆದ ಕೆಲವು ದಿನಗಳಿಂದ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿರುವ ನಟ ಪ್ರಥಮ್​ ಮುಖಕ್ಕೆ ಮಸಿ ಬಳಿಯಲು ಯತ್ನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ (Doddaballapura Rural Police Station) ಆವರಣದಲ್ಲಿ ಈ ಘಟನೆ ನಡೆದಿದೆ. ಇಂದು (ಜುಲೈ 31) ಪ್ರಥಮ್ ಅವರು ಠಾಣೆಗೆ ಹಾಜರಾಗಿದ್ದರು. ವಿಚಾರಣೆ ಸಲುವಾಗಿ ಸ್ಥಳ ಮಹಜರಿಗೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಮಹಜರು ಮುಗಿಸಿ ಮತ್ತೆ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಪ್ರಥಮ್ (Pratham) ಅವರನ್ನು ದಲಿತ ಸಂಘಟನೆ ಕಾರ್ಯಕರ್ತರು ಪ್ರಶ್ನಿಸಿದರು. ಅಲ್ಲದೇ ನಟನ ಮುಖಕ್ಕೆ ಮಸಿ ಬಳಿಯಲು ಯತ್ನಿಸಲಾಯಿತು. ಕೂಡಲೇ ಪ್ರಥಮ್ ಅವರನ್ನು ರಕ್ಷಿಸಿದ ಪೊಲೀಸರು ಠಾಣೆಯೊಳಗೆ ಕರೆದೊಯ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.