Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗೆ ಇಸ್ರೇಲೀ ಶಕ್ತಿ; ಭಾರತದಲ್ಲಿ ಚಿಪ್ ಫ್ಯಾಕ್ಟರಿ ಸ್ಥಾಪಿಸಲು ಟವರ್ ಸೆಮಿಕಂಡಕ್ಟರ್ ಆಸಕ್ತಿ

Tower Semiconductor Interested In India: ಇಸ್ರೇಲೀ ಮೂಲದ ಟವರ್ ಸೆಮಿಕಂಡಕ್ಟರ್ ಕಂಪನಿ ಭಾರತದಲ್ಲಿ ಚಿಪ್ ತಯಾರಿಕಾ ಘಟಕ ಸ್ಥಾಪಿಸಲು ಮತ್ತೆ ಆಸಕ್ತಿ ತೋರಿದೆ. ಸಚಿವ ರಾಜೀವ್ ಚಂದ್ರಶೇಖರ್ ಅವರು ಟವರ್ ಸೆಮಿಕಂಡಕ್ಟರ್​ನ ಸಿಇಒ ರಸೆಲ್ ಸಿ ಎಲ್​ವ್ಯಾಂಗರ್ ಅವರನ್ನು ಮಾತುಕತೆಗೆ ಕರೆದಿರುವುದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಇಸ್ರೇಲ್​ನ ರಾಯಭಾರಿ ನಾವೋರ್ ಗಿಲಾನ್ ಮತ್ತು ರಸೆಲ್ ಎಲ್​ವ್ಯಾಂಗರ್ ಅವರಿಬ್ಬರನ್ನು ಸಚಿವರು ಭೇಟಿ ಮಾಡಿದ್ದರು. ಆಗ ನಡೆದ ಭೇಟಿಯ ನಂತರ ಮುಂದುವರಿದ ಭಾಗವಾಗಿ ಟವರ್ ಸೆಮಿಕಂಡಕ್ಟರ್ ಸಿಇಒ ಅವರನ್ನು ಸಚಿವ ರಾಜೀವ್ ಚಂದ್ರಶೇಖರ್ ಮಾತುಕತೆಗೆ ಆಹ್ವಾನಿಸಿರಬಹುದು ಎನ್ನಲಾಗಿದೆ.

ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗೆ ಇಸ್ರೇಲೀ ಶಕ್ತಿ; ಭಾರತದಲ್ಲಿ ಚಿಪ್ ಫ್ಯಾಕ್ಟರಿ ಸ್ಥಾಪಿಸಲು ಟವರ್ ಸೆಮಿಕಂಡಕ್ಟರ್ ಆಸಕ್ತಿ
ಸೆಮಿಕಂಡಕ್ಟರ್ ಚಿಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2023 | 11:31 AM

ನವದೆಹಲಿ, ಅಕ್ಟೋಬರ್ 22: ಇಸ್ರೇಲೀ ಮೂಲದ ಟವರ್ ಸೆಮಿಕಂಡಕ್ಟರ್ ಕಂಪನಿ ಭಾರತದಲ್ಲಿ ಚಿಪ್ ತಯಾರಿಕಾ ಘಟಕ (semiconductor fab unit) ಸ್ಥಾಪಿಸಲು ಮತ್ತೆ ಆಸಕ್ತಿ ತೋರಿದೆ. ಭಾರತ ಸರ್ಕಾರ ಜಾರಿಗೆ ತಂದಿರುವ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಚಿಪ್ ತಯಾರಿಕೆಗೆ 10 ಬಿಲಿಯನ್ ಡಾಲರ್ ಮೀಸಲಿಡಲಾಗಿದೆ. ಈ ಸ್ಕೀಮ್ ಅನ್ನು ಬಳಸಲು ಟವರ್ ಸೆಮಿಕಂಡಕ್ಟರ್ ಆಸಕ್ತವಾಗಿದೆ. ಟವರ್ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ತಯಾರಿಕೆಯಲ್ಲಿ ತೊಡಗಿರುವ ಕಂಪನಿ. ಭಾರತದಲ್ಲಿ ಅದರ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಲ್ಲಿ ಭಾರತದಲ್ಲಿ ನಿಜವಾದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆಯಾಗಲಿದೆ.

ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಟವರ್ ಸೆಮಿಕಂಡಕ್ಟರ್​ನ ಸಿಇಒ ರಸೆಲ್ ಸಿ ಎಲ್​ವ್ಯಾಂಗರ್ (Russel C Ellwanger) ಅವರನ್ನು ಮಾತುಕತೆಗೆ ಕರೆದಿರುವುದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಇಸ್ರೇಲ್​ನ ರಾಯಭಾರಿ ನಾವೋರ್ ಗಿಲಾನ್ (Naor Gilon) ಮತ್ತು ರಸೆಲ್ ಎಲ್​ವ್ಯಾಂಗರ್ ಅವರಿಬ್ಬರನ್ನು ಸಚಿವರು ಭೇಟಿ ಮಾಡಿದ್ದರು. ಆಗ ನಡೆದ ಭೇಟಿಯ ನಂತರ ಮುಂದುವರಿದ ಭಾಗವಾಗಿ ಟವರ್ ಸೆಮಿಕಂಡಕ್ಟರ್ ಸಿಇಒ ಅವರನ್ನು ಸಚಿವ ರಾಜೀವ್ ಚಂದ್ರಶೇಖರ್ ಮಾತುಕತೆಗೆ ಆಹ್ವಾನಿಸಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: Google Super App A: ಜನಸಾಮಾನ್ಯರಿಗಾಗಿ ಗೂಗಲ್ ಸೂಪರ್ ಆಪ್, ವಿಶೇಷತೆಗಳು ಹೀಗಿವೆ

ಅನಲಾಗ್ ಚಿಪ್​ಗಳನ್ನು ತಯಾರಿಸುವ ಟವರ್

ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್ ವಿಶ್ವದ ಪ್ರಮುಖ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಲ್ಲಿ ಒಂದು. ಹಳೆಯ ತಂತ್ರಜ್ಞಾನದಲ್ಲಿ ಅನಲಾಗ್ ಚಿಪ್​ಗಳನ್ನು ತಯಾರಿಸುವ ಒಂದು ಕಂಪನಿ. ಸೆಲ್ ಫೋನ್ ಮತ್ತಿತರ ಉತ್ಪನ್ನಗಳಿಗೆ ವಿದ್ಯುತ್ ನಿರ್ವಹಿಸುವ ಮತ್ತು ಸಿಗ್ನಲ್​ಗಳನ್ನು ಆ್ಯಂಪ್ಲಿಫೈ ಮಾಡುವಂತಹ ಕಾರ್ಯಗಳಿಗೆ ಈ ಅನಲಾಗ್ ಚಿಪ್​ಗಳನ್ನು ಬಳಸಲಾಗುತ್ತದೆ.

ಇಸ್ರೇಲ್, ಅಮೆರಿಕ ಮತ್ತು ಜಪಾನ್ ದೇಶಗಳಲ್ಲಿ ಟವರ್ ಸೆಮಿಕಂಡಕ್ಟರ್ ಕಂಪನಿ ಫ್ಯಾಬ್ ಘಟಕಗಳನ್ನು ಹೊಂದಿದೆ. ಭಾರತದಲ್ಲಿ ಇದು ಫ್ಯಾಕ್ಟರಿ ತೆರೆದರೆ ಬಹಳ ಗಮನಾರ್ಹ ಸಂಗತಿ ಎನಿಸಲಿದೆ.

ಇದನ್ನೂ ಓದಿ: Forex Reserves: ಅ. 13ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 585.89 ಬಿಲಿಯನ್ ಡಾಲರ್​ಗೆ ಏರಿಕೆ

ಭಾರತದಲ್ಲಿ ಇನ್ನೂ ಹೆಜ್ಜೆ ಊರದ ಸೆಮಿಕಂಡಕ್ಟರ್…!

ಡಿಜಿಟಲ್ ಜಗತ್ತಿನಲ್ಲಿ ಬಹಳ ಪ್ರಮುಖ ಪಾತ್ರ ಇರುವ ಸೆಮಿಕಂಡಕ್ಟರ್​ಗಳನ್ನು ತಯಾರಿಸಲು ಭಾರತ ಬಹಳ ಆಸಕ್ತವಾಗಿದೆ. ಚೀನಾ ಬಳಿಕ ವಿಶ್ವದ ಮ್ಯಾನುಫ್ಯಾಕ್ಚರಿಂಗ್ ಅಡ್ಡೆಯಾಗುವ ಆಸೆಯಲ್ಲಿರುವ ಭಾರತಕ್ಕೆ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರ ಬಹಳ ಮುಖ್ಯ. ಫಾಕ್ಸ್​ಕಾನ್, ವೇದಾಂತ, ಮೈಕ್ರೋನ್, ಐಎಸ್​ಎಂಸಿ, ಟವರ್ ಮೊದಲಾದ ಕಂಪನಿಗಳು ಆಸಕ್ತಿ ತೋರಿವೆಯಾದರೂ ಇನ್ನೂ ಅದು ಸಾಕಾರಗೊಂಡಿಲ್ಲ. ಐಎಸ್​ಎಂಸಿ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ತೆರೆಯುವುದಾಗಿ ಹೇಳಿತ್ತು.

ಇವ್ಯಾವುವೂ ಕೂಡ ಸಾಕಾರಗೊಂಡಿಲ್ಲ. ಫಾಕ್ಸ್​ಕಾನ್ ಮತ್ತು ವೇದಾಂತ ಕಂಪನಿಗಳಿಗೆ ಫ್ಯಾಬ್ರಿಕೇಶನ್ ಅನುಭವ ಇಲ್ಲ. ಜಾಗತಿಕ ಸೆಮಿಕಂಡಕ್ಟರ್ ಫ್ಯಾಬ್ ಕಂಪನಿಗಳೊಂದಿಗೆ ಸಹಭಾಗಿತ್ವದಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಕ್ಟರಿ ಮಾಡಲು ಹೊರಟಿವೆ. ಆದರೆ, ಗ್ಲೋಬಲ್ ಪಾರ್ಟ್ನರ್​ಗಳು ಇನ್ನೂ ಸಿಕ್ಕಿಲ್ಲ.ಲ ಈ ಹಿನ್ನೆಲೆಯಲ್ಲಿ ಟವರ್ ಸೆಮಿಕಂಡಕ್ಟರ್ ಕಂಪನಿ ಭಾರತದಲ್ಲಿ ಫ್ಯಾಕ್ಟರಿ ಶುರು ಮಾಡಿದರೆ ಅದು ಪ್ರಮುಖ ಮೈಲಿಗಲ್ಲಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್