ಎಲ್ಲಿಂದಲೋ ತಂದು ಅಸೆಂಬಲ್ ಮಾಡಿದ್ರೆ ಮೇಡ್ ಇನ್ ಇಂಡಿಯಾ ಆಗಲ್ಲ; ಎಲ್ಲವೂ ಇಲ್ಲಿಯೇ ತಯಾರಾಗಬೇಕು: ಸೌರಫಲಕ ವಿಚಾರದಲ್ಲಿ ಸರ್ಕಾರ ಬಿಗಿ ಧೋರಣೆ

Made In India Solar Panels: ನೀವು ಹೊರಗಿನಿಂದ ಸೆಲ್ ಆಮದು ಮಾಡಿ ಇಲ್ಲಿಗೆ ತಂದು ಅಸೆಂಬಲ್ ಮಾಡುತ್ತೀರಿ. ಶೇ. 90ರಷ್ಟು ಭಾಗವು ಮೇಡ್ ಇನ್ ಚೀನಾ ಆದರೂ ನೀವು ಮೇಡ್ ಇನ್ ಇಂಡಿಯಾ ಎಂದು ಹೇಳಿ ಸೌರಫಲಕಗಳನ್ನು ಮಾರುತ್ತೀರಿ. ಇದು ಮುಂದೆ ಆಗುವುದಿಲ್ಲ ಎಂದು ಕೇಂದ್ರ ಮರುಬಳಕೆ ಇಂಧನ ಸಚಿವ ಆರ್ ಕೆ ಸಿಂಗ್ ಹೇಳಿದ್ದಾರೆ. ಭಾರತದಲ್ಲೇ ತಯಾರಾದ ಸೆಲ್, ವೇಫರ್ ಮತ್ತು ಪಾಲಿಸಿಲಿಕಾನ್​ಗಳನ್ನು ಬಳಸಿ ಅಸೆಂಬಲ್ ಮಾಡಲಾದ ಸೌರ ಫಲಕಗಳಿಗೆ ಮಾತ್ರ ನೊಂದಣಿ ಸಿಗಲಿದೆಯಂತೆ.

ಎಲ್ಲಿಂದಲೋ ತಂದು ಅಸೆಂಬಲ್ ಮಾಡಿದ್ರೆ ಮೇಡ್ ಇನ್ ಇಂಡಿಯಾ ಆಗಲ್ಲ; ಎಲ್ಲವೂ ಇಲ್ಲಿಯೇ ತಯಾರಾಗಬೇಕು: ಸೌರಫಲಕ ವಿಚಾರದಲ್ಲಿ ಸರ್ಕಾರ ಬಿಗಿ ಧೋರಣೆ
ಸೌರಫಲಕ
Follow us
|

Updated on: Oct 22, 2023 | 3:00 PM

ನವದೆಹಲಿ, ಅಕ್ಟೋಬರ್ 22: ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಸೌರಫಲಕಗಳನ್ನು ಮಾತ್ರವೇ ನೊಂದಣಿ ಮಾಡುವ ಯೋಜನೆಯಲ್ಲಿ ಕೇಂದ್ರ ಸರ್ಕಾರ ಇದೆ. ಐಫೋನ್​ಗಳನ್ನು ಅಸೆಂಬಲ್ ಮಾಡಲಾಗುವಂತೆ ಸೌರಫಲಕಗಳನ್ನು ಭಾರತದಲ್ಲಿ ಅಸೆಂಬಲ್ ಮಾಡಿದರೆ ಅಂಥ ಸೋಲಾರ್ ಪ್ಯಾನಲ್​ಗಳನ್ನು ಸರ್ಕಾರ ಸ್ವೀಕರಿಸದೇ ಹೋಗುವ ಸಾಧ್ಯತೆ ಇದೆ. ಕೇಂದ್ರ ಹೊಸ ಮತ್ತು ಮರುಬಳಕೆ ಶಕ್ತಿ ಸಚಿವ ಆರ್ ಕೆಲ ಸಿಂಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಎಎಲ್​ಎಂಎಂ ಅಡಿಯಲ್ಲಿ ಭಾರತದಲ್ಲೇ ತಯಾರಾದ ಸೆಲ್, ವೇಫರ್ ಮತ್ತು ಪಾಲಿಸಿಲಿಕಾನ್​ಗಳಿಂದ ಮಾಡಲಾದ ಸೋಲಾರ್ ಪ್ಯಾನಲ್​ಗಳನ್ನು ಮಾತ್ರ ನೊಂದಣಿ ಮಾಡಲು ಯೋಜಿಸಲಾಗಿರುವ ವಿಚಾರವನ್ನು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸಚಿವಾಲಯದ ಸಂಬಂಧಿತ ಅಧಿಕಾರಿಗಳು ಈ ನಿಟ್ಟಿನಲ್ಲಿ ಒಂದು ಸ್ಪಷ್ಟ ನೀತಿ ಸಿದ್ಧಪಡಿಸುವಂತೆ ಸಚಿವರು ತಿಳಿಸಿದ್ದಾರೆ.

ಏನಿದು ಎಎಲ್​ಎಂಎಂ?: ಇದು ಮಾಡಲ್ ಮತ್ತು ತಯಾರಕರ ಅನುಮೋದಿತ ಪಟ್ಟಿ. ಸೌರ ಫಲಕಗಳನ್ನು ದೇಶೀಯವಾಗಿ ತಯಾರಿಸುವ ಕಾರ್ಯಕ್ಕೆ ಉತ್ತೇಜನ ನೀಡಲು ಈ ಯೋಜನೆ ರೂಪಿಸಲಾಗಿದೆ. ಸೌರಶಕ್ತಿ ಪಡೆಯಲು ಸೌರಫಲಕಗಳು ಬೇಕು. ಸೋಲಾರ್ ಸೆಲ್, ವೇಫರ್ ಮತ್ತು ಪಾಲಿಸಿಲಿಕಾನ್​ಗಳು ಸೌರ ಫಲಕದ ಪ್ರಮುಖ ಭಾಗಗಳು. ಬಹಳಷ್ಟು ಕಂಪನಿಗಳು ಈ ಮೂರು ವಸ್ತುಗಳನ್ನು ಬೇರೆ ದೇಶಗಳಿಂದ ಭಾರತಕ್ಕೆ ತರಿಸಿಕೊಂಡು ಅಸೆಂಬಲ್ ಮಾಡಿ, ಮೇಡ್ ಇನ್ ಇಂಡಿಯಾ ಎಂದು ಬ್ರ್ಯಾಂಡ್ ಮಾಡುತ್ತಿವೆ. ಆದರೆ, ಸರ್ಕಾರ ಇದನ್ನು ಒಪ್ಪದೇ ಇರಲು ನಿರ್ಧರಿಸಿದೆ.

ಇದನ್ನೂ ಓದಿ: ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗೆ ಇಸ್ರೇಲೀ ಶಕ್ತಿ; ಭಾರತದಲ್ಲಿ ಚಿಪ್ ಫ್ಯಾಕ್ಟರಿ ಸ್ಥಾಪಿಸಲು ಟವರ್ ಸೆಮಿಕಂಡಕ್ಟರ್ ಆಸಕ್ತಿ

‘ನಮ್ಮ ನೀತಿಗಳಲ್ಲಿ ಬದಲಾವಣೆ ಮಾಡುತ್ತೇವೆ. ಮೇಡ್ ಇನ್ ಇಂಡಿಯಾ ಸೆಲ್​ಗಳ ಮಾಡ್ಯೂಲ್​ಗಳನ್ನು ಮಾತ್ರವೇ ರಕ್ಷಿಸುತ್ತೇವೆ. ಒಂದು ಅಥವಾ ಎರಡು ವರ್ಷದಲ್ಲಿ ಅಂಥದ್ದೊಂದು ನೀತಿಯನ್ನು ತರುತ್ತೇವೆ. ಅದಾದ ಬಳಿಕ 1-2 ವರ್ಷಗಳ ನಂತರ ವೇಫರ್ ಮತ್ತು ಪಾಲಿಸಿಲಿಕಾನ್ ಅನ್ನೂ ಕೂಡ ಭಾರತದಲ್ಲಿ ತಯಾರಿಸಬೇಕೆಂಬ ನೀತಿ ತರುತ್ತೇವೆ. ಆಗ ನಿಜವಾದ ಮೇಕ್ ಇನ್ ಇಂಡಿಯಾ ಎನಿಸುತ್ತದೆ’ ಎಂದು ಆರ್ ಕೆ ಸಿಂಗ್ ಹೇಳಿದ್ದಾರೆ.

‘ನೀವು ಹೊರಗಿನಿಂದ ಸೆಲ್ ಆಮದು ಮಾಡಿ ಇಲ್ಲಿಗೆ ತಂದು ಅಸೆಂಬಲ್ ಮಾಡುತ್ತೀರಿ. ಶೇ. 90ರಷ್ಟು ಭಾಗವು ಮೇಡ್ ಇನ್ ಚೀನಾ ಆದರೂ ನೀವು ಮೇಡ್ ಇನ್ ಇಂಡಿಯಾ ಎಂದು ಹೇಳಿ ಮಾರುತ್ತೀರಿ. ಇದು ಮುಂದೆ ಆಗುವುದಿಲ್ಲ’ ಎಂದು ನ್ಯೂ ಅಂಡ್ ರಿನಿವಬಲ್ ಎನರ್ಜಿ ಸಚಿವರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ