AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trump vs Pak- ಪಾಕಿಸ್ತಾನದಿಂದ ಭಾರತಕ್ಕೆ ತೈಲ ಮಾರುವ ದಿನ ಬರುತ್ತೆ: ಟ್ರಂಪ್ ಹೊಸ ವರಸೆ

Donald Trump wants to develop oil reserves in Pakistan: ಅಮೆರಿಕದೊಂದಿಗೆ ಟ್ರೇಡ್ ಡೀಲ್ ಕುದುರಿಸಿಕೊಂಡು ಪಾಕಿಸ್ತಾನವು ಅಧಿಕ ಟ್ಯಾರಿಫ್ ಹೊಡೆತದಿಂದ ಪಾರಾಗಿದೆ. ಪಾಕಿಸ್ತಾನ ಮತ್ತು ಅಮೆರಿಕ ನಡುವೆ ಜುಲೈ 30-31ರಂದು ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದನ್ನು ಟ್ರಂಪ್ ಘೋಷಿಸಿದ್ದಾರೆ. ಈ ಟ್ರೇಡ್ ಡೀಲ್​ನಲ್ಲಿ ತೈಲ ಅನ್ವೇಷಣೆ ಯೋಜನೆಯೂ ಸೇರಿದೆ. ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ನಿಕ್ಷೇಪಗಳಿರುವುದು ಪತ್ತೆಯಾಗಿದೆ.

Trump vs Pak- ಪಾಕಿಸ್ತಾನದಿಂದ ಭಾರತಕ್ಕೆ ತೈಲ ಮಾರುವ ದಿನ ಬರುತ್ತೆ: ಟ್ರಂಪ್ ಹೊಸ ವರಸೆ
ಅಮೆರಿಕ ಪಾಕಿಸ್ತಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 31, 2025 | 4:15 PM

Share

ನವದೆಹಲಿ, ಜುಲೈ 31: ಟ್ರಂಪ್​ರ ಡೆಡ್​ಲೈನ್​ನೊಳಗೆ ಅಮೆರಿಕದೊಂದಿಗೆ ಪಾಕಿಸ್ತಾನ ಟ್ರೇಡ್ ಡೀಲ್ ಮಾಡಿಕೊಂಡಿದೆ. ಆಗಸ್ಟ್ 1ರಿಂದ ಬೀಸುತ್ತಿದ್ದ ಟ್ರಂಪ್ ದೊಣ್ಣೆಯಿಂದ ಪಾಕಿಸ್ತಾನ (Pakistan) ಬಚಾವಾಗಿದೆ. ಹೆಚ್ಚಿನ ಟ್ಯಾರಿಫ್ ಬೀಳುವುದನ್ನು ಪಾಕಿಸ್ತಾನ ತಪ್ಪಿಸಿದೆ. ಭಾರತಕ್ಕೆ ಟ್ರಂಪ್ ಶೇ. 25 ಟ್ಯಾರಿಫ್ ಹಾಕುವುದನ್ನು ಕಂಡು ಪಾಕಿಸ್ತಾನ ಮುಗುಳ್ನಗುತ್ತಿದೆ. ಆದರೆ, ಪಾಕಿಸ್ತಾನಕ್ಕೆ ಅಮೆರಿಕ ಎಷ್ಟು ತೆರಿಗೆ ವಿಧಿಸುತ್ತದೆ, ಅಥವಾ ಕಡಿಮೆ ಮಾಡಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ಈ ಟ್ರೇಡ್ ಡೀಲ್​ನಲ್ಲಿ ಪಾಕಿಸ್ತಾನದ ತೈಲವನ್ನು ಹೆಕ್ಕಿ ತೆಗೆಯುವ ಯೋಜನೆಯೂ ಸೇರಿದೆ. ಇದು ಪಾಕಿಸ್ತಾನದ ಮೇಲೆ ಅಮೆರಿಕದ ಆಕರ್ಷಣೆ ಹೆಚ್ಚಲು ಕಾರಣವಾ?

‘ಪಾಕಿಸ್ತಾನದ ಜೊತೆ ಈಗಷ್ಟೇ ಒಪ್ಪಂದ ಅಂತಿಮಗೊಳಿಸಿದ್ದೇವೆ. ಪಾಕಿಸ್ತಾನಲ್ಲಿರುವ ಭಾರೀ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ನೆರವಾಗಲಿದೆ. ಈ ಪಾಲುದಾರಿಕೆಯನ್ನು ಯಾವ ತೈಲ ಕಂಪನಿ ಮುನ್ನಡೆಸಬೇಕೆಂದು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ಯಾರಿಗೆ ಗೊತ್ತು, ಒಂದು ದಿನ ಅವರು ಭಾರತಕ್ಕೆ ತೈಲ ಮಾರುವ ದಿನ ಬರಬಹುದು’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ

ಇದರ ಜೊತೆಗೆ, ಟ್ರಂಪ್ ಅವರ ಕುಹಕದ ಮಾತುಗಳು ಮುಂದುವರಿದಿವೆ. ಬೇರೆ ದೇಶಗಳು ಅಮೆರಿಕವನ್ನು ಸಂತುಷ್ಟಗೊಳಿಸಲು ಬಯಸುತ್ತಿವೆ ಎಂದು ಉದ್ದಟತನದಿಂದ ಹೇಳಿದ್ದಾರೆ.

‘ವೈಟ್​ಹೌಸ್​ನಲ್ಲಿ ಕೂತು ಟ್ರೇಡ್ ಡೀಲ್​ಗಳಲ್ಲಿ ನಾವು ಬ್ಯುಸಿಯಾಗಿಬಿಟ್ಟಿದ್ದೇವೆ. ಹಲವು ದೇಶಗಳ ಮುಖಂಡರ ಜೊತೆ ನಾನು ಮಾತನಾಡಿದ್ದೇನೆ. ಅವರೆಲ್ಲರೂ ಅಮೆರಿಕವನ್ನು ಅತಿಯಾಗಿ ಸಂತುಷ್ಟಿಗೊಳಿಸಲು ಹಾತೊರೆಯುತ್ತಿದ್ದಾರೆ. ಇದೇ ಮಧ್ಯಾಹ್ನ ನಾನು ಸೌತ್ ಕೊರಿಯಾದ ಟ್ರೇಡ್ ನಿಯೋಗವನ್ನು ಭೇಟಿ ಮಾಡುತ್ತಿದ್ದೇನೆ. ಸೌತ್ ಕೊರಿಯಾಗೆ ಸದ್ಯ ಶೇ. 25 ಟ್ಯಾರಿಫ್ ಹಾಕುತ್ತಿದ್ದೇವೆ. ಈ ಟ್ಯಾರಿಫ್ ಅನ್ನು ಖರೀದಿಸುವ ಆಫರ್ ಅವರಿಂದ ಇದೆ. ಏನದು ಆ ಆಫರ್ ಎಂದು ತಿಳಿಯಲು ಕುತೂಹಲ ಹೊಂದಿದ್ದೇನೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ತೈಲ ನಿಕ್ಷೇಪಗಳು ಇರುವುದು ನಿಜವಾ?

ಇತ್ತೀಚಿನ ಕೆಲ ವರ್ಷಗಳಿಂದ ಪಾಕಿಸ್ತಾನದ ವಿವಿಧೆಡೆ ದೊಡ್ಡ ಪ್ರಮಾಣದ ತೈಲ ಮತ್ತು ಅನಿಲ ನಿಕ್ಷೇಪಗಳಿರುವುದು ಪತ್ತೆಯಾಗಿದೆ. ಸಿಂಧೂ ಜಲಾನಯನ ಭಾಗದಲ್ಲಿ ಭಾರೀ ಪ್ರಮಾಣದ ಹೈಡ್ರೋಕಾರ್ಬನ್ ವಲಯ ಇರಬಹುದು ಎಂಬದು 3ಡಿ ಸೀಸ್ಮಿಕ್ ಮ್ಯಾಪಿಂಗ್​ನಿಂದ ಗೊತ್ತಾಗಿದೆ. ಫಾಕಿರ್-1 ಎಂಬಲ್ಲೂ ಹೈಡ್ರೋಕಾರ್ಬನ್ ಇರುವುದು ಪತ್ತೆಯಾಗಿದೆ. ನಾರ್ತ್ ವಜಿರಿಸ್ತಾನ್​ನಲ್ಲಿ ತೈಲ ನಿಕ್ಷೇಪಗಳು ಪತ್ತೆಯಾಗಿವೆ.

ಇದನ್ನೂ ಓದಿ: ಆ. 1ರಿಂದ ಭಾರತದ ಮೇಲೆ ಶೇ. 25 ಟ್ಯಾರಿಫ್: ಅಮೆರಿಕ ಅಧ್ಯಕ್ಷ ಘೋಷಣೆ

ಇವುಗಳನ್ನು ಹೆಕ್ಕಿ ತೆಗೆಯಲು ಅಮೆರಿಕ ಆಸಕ್ತವಾಗಿದೆ. ಅಮೆರಿಕನ್ ಕಂಪನಿಗಳಿಗೆ ಇದರ ಗುತ್ತಿಗೆ ಸಿಗಬಹುದು. ಪಾಕಿಸ್ತಾನದಲ್ಲಿ ತೈಲ ಸಿಕ್ಕಿದ್ದೇ ಆದರಲ್ಲಿ ಅದರ ಹೆಚ್ಚಿನ ನಿಯಂತ್ರಣವು ಅಮೆರಿಕನ್ ಕಂಪನಿಗಳ ಕೈಗೆ ಹೋಗುತ್ತದೆ. ಈ ಮೂಲಕ ಅಮೆರಿಕ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ