AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಂವರ್ಕ್ ಮಾಡಿಲ್ಲವೆಂದು ಕೆನ್ನೆಗೆ ಬಾರಿಸಿದ ಟೀಚರ್; ಕುಸಿದುಬಿದ್ದು ಪ್ರಾಣಬಿಟ್ಟ 6 ವರ್ಷದ ಮಗು!

ಹೋಂವರ್ಕ್ ಮಾಡಿಲ್ಲವೆಂದು ಕೆನ್ನೆಗೆ ಬಾರಿಸಿದ ಟೀಚರ್; ಕುಸಿದುಬಿದ್ದು ಪ್ರಾಣಬಿಟ್ಟ 6 ವರ್ಷದ ಮಗು!

ಸುಷ್ಮಾ ಚಕ್ರೆ
|

Updated on: Aug 20, 2026 | 10:41 PM

Share

ಅಧಿಕಾರಿಗಳು ವಶಪಡಿಸಿಕೊಂಡಿರುವ ಶಾಲೆಯ ಸಿಸಿಟಿವಿ (CCTV) ದೃಶ್ಯಾವಳಿಯಲ್ಲಿ, ಶಿಕ್ಷಕಿ ಮಗುವಿಗೆ ಗದರಿಸುವುದು ಮತ್ತು ಪೆಟ್ಟು ಕೊಟ್ಟಿರುವುದು ಕಂಡುಬಂದಿದೆ. ತದನಂತರ ಮಗು ಜೋರಾಗಿ ಅಳುತ್ತಾ, ಶಿಕ್ಷಕಿಯ ಬಳಿ ಬೇಡುವಂತೆ ಕೈಗಳನ್ನು ಆಡಿಸುವುದು ಕಾಣಿಸುತ್ತದೆ. ನಂತರ ಶಿಕ್ಷಕಿ ಆತನ ಶರ್ಟ್ ಮತ್ತು ಪ್ಯಾಂಟ್ ಸರಿಪಡಿಸಿ ಕಪಾಳಕ್ಕೆ ಬಾರಿಸುತ್ತಾಳೆ. ಅದಾದ ಕೆಲವೇ ಸೆಕೆಂಡುಗಳಲ್ಲಿ ಮಗು ಆಕೆಯ ಮೇಲೆ ಕುಸಿದು ಬೀಳುತ್ತದೆ. ಶಿಕ್ಷಕಿ ಕುಳಿತಲ್ಲಿಂದಲೇ ಮಗುವನ್ನು ಎತ್ತಲು ಪ್ರಯತ್ನಿಸುತ್ತಾರಾದರೂ, ಮಗುವಿನಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಮಗು ಮೃತಪಟ್ಟಿತ್ತು. ಮಗುವಿಗೆ ಏನಾಯಿತು ಎಂಬುದನ್ನು ಕಂಡುಕೊಳ್ಳಲು ಪೊಲೀಸರು ಶಾಲೆಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ.

ವಿಶಾಖಪಟ್ಟಣ, ಆಗಸ್ಟ್ 20: ಖಾಸಗಿ ಶಾಲೆಯೊಂದರಲ್ಲಿ ಹೋಮ್‌ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಕಪಾಳಮೋಕ್ಷ ಮಾಡಿದ್ದರಿಂದ 6 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕೋಲು ಹಿಡಿದುಕೊಂಡು ಶಿಕ್ಷಕಿ ಗದರಿದ ನಂತರ 6 ವರ್ಷದ ಬಾಲಕ ಹೆದರಿ ಕಂಗಾಲಾಗಿ, ಕೆಮ್ಮಲು ಪ್ರಾರಂಭಿಸಿ ಶಾಲೆಯಲ್ಲೇ ಕುಸಿದು ಬಿದ್ದಿದ್ದಾನೆ. ಶಿಕ್ಷಕಿ ನಡೆಸಿದ ಹಲ್ಲೆಯ ನಂತರವೇ ಈ ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ವಶಪಡಿಸಿಕೊಂಡಿರುವ ಶಾಲೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಿಕ್ಷಕಿ ಮಗುವಿಗೆ ಗದರಿಸುವುದು ಮತ್ತು ಪೆಟ್ಟು ಕೊಟ್ಟಿರುವುದು ಕಂಡುಬಂದಿದೆ.

ಮಗು ಜೋರಾಗಿ ಅಳುತ್ತಾ, ಶಿಕ್ಷಕಿಯ ಬಳಿ ಬೇಡುವಂತೆ ಕೈಗಳನ್ನು ಆಡಿಸುವುದು ಕಾಣಿಸುತ್ತದೆ. ನಂತರ ಶಿಕ್ಷಕಿ ಆತನ ಶರ್ಟ್ ಮತ್ತು ಪ್ಯಾಂಟ್ ಸರಿಪಡಿಸಿ ಕಪಾಳಕ್ಕೆ ಬಾರಿಸುತ್ತಾಳೆ. ಅದಾದ ಕೆಲವೇ ಸೆಕೆಂಡುಗಳಲ್ಲಿ ಮಗು ಆಕೆಯ ಮೇಲೆ ಕುಸಿದು ಬೀಳುತ್ತದೆ. ಶಿಕ್ಷಕಿ ಕುಳಿತಲ್ಲಿಂದಲೇ ಮಗುವನ್ನು ಎತ್ತಲು ಪ್ರಯತ್ನಿಸುತ್ತಾರಾದರೂ, ಮಗುವಿನಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಮಗು ಮೃತಪಟ್ಟಿತ್ತು. ಮಗುವಿಗೆ ಏನಾಯಿತು ಎಂಬುದನ್ನು ಕಂಡುಕೊಳ್ಳಲು ಪೊಲೀಸರು ಶಾಲೆಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us