2028ರಷ್ಟರಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಶೇ. 18ಕ್ಕೆ ಏರಿಕೆ: ಐಎಂಎಫ್ ಅಂದಾಜು

India Contribution to Global Growth: ಜಾಗತಿಕ ಬೆಳವಣಿಗೆಯಲ್ಲಿ ಚೀನಾದ್ದು ಸಿಂಹಪಾಲಿದೆ. 2023 ಮತ್ತು 2024ರ ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಚೀನಾ ಮತ್ತು ಭಾರತದ್ದಾಗಿತ್ತು. ಚೀನಾದ ಪ್ರಾಬಲ್ಯವು ಮುಂದಿನ ಐದು ವರ್ಷವೂ ಮುಂದುವರಿಯಲಿದೆ. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಹೆಚ್ಚಾಗಲಿದೆ ಎಂದು ಐಎಂಎಫ್ ಹೇಳಿದೆ.

2028ರಷ್ಟರಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಶೇ. 18ಕ್ಕೆ ಏರಿಕೆ: ಐಎಂಎಫ್ ಅಂದಾಜು
ಭಾರತದ ಆರ್ಥಿಕ ಬೆಳವಣಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2023 | 12:59 PM

ಮುಂಬೈ, ಅಕ್ಟೋಬರ್ 22: ಭಾರತದ ಆರ್ಥಿಕ ಬೆಳವಣಿಗೆಯ ಸಾಧ್ಯತೆ ಬಗ್ಗೆ ಬಹಳ ಸಂಸ್ಥೆಗಳು ಸಕಾರಾತ್ಮಕವಾಗಿ ಅಭಿಪ್ರಾಯ ನೀಡಿವೆ. ಅಂತಾರಾಷ್ಟ್ರಿಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಹೆಚ್ಚಾಗಲಿದೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಐಎಂಎಫ್​ನ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್, 2028ರಲ್ಲಿ ವಿಶ್ವ ಬೆಳವಣಿಗೆಯಲ್ಲಿ ಭಾರತದ ಪಾಲು (India’s contribution to global growth) ಶೇ. 18ರಷ್ಟಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲಿರುವುದು ಶೇ. 16ರಷ್ಟು. ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿ ಆಗಲಿರುವುದರ ಸೂಚನೆ ಇದು.

ಜಾಗತಿಕ ಬೆಳವಣಿಗೆಯಲ್ಲಿ ಚೀನಾದ್ದು ಸಿಂಹಪಾಲಿದೆ. 2023 ಮತ್ತು 2024ರ ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಚೀನಾ ಮತ್ತು ಭಾರತದ್ದಾಗಿತ್ತು. ಚೀನಾದ ಪ್ರಾಬಲ್ಯವು ಮುಂದಿನ ಐದು ವರ್ಷವೂ ಮುಂದುವರಿಯಲಿದೆ. ಐಎಂಎಫ್ ಅಂದಾಜು ಪ್ರಕಾರ 2028ರಷ್ಟರಲ್ಲಿ ಚೀನಾದ ಜಿಡಿಪಿ 23.61 ಟ್ರಿಲಿಯನ್ ಡಾಲರ್​ಗೆ ಏರಲಿದೆ. ಭಾರತದ ಜಿಡಿಪಿ 5.95 ಟ್ರಿಲಿಯನ್ ಡಾಲರ್​ಗೆ ಏರಲಿದೆ.

ಇದನ್ನೂ ಓದಿ: ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗೆ ಇಸ್ರೇಲೀ ಶಕ್ತಿ; ಭಾರತದಲ್ಲಿ ಚಿಪ್ ಫ್ಯಾಕ್ಟರಿ ಸ್ಥಾಪಿಸಲು ಟವರ್ ಸೆಮಿಕಂಡಕ್ಟರ್ ಆಸಕ್ತಿ

ಚೀನಾ ಬೆಳವಣಿಗೆ ಭಾರತ ಸದ್ಯ ಸಾಟಿ ಇಲ್ಲ…

ಭಾರತದ ಜಿಡಿಪಿ ವೃದ್ಧಿದರ ಚೀನಾಗಿಂತಲೂ ಹೆಚ್ಚಿದೆಯಾದರೂ ಆರ್ಥಿಕತೆಯ ಬೆಳವಣಿಗೆಯ ಪ್ರಮಾಣದಲ್ಲಿ ಚೀನಾಗಿಂತ ಭಾರತ ಬಹಳ ಹಿಂದಿದೆ. ಚೀನಾದ ಆರ್ಥಿಕತೆ ಬಹಳ ದೊಡ್ಡದಿರುವುದರಿಂದ ಮತ್ತು ಜಾಗತಿಕ ಹೂಡಿಕೆಯಲ್ಲಿ ಹೆಚ್ಚು ಪಾಲಿರುವುದರಿಂದ ಭಾರತವು ಚೀನಾವನ್ನು ಸರಿಗಟ್ಟುವ ದಿನ ಬಹಳ ದೂರ ಇದೆ ಎಂಬುದು ಹಲವು ಆರ್ಥಿಕ ತಜ್ಞರ ಅಭಿಮತ.

ಆದರೆ, ಇನ್ನು 50 ವರ್ಷದಲ್ಲಿ ಭಾರತದ ಆರ್ಥಿಕತೆಯು ಚೀನಾದ ಸಮಕ್ಕೆ ಬರಬಹುದು ಎಂಬ ಅನಿಸಿಕೆಯಂತೂ ತಜ್ಞರು ವ್ಯಕ್ತಪಡಿಸಿರುವುದುಂಟು. ಭಾರತದ ಆರ್ಥಿಕತೆಯ ವೇಗ ಸ್ಥಿರವಾಗಿ ಸಾಗಿದರೆ ಮಾತ್ರ ಇದು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ