ಚೀನಾದಲ್ಲಿ ಫಾಕ್ಸ್​ಕಾನ್ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು, ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳಿಂದ ಶೋಧ

China Tax Officials Raid On Foxconn Offices: ಚೀನಾದ ಗುವಾಂಗ್​ಡೋಂಗ್ ಮತ್ತು ಜಿಯಾಂಗ್​ಸು ಪ್ರಾಂತ್ಯಗಳಲ್ಲಿರುವ ಫಾಕ್ಸ್​ಕಾನ್ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಹಾಗೆಯೇ, ಹೆನಾನ್ ಮತ್ತು ಹುಬೇಯ್ ಪ್ರಾಂತ್ಯಗಳಲ್ಲಿರುವ ಫಾಕ್ಸ್​ಕಾನ್ ಕಚೇರಿಗಳಲ್ಲೂ ಅಲ್ಲಿನ ನೈಸರ್ಗಿಕ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿರುವುದು ತಿಳಿದುಬಂದಿದೆ. ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ.

ಚೀನಾದಲ್ಲಿ ಫಾಕ್ಸ್​ಕಾನ್ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು, ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳಿಂದ ಶೋಧ
ಫಾಕ್ಸ್​ಕಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2023 | 11:28 AM

ಬೀಜಿಂಗ್, ಅಕ್ಟೋಬರ್ 23: ಆ್ಯಪಲ್ ಕಂಪನಿಯ ಐಫೋನ್ ಮತ್ತಿತರ ಉತ್ಪನ್ನನಗಳನ್ನು ತಯಾರಿಸಿಕೊಡುವ ಫಾಕ್ಸ್​ಕಾನ್ (foxconn) ಸಂಸ್ಥೆಯ ಕಚೇರಿಗಳ ಮೇಲೆ ಚೀನಾದ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿರುವ ಘಟನೆ ಬೆಳಕಿಗೆ ಬಂದಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಗುವಾಂಗ್​ಡೋಂಗ್ ಮತ್ತು ಜಿಯಾಂಗ್​ಸು ಪ್ರಾಂತ್ಯಗಳಲ್ಲಿರುವ ಫಾಕ್ಸ್​ಕಾನ್ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಹಾಗೆಯೇ, ಹೆನಾನ್ ಮತ್ತು ಹುಬೇಯ್ ಪ್ರಾಂತ್ಯಗಳಲ್ಲಿರುವ ಫಾಕ್ಸ್​ಕಾನ್ ಕಚೇರಿಗಳಲ್ಲೂ ಅಲ್ಲಿನ ನೈಸರ್ಗಿಕ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿರುವುದು ತಿಳಿದುಬಂದಿದೆ.

ಹಾನ್ ಹಾಯ್ ಪ್ರಿಸಿಶನ್ ಇಂಡಸ್ಟ್ರಿ (Hon Hai Precision Industry) ಎಂಬ ಅಧಿಕೃತ ಹೆಸರಿನ ತೈವಾನ್ ಮೂಲದ ಫಾಕ್ಸ್​ಕಾನ್ ಸಂಸ್ಥೆ ವಿಶ್ವದ ಪ್ರಮುಖ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎನಿಸಿದೆ. ಆ್ಯಪಲ್​ನ ಐಫೋನ್ ಸಪ್ಲೈಯರ್ ಎಂದೇ ಫಾಕ್ಸ್​ಕಾನ್ ಖ್ಯಾತವಾಗಿದೆ. ಚೀನಾದಲ್ಲಿ ಇದರ ಹೆಚ್ಚಿನ ಉತ್ಪಾದನೆಗಳು ನಡೆಯುತ್ತವೆ. ಇತ್ತೀಚೆಗೆ, ಭಾರತ ಸೇರಿದಂತೆ ಬೇರೆ ಬೇರೆ ಕಡೆ ಫಾಕ್ಸ್​ಕಾನ್ ಘಟಕಗಳು ಆರಂಭವಾಗುತ್ತಿವೆ. ಈ ಹೊತ್ತಿನಲ್ಲೇ ಚೀನಾದಲ್ಲಿ ಫಾಕ್ಸ್​ಕಾನ್ ಮೇಲೆ ಕಾನೂನು ಕ್ರಮಗಳು ಜರುಗುತ್ತಿವೆ. ಈಗ ಕಚೇರಿಗಳಲ್ಲಿ ಶೋಧ ನಡೆಸಲು ಕಾರಣ ಏನು ಇತ್ಯಾದಿ ವಿವರ ಬಹಿರಂಗಗೊಂಡಿಲ್ಲ.

ಇದನ್ನೂ ಓದಿ: ಭಾರತದೊಂದಿಗೆ ಅತಿಹೆಚ್ಚು ವ್ಯಾಪಾರ: ವರ್ಷದ ಮೊದಲಾರ್ಧದಲ್ಲಿ ಅಮೆರಿಕದಿಂದ 59 ಬಿಲಿಯನ್ ಡಾಲರ್, ಚೀನಾದಿಂದ 58 ಬಿಲಿಯನ್ ಡಾಲರ್

ಆದರೆ, ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ ತಜ್ಞರೊಬ್ಬರ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದು, ಅವರ ಪ್ರಕಾರ, ಫಾಕ್ಸ್​ಕಾನ್ ಸೇರಿದಂತೆ ತೈವಾನ್ ಮೂಲದ ಕಂಪನಿಗಳು ಸಾಕಷ್ಟು ಲಾಭ ಮಾಡುತ್ತಿದ್ದು, ಸಾಮಾಜಿಕ ಜವಾಬ್ದಾರಿಯತ್ತಲೂ ಗಮನ ಹರಿಸಬೇಕು. ಚೀನಾ ಮತ್ತು ತೈವಾನ್ ನಡುವಿನ ಸಂಬಂಧ ಸುಧಾರಣೆಗೆ ಪೂರಕ ಪಾತ್ರ ವಹಿಸಬೇಕು ಎಂದಿದ್ದಾರೆ.

ಅವರ ಈ ಹೇಳಿಕೆ ಕುತೂಹಲ ಮೂಡಿಸುತ್ತದೆ. ಚೀನಾ ಮತ್ತು ತೈವಾನ್ ನೆರೆಯ ದೇಶಗಳು. ತೈವಾನ್ ಅಥವಾ ಚೀನೀ ಥೈಪೇ ಅನ್ನು ಚೀನಾ ತನ್ನ ದೇಶದ ಭಾಗ ಎಂದು ಈಗಲೂ ಭಾವಿಸಿದೆ. 1949ರಲ್ಲಿ ನಡೆದ ನಾಗರಿಕ ಯುದ್ಧದ ಬಳಿಕ ಚೀನಾದಿಂದ ತೈವಾನ್ ಬೇರ್ಪಟ್ಟಿತ್ತು. ಆಗಿನಿಂದಲೂ ಅದು ಸ್ವತಂತ್ರ ದೇಶವಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಎಲ್ಲಿಂದಲೋ ತಂದು ಅಸೆಂಬಲ್ ಮಾಡಿದ್ರೆ ಮೇಡ್ ಇನ್ ಇಂಡಿಯಾ ಆಗಲ್ಲ; ಎಲ್ಲವೂ ಇಲ್ಲಿಯೇ ತಯಾರಾಗಬೇಕು: ಸೌರಫಲಕ ವಿಚಾರದಲ್ಲಿ ಸರ್ಕಾರ ಬಿಗಿ ಧೋರಣೆ

ಚೀನಾ ಜೊತೆ ತೈವಾನ್ ಅಧಿಕೃತ ಸಂಬಂಧ ಹೊಂದಿಲ್ಲದೇ ಇದ್ದರೂ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ನಿರ್ಬಂಧಗಳಿಲ್ಲ. ಫಾಕ್ಸ್​ಕಾನ್​ನ ಬಹುಪಾಲು ಘಟಕಗಳು ಚೀನಾದಲ್ಲೇ ಇವೆ. ಲಕ್ಷಾಂತರ ಕೋಟಿ ಹಣವನ್ನು ಫಾಕ್ಸ್​ಕಾನ್ ಚೀನಾದಲ್ಲಿ ಹೂಡಿಕೆ ಮಾಡಿದೆ. ಫಾಕ್ಸ್​ಕಾನ್ ಮಾತ್ರವಲ್ಲ, ತೈವಾನ್​ನ ಹಲವು ಸಂಸ್ಥೆಗಳು ಚೀನಾದಲ್ಲಿ ನೆಲಸಿವೆ. ತೈವಾನ್​ನಿಂದ ಕೆಲ ವಸ್ತುಗಳ ಆಮದನ್ನು ಚೀನಾ ನಿರ್ಬಂಧಿಸಿದೆಯಾದರು ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ತೈವಾನ್ ಮೂಲದ ಕಂಪನಿಗಳಿಗೆ ತೊಂದರೆ ಕೊಟ್ಟಿದ್ದು ಕಡಿಮೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ