IND vs ENG: ಆತುರಪಟ್ಟು ಉಚಿತವಾಗಿ ವಿಕೆಟ್ ನೀಡಿದ ಶುಭ್ಮನ್ ಗಿಲ್; ವಿಡಿಯೋ ನೋಡಿ
India vs England 5th Test: ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಮಳೆ ಅಡಚಣೆಯಾಗುತ್ತಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ತಂಡಕ್ಕೆ ಆರಂಭಿಕ ಆಘಾತವಾಗಿರುವುದರ ಜೊತೆಗೆ ನಾಯಕ ಶುಭ್ಮನ್ ಗಿಲ್ ರನ್ ಔಟ್ ಆಗಿರುವುದು ಹಿನ್ನಡೆಯನ್ನುಂಟು ಮಾಡಿದೆ. ಗಿಲ್ 21 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಮೊದಲ ದಿನ ಮಳೆಯೊಂದಿಗೆ ಕಣ್ಣಾಮುಚ್ಚಾಲೆ ಆಟ ಮುಂದುವರೆದಿದ್ದು, ಪಂದ್ಯಕ್ಕೆ ನಿರಂತರವಾಗಿ ಅಡ್ಡಿಯಾಗುತ್ತಿದೆ. ಇತ್ತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಕೂಡ ಉತ್ತಮ ಆರಂಭವನ್ನು ಪಡೆದಿಲ್ಲ. ಭಾರತ ತಂಡ ಈಗಾಗಲೇ ಪ್ರಮುಖ ವಿಕೆಟ್‌ಗಳನ್ನು ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ನಾಯಕ ಶುಭ್ಮನ್ ಗಿಲ್ ತಮ್ಮ ಆತುರದಿಂದ ವಿಕೆಟ್ ಕಳೆದುಕೊಂಡಿತ್ತು. ತಂಡಕ್ಕೆ ಆಘಾತ ನೀಡಿದೆ. ಗಿಲ್ ವಿಕೆಟ್ ನೋಡಿದವರು, ಇಂಗ್ಲೆಂಡ್ ಉಚಿತವಾಗಿ ಈ ವಿಕೆಟ್ ಪಡೆದುಕೊಂಡಿದೆ ಎನ್ನುತ್ತಿದ್ದಾರೆ.
ತಂಡವನ್ನು ಆರಂಭಿಕ ಆಘಾತದಿಂದ ಹೊರ ತೆಗೆಯುವ ಕೆಲಸ ಮಾಡುತ್ತಿದ್ದ ಶುಭ್ಮನ್ ಗಿಲ್ 21 ರನ್ ಗಳಿಸಿ ಮತ್ತೊಂದು ಬಿಗ್ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದರು. ಆದರೆ ಇನ್ನಿಂಗ್ಸ್‌ನ 28 ನೇ ಓವರ್‌ನ ಎರಡನೇ ಚೆಂಡನ್ನು ಗಿಲ್, ಶಾರ್ಟ್ ಕವರ್ ಕಡೆಗೆ ಆಡಿದರು. ಶಾಟ್ ಆಡಿದ ತಕ್ಷಣವೆ ಗಿಲ್ ರನ್ ತೆಗೆದುಕೊಳ್ಳಲು ಓಡಿಹೋದರು. ಆದರೆ ಇತ್ತ ನಾನ್-ಸ್ಟ್ರೈಕ್‌ನಲ್ಲಿ ನಿಂತಿದ್ದ ಸಾಯಿ ಸುದರ್ಶನ್ ರನ್ಗಾಗಿ ಓಡುವುದರಿಂದ ಹಿಂದೆ ಸರಿದರು. ಕ್ರೀಸ್ನ ಮಧ್ಯಕ್ಕೆ ಬಂದು ಇದನ್ನು ಗಮನಿಸಿದ ಗಿಲ್, ಮತ್ತೆ ಕ್ರಿಸ್ನತ್ತ ಓಡಲು ಆರಂಭಿಸಿದರು. ಆದರೆ ಅಷ್ಟರಲ್ಲಾಗಲೇ ವೇಗಿ ಗಸ್ ಅಟ್ಕಿನ್ಸನ್ ಚೆಂಡನ್ನು ಹಿಡಿದು ನೇರವಾಗಿ ಸ್ಟಂಪ್ ಕಡೆಗೆ ಎಸೆದರು. ಇದರಿಂದ ಗಿಲ್ ರನೌಟ್ ಆಗಿ ಪೆವಿಲಿಯನ್ ಸೇರಬೇಕಾಯಿತು.

