ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಅಮಿತಾಭ್ಗೂ ಕಂಟ್ರೋಲ್ ಮಾಡೋಕೆ ಆಗ್ಲಿಲ್ಲ; ಟ್ರೋಲ್ ಆದ ಜಯಾ ಬಚ್ಚನ್
ನಿನ್ನೆ ಆಪರೇಷನ್ ಸಿಂಧೂರದ ಕುರಿತಾದ ರಾಜ್ಯಸಭಾ ಚರ್ಚೆ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಎಂದಿನಂತೆ ತಮ್ಮ ತಾಳ್ಮೆ ಕಳೆದುಕೊಂಡು ಮಾತನಾಡಿದ್ದರು. ಇದಾದ ನಂತರ ಅವರು ಬಹಳ ಟ್ರೋಲ್ ಆಗುತ್ತಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಾರಂಭಿಸಲಾದ ಆಪರೇಷನ್ ಸಿಂದೂರ್ ಹೆಸರಿಸುವಿಕೆಯನ್ನು ಪ್ರಶ್ನಿಸಿದ ನಂತರ ಸಮಾಜವಾದಿ ಪಕ್ಷದ ಸಂಸದೆ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಬುಧವಾರ ರಾಜ್ಯಸಭೆಯಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದರು.
ನವದೆಹಲಿ, ಜುಲೈ 31: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಹಾಗೂ ಹಿರಿಯ ಬಾಲಿವುಡ್ ನಟಿ ಜಯಾ ಬಚ್ಚನ್ (Jaya Bachchan) ಸದನದಲ್ಲಿ ಯಾವಾಗೆಲ್ಲ ಮಾತನಾಡುತ್ತಾರೋ ಆಗೆಲ್ಲ ಟ್ರೋಲಿಗರ ಕೈಗೆ ಸಿಕ್ಕಿಹಾಕಿಕೊಳ್ಳುವುದು ಖಚಿತ. ಬುಧವಾರ ಕೂಡ ಪಹಲ್ಗಾಮ್ ದಾಳಿಯ (Pahalgam Attack) ಬಳಿಕ ಆರಂಭಿಸಲಾದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ್ದ ಜಯಾ ಬಚ್ಚನ್ ಆ ಹೆಸರಿಟ್ಟವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವೇಳೆ ಅಲ್ಲಿದ್ದ ಸಂಸದರು ಅವರಿಗೆ ಮಾತನಾಡಲು ಅಡ್ಡಪಡಿಸಿದ್ದರಿಂದ ಕೋಪಗೊಂಡ ಜಯಾ ಬಚ್ಚನ್ “ಒಂದೋ ನೀವು ಮಾತನಾಡಬೇಕು ಅಥವಾ ನಾನು ಮಾತನಾಡುತ್ತೇನೆ. ನೀವು ಮಾತನಾಡುವಾಗ ನಾನು ಅಡ್ಡಿಪಡಿಸುವುದಿಲ್ಲ. ಒಬ್ಬ ಮಹಿಳೆ ಮಾತನಾಡುವಾಗ ನಾನು ಎಂದಿಗೂ ಅಡ್ಡಿಪಡಿಸುವುದಿಲ್ಲ. ಆದ್ದರಿಂದ ದಯವಿಟ್ಟು ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ” ಎಂದು ಹೇಳಿದ್ದರು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಜಯಾ ಬಚ್ಚನ್ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಅದಕ್ಕೂ ಕೋಪಗೊಂಡ ಜಯಾ ಬಚ್ಚನ್, “ಪ್ರಿಯಾಂಕಾ, ನನ್ನನ್ನು ನಿಯಂತ್ರಿಸಬೇಡಿ” ಎಂದು ಹೇಳಿದರು. ಅದರಿಂದ ಪ್ರಿಯಾಂಕಾಗೆ ಮುಜುಗರವಾಯಿತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. “ಇಂತಹ ಹೆಂಗಸನ್ನು ಸೊಸೆ ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ಳುತ್ತಾಳೋ!”, “ಅಮಿತಾಬ್ ಬಚ್ಚನ್ ಅವರಿಗೇ ನಿಮ್ಮನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ, ಇನ್ನು ಆ ಪ್ರಿಯಾಂಕಾ ಕಂಟ್ರೋಲ್ ಮಾಡೋಕೆ ಆಗುತ್ತಾ!” ಎಂದೆಲ್ಲ ಟ್ರೋಲ್ ಮಾಡಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

