‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್ಗಳು
‘ಟಾಕ್ಸಿಕ್’ ಸಿನಿಮಾ ವಿದೇಶದಲ್ಲಿ ಕೂಡ ಒಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ (ಆಗಸ್ಟ್ 21) ಈ ಚಿತ್ರದ ಟಿಕೆಟ್ ಬುಕಿಂಗ್ ಆರಂಭ ಆಗುತ್ತಿದೆ. ಕನ್ನಡ ಸಿನಿಪ್ರಿಯರು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಈ ಸಿನಿಮಾದ ಆಗಮನವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ.
‘ಟಾಕ್ಸಿಕ್’ ಸಿನಿಮಾ ವಿದೇಶದಲ್ಲಿ ಕೂಡ ಒಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ (ಆಗಸ್ಟ್ 21) ಈ ಚಿತ್ರದ ಟಿಕೆಟ್ ಬುಕಿಂಗ್ ಆರಂಭ ಆಗುತ್ತಿದೆ. ಕನ್ನಡ ಸಿನಿಪ್ರಿಯರು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಈ ಸಿನಿಮಾದ ಆಗಮನವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಚಿತ್ರವನ್ನು ಸ್ವಾಗತಿಸಲು ಸಾಕಷ್ಟು ಕಟೌಟ್ಗಳು ಸಿದ್ಧವಾಗಿವೆ. ನೂರಾರು ಚಿತ್ರಮಂದಿರಗಳ ಎದುರು ಕಟೌಟ್ ರಾರಾಜಿಸಲಿವೆ. ಹೊರ ರಾಜ್ಯಗಳಲ್ಲಿ ಕೂಡ ದೊಡ್ಡ ಕ್ರೇಜ್ ಶುರು ಆಗಿದೆ. ಆಗಸ್ಟ್ 26ರಂದು ಅದ್ದೂರಿಯಾಗಿ ಈ ಸಿನಿಮಾ ತೆರೆಕಾಣಲಿದೆ. ಅಂದಾಜು 10 ಸಾವಿರ ಪರದೆಗಳಲ್ಲಿ ‘ಟಾಕ್ಸಿಕ್’ (Toxic) ಸಿನಿಮಾ ಪ್ರದರ್ಶನ ಕಾಣಲಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾಗೆ ಜನರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

