AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್​ನ ಆಟಾಟೋಪದ ನಡುವೆ ಗೂಗಲ್​ನಿಂದ ಭಾರತದಲ್ಲಿ ಭರ್ಜರಿ ಹೂಡಿಕೆ; ವಿಶಾಖಪಟ್ಟಣಂನಲ್ಲಿ 1GW ಡಾಟಾಸೆಂಟರ್

Google to build Asia's biggest data center in Vishakhapatnam: ಗೂಗಲ್ ಸಂಸ್ಥೆ ಏಷ್ಯಾದಲ್ಲಿ ತನ್ನ ಡಾಟಾಸೆಂಟರ್​ಗಳನ್ನು ವಿಸ್ತರಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ತನ್ನ ಮೊದಲ ಡಾಟಾ ಸೆಂಟರ್ ನಿರ್ಮಿಸಲಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ಬೃಹತ್ ಡಾಟಾಸೆಂಟರ್ ನಿರ್ಮಿಸಲು ಗೂಗಲ್ 6 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಇದು ಏಷ್ಯಾದಲ್ಲೇ ಅತಿದೊಡ್ಡ ಡಾಟಾಸೆಂಟರ್ ಎನಿಸಲಿದೆ.

ಟ್ರಂಪ್​ನ ಆಟಾಟೋಪದ ನಡುವೆ ಗೂಗಲ್​ನಿಂದ ಭಾರತದಲ್ಲಿ ಭರ್ಜರಿ ಹೂಡಿಕೆ; ವಿಶಾಖಪಟ್ಟಣಂನಲ್ಲಿ 1GW ಡಾಟಾಸೆಂಟರ್
ಗೂಗಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 31, 2025 | 1:03 PM

Share

ನವದೆಹಲಿ, ಜುಲೈ 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅತಿರೇಕದ ಮಾತಿನ ವರಸೆಗಳ ಮಧ್ಯೆ ಅಮೆರಿಕ ಮೂಲದ ಜಾಗತಿಕ ಟೆಕ್ನಾಲಜಿ ದೈತ್ಯ ಗೂಗಲ್ ಸಂಸ್ಥೆ ಭಾರತದಲ್ಲಿ ಬೃಹತ್ ಡಾಟಾ ಸೆಂಟರ್ ನಿರ್ಮಿಸಲು ಹೊರಟಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ಆರು ಬಿಲಿಯನ್ ಡಾಲರ್ (ಸುಮಾರು 52,000 ಕೋಟಿ ರೂ) ಹೂಡಿಕೆಯಲ್ಲಿ ಗೂಗಲ್ 1 ಜಿಡಬ್ಲ್ಯು ಡಾಟಾ ಸೆಂಟರ್ ಅನ್ನು ನಿರ್ಮಿಸುವ ಯೋಜನೆ ಹೊಂದಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗೂಗಲ್​ನ ಈ ಡಾಟಾ ಸೆಂಟರ್ ಏಷ್ಯಾದಲ್ಲೇ ಅತಿದೊಡ್ಡದೆನಿಸಲಿದೆ. ಸಿಂಗಾಪುರ, ಮಲೇಷ್ಯಾ, ಥಾಯ್ಲೆಂಡ್ ಮೊದಲಾದ ದೇಶಗಳಲ್ಲಿ ಗೂಗಲ್ ಡಾಟಾಸೆಂಟರ್ ಸ್ಥಾಪಿಸುತ್ತಿದೆ. ಅಲ್ಲಿರುವುದಕ್ಕಿಂತಲೂ ದೊಡ್ಡದೆನಿಸಿದ ಡಾಟಾಸೆಂಟರ್ ಅನ್ನು ವಿಶಾಖಪಟ್ಟಣಂನಲ್ಲಿ ನಿರ್ಮಿಸುವ ಉದ್ದೇಶ ಇದೆ. ಈ ಬೃಹತ್ ಯೋಜನೆಯಲ್ಲಿ 2 ಬಿಲಿಯನ್ ಡಾಲರ್ ವೆಚ್ಚದ ನವೀಕರಣ ಇಂಧನ ಅಭಿವೃದ್ಧಿಯೂ ಒಳಗೊಂಡಿದೆ. ಇಲ್ಲಿ ತಯಾರಾಗುವ ವಿದ್ಯುತ್ ಅನ್ನು ಡಾಟಾಸೆಂಟರ್​ನ ಅಗತ್ಯಗಳಿಗೆ ಪೂರೈಸಲು ಸಾಕಾಗುತ್ತದೆ.

ಇದನ್ನೂ ಓದಿ: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ

ಆಂಧ್ರದಲ್ಲಿ 6 ಗಿಗಾವ್ಯಾಟ್ ಡಾಟಾ ಸೆಂಟರ್?

ಆಂಧ್ರದಲ್ಲಿ ಗೂಗಲ್ 1 ಗಿಗಾ ವ್ಯಾಟ್ ಡಾಟಾ ಸೆಂಟರ್ ನಿರ್ಮಿಸುತ್ತಿದೆ. ಇತರ ಸಂಸ್ಥೆಗಳಿಂದಲೂ ಆಂಧ್ರದಲ್ಲಿ ಡಾಟಾ ಸೆಂಟರ್​ಗಳು ನಿರ್ಮಾಣವಾಗಲಿವೆ. ಆಂದ್ರದ ಐಟಿ ಸಚಿವ ನಾರ ಲೋಕೇಶ್ ಪ್ರಕಾರ, ಈಗಾಗಲೇ 1.6 ಗಿಗಾವ್ಯಾಟ್​ಗಳ ಡಾಟಾ ಸೆಂಟರ್​ಗಳ ಸ್ಥಾಪನೆಗೆ ಹೂಡಿಕೆಗಳನ್ನು ಅಂತಿಮಗೊಳಿಸಲಾಗಿದೆ. ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ 6 ಗಿಗಾವ್ಯಾಟ್​ನ ಡಾಟಾಸೆಂಟರ್​ಗಳನ್ನು ನಿರ್ಮಿಸುವ ಗುರಿ ಎಂದು ಸಚಿವರು ಹೇಳಿದ್ದಾರೆ.

ಆಂಧ್ರದಲ್ಲಿ ಮುಂಬೈಗಿಂತ ಎರಡು ಪಟ್ಟು ದೊಡ್ಡ ಕೇಬಲ್ ನೆಟ್ವರ್ಕ್?

ಆಂಧ್​ರ ಸರ್ಕಾರವು ತನ್ನ ರಾಜ್ಯದಲ್ಲಿ ಡಿಜಿಟಲ್ ಮೂಲಸೌಕರ್ಯ ವಿಸ್ತರಿಸುತ್ತಿದೆ. ವಿಶಾಖಪಟ್ಟಣನಲ್ಲಿ ಮೂರು ಹೊಸ ಕೇಬಲ್ ಲ್ಯಾಂಡಿಂಗ್ ಸ್ಟೇಷನ್​ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯವಹಿಸಲಾಗುತ್ತಿದೆ ಎಂದು ಸಚಿವ ನಾರ ಲೋಕೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಶೇ.25 ರಷ್ಟು ಸುಂಕ ಬೆನ್ನಲ್ಲೇ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ

ಈ ಕೇಬಲ್ ಲ್ಯಾಂಡಿಂಗ್ ಸ್ಟೇಷನ್​ಗಳು ಜಾಗತಿಕ ನೆಟ್ವರ್ಕ್​ಗಳಿಗೆ ಬಹಳ ವೇಗದ ಮತ್ತು ಸಮರ್ಪಕ ಕನೆಕ್ಷನ್​ಗಳನ್ನು ನೀಡಲು ಉಪಯುಕ್ತ ಎನಿಸುತ್ತವೆ ಎನ್ನಲಾಗಿದೆ. ಸಚಿವ ನಾರಾ ಲೋಕೇಶ್ ಪ್ರಕಾರ, ಮುಂಬೈನಲ್ಲಿ ಈಗ ಇರುವುದಕ್ಕಿಂತ ಎರಡು ಪಟ್ಟು ದೊಡ್ಡದಾದ ಕೇಬಲ್ ನೆಟ್ವರ್ಕ್ ನಿರ್ಮಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ