‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಮಲಗಿಸ್ತೀನಿ ಎಂದವರು ದೇವರಿಗೆ ವಂದಿಸ್ತಾರೆ’; ಪ್ರಥಮ್
ದರ್ಶನ್ ಫ್ಯಾನ್ಸ್ vs ಪ್ರಥಮ್ ಎಂಬಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ದರ್ಶನ್ ಫ್ಯಾನ್ಸ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ. ಈಗ ಪ್ರಥಮ್ ಒಂದು ಪ್ರಶ್ನೆ ಕೇಳಿದ್ದಾರೆ. ಅದೃಷ್ಟದೇವತೆ ಬಟ್ಟೆ ಬಿಚ್ಚಿಸಿ ಬೆಡ್ರೂಂನಲ್ಲಿ ಮಲಗಸ್ತೀನಿ ಎಂದವರು ಈಗ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದಿದ್ದಾರೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ (Vijayalkshmi) ಅವರು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವಿಚಾರದ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ಈ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡುವಾಗ ದರ್ಶನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ‘ಅದೃಷ್ಟದೇವತೆ ಬಂದರೆ ಅದರ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಕೂಡಿ ಹಾಕಬೇಕು. ಆಗ ಅದು ಎಲ್ಲಿಯೂ ಹೋಗಲ್ಲ’ ಎಂಬರ್ಥದಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ಪ್ರಥಮ್ ಉಲ್ಲೇಖಿಸಿದ್ದಾರೆ. ‘ದರ್ಶನ್ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಈ ಮೊದಲು ಅದೃಷ್ಟ ಲಕ್ಷ್ಮಿ ಬಂದರೆ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಕೂಡಿ ಹಾಕ್ತಿನಿ ಎಂದವರು ಈಗ ಹೋಗಿ ಕಾಮಾಕ್ಯ ದೇವರಿಗೆ ವಂದಿಸುತ್ತಿದ್ದಾರೆ’ ಎಂದಿದ್ದಾರೆ ಪ್ರಥಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 31, 2025 11:06 AM
Latest Videos

