Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂಡನ್ಬರ್ಗ್ ನುಡಿದ ಭವಿಷ್ಯ ನಿಜವಾಗ್ತಿದ್ಯಾ? ಅದಾನಿ ಕಂಪನಿ ಷೇರು ಶೇ. 85ರಷ್ಟು ಕುಸಿತ; ಹೂಡಿಕೆದಾರರಿಗೆ ಆದ ನಷ್ಟವೆಷ್ಟು ಗೊತ್ತಾ?

Hindenburg Prediction on Adani Shares: ಅದಾನಿ ಗ್ರೂಪ್​ನ ಬುಡ ಅಲ್ಲಾಡಿಸಿದ್ದ ಹಿಂಡನ್ಬರ್ಗ್ ರಿಸರ್ಚ್ ಕಂಪನಿಯ ವರದಿಯಲ್ಲಿ ನುಡಿಯಲಾಗಿದ್ದ ಭಯಾನಕ ಭವಿಷ್ಯದಲ್ಲಿ ಒಂದು ನಿಜವಾಗಿದೆ. ಅದಾನಿ ಕಂಪನಿಗಳ ಷೇರುಗಳು ಶೇ 85ರಷ್ಟು ಮೌಲ್ಯ ಕಳೆದುಕೊಳ್ಳುತ್ತವೆ ಎಂದು ಹಿಂಡನ್ಬರ್ಗ್ ರಿಪೋರ್ಟ್ ಎಚ್ಚರಿಕೆ ನೀಡಿತ್ತು. ಅದರಂತೆ ಅದಾನಿ ಟೋಟಲ್ ಗ್ಯಾಸ್ ಕಂಪನಿಯ ಷೇರು ಬೆಲೆ ಶೇ. 85ರಷ್ಟು ಕುಸಿದಿದೆ.

ಹಿಂಡನ್ಬರ್ಗ್ ನುಡಿದ ಭವಿಷ್ಯ ನಿಜವಾಗ್ತಿದ್ಯಾ? ಅದಾನಿ ಕಂಪನಿ ಷೇರು ಶೇ. 85ರಷ್ಟು ಕುಸಿತ; ಹೂಡಿಕೆದಾರರಿಗೆ ಆದ ನಷ್ಟವೆಷ್ಟು ಗೊತ್ತಾ?
ಅದಾನಿ ಗ್ರೂಪ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2023 | 5:45 PM

ನವದೆಹಲಿ, ಅಕ್ಟೋಬರ್ 23: ಅದಾನಿ ಗ್ರೂಪ್​ಗೆ ಸೇರಿದ ಅದಾನಿ ಟೋಟಲ್ ಗ್ಯಾಸ್ ಲಿ (Adani Total Gas Ltd) ಸಂಸ್ಥೆಯ ಷೇರುಬೆಲೆ ಆಯುಧಪೂಜೆಯಾದ ಇಂದು ಶೇ. 2.6ರಷ್ಟು ಕುಸಿತು 575.5 ರೂ ಮುಟ್ಟಿದೆ. ಇಷ್ಟೇ ಆಗಿದ್ದರೆ ಇದು ಸಹಜ ಬೆಳವಣಿಗೆಯಾಗಿರುತ್ತಿತ್ತು. ಆದರೆ, ಅದಾನಿ ಗ್ರೂಪ್​ನ ಬುಡ ಅಲ್ಲಾಡಿಸಿದ್ದ ಹಿಂಡನ್ಬರ್ಗ್ ರಿಸರ್ಚ್ ಕಂಪನಿಯ (Hindenburg Research report) ವರದಿಯಲ್ಲಿ ನುಡಿಯಲಾಗಿದ್ದ ಭಯಾನಕ ಭವಿಷ್ಯದಲ್ಲಿ ಒಂದು ನಿಜವಾಗಿದೆ. ಅದಾನಿ ಕಂಪನಿಗಳ ಷೇರುಗಳು ಶೇ 85ರಷ್ಟು ಮೌಲ್ಯ ಕಳೆದುಕೊಳ್ಳುತ್ತವೆ ಎಂದು ಹಿಂಡನ್ಬರ್ಗ್ ರಿಪೋರ್ಟ್ ಎಚ್ಚರಿಕೆ ನೀಡಿತ್ತು. ಅದರಂತೆ ಅದಾನಿ ಟೋಟಲ್ ಗ್ಯಾಸ್ ಕಂಪನಿಯ ಷೇರು ಬೆಲೆ ಶೇ. 85ರಷ್ಟು ಕುಸಿದಿದೆ.

ಒಂಬತ್ತು ತಿಂಗಳ ಹಿಂದೆ, ಅಂದರೆ ಜನವರಿ 24ರಂದು ಹಿಂಡನ್ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಸ್ಫೋಟಕ ವರದಿ ಬಿಡುಗಡೆ ಮಾಡಿತ್ತು. ಅದಾನಿ ಗ್ರೂಪ್​ನ ಕಂಪನಿಗಳ ಷೇರುಮೌಲ್ಯ ಹೆಚ್ಚಿಸಲು ಅಕ್ರಮ ಮಾರ್ಗ ಅನುಸರಿಸಲಾಗಿದೆ ಎಂದು ಸೇರಿದಂತೆ ಹಲವು ಗುರುತರ ಆರೋಪಗಳನ್ನು ಮಾಡಲಾಗಿತ್ತು. ಅದಾನಿ ಗ್ರೂಪ್​ನ ಕಂಪನಿಗಳ ಷೇರು ಮೌಲ್ಯ ಶೇ. 85ರಷ್ಟು ಇಳಿಯುತ್ತದೆ ಎಂದೂ ಶಾರ್ಟ್ ಸೆಲ್ಲರ್ ಕಂಪನಿ ಭವಿಷ್ಯ ನುಡಿದಿತ್ತು.

ಜನವರಿ 24ರ ದಿನಾಂತ್ಯದಲ್ಲಿ ಅದಾನಿ ಟೋಟಲ್ ಗ್ಯಾಸ್​ನ ಷೇರುಮೌಲ್ಯ 3,891.75 ರೂ ಇತ್ತು. ಒಂಬತ್ತು ತಿಂಗಳ ಬಳಿಕ ಇದೀಗ ಅದರ ಬೆಲೆ 575.7 ರೂಗೆ ಕುಸಿದಿದೆ. ಅಂದರೆ, ಹಿಂಡನ್ಬರ್ಗ್ ರಿಸರ್ಚ್ ಭವಿಷ್ಯ ನುಡಿದಂತೆ ಶೇ. 85ರಷ್ಟು ಷೇರುಮೌಲ್ಯ ನಶಿಸಿದೆ.

ಇದನ್ನೂ ಓದಿ: Explained: ಕ್ಯಾಷ್​ಬ್ಯಾಕ್, ಡಿಸ್ಕೌಂಟ್ ಆಫರ್​ಗಳಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಮಾರ್ಕೆಟಿಂಗ್ ರಹಸ್ಯ

ಎಷ್ಟು ನಷ್ಟವಾಗಿದೆ ಅದಾನಿ ಟೋಟಲ್ ಹೂಡಿಕೆದಾರರಿಗೆ?

ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಯ ಷೇರುಗಳ ಮೇಲೆ ಹೂಡಿಕೆ ಮಾಡಿದ್ದವರಿಗೆ ಆಗಿರುವ ನಷ್ಟ ರಣಭೀಕರ ಎನ್ನಲಡ್ಡಿ ಇಲ್ಲ. ಜನವರಿ 24ಕ್ಕೆ ಮುನ್ನ ಯಾರಾದರೂ ಹೂಡಿಕೆದಾರರು ಈ ಕಂಪನಿಯ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 15,000 ರೂಗಿಂತ ಕಡಿಮೆ ಇರುತ್ತಿತ್ತು. ಅಂದರೆ, ನಷ್ಟದ ಪ್ರಮಾನ ಶೇ 85ರಷ್ಟಿರುತ್ತಿತ್ತು.

ಅದಾನಿ ಗ್ರೂಪ್​ನ ಒಟ್ಟು ಹತ್ತು ಕಂಪನಿಗಳು ಷೇರುಪೇಟೆಗಳಲ್ಲಿ ಲಿಸ್ಟ್ ಆಗಿವೆ. ಅದಾನಿ ಟೋಟಲ್ ಗ್ಯಾಸ್ ಇದರಲ್ಲಿ ಒಂದು. ಈ 10 ಕಂಪನಿಗಳ ಪಟ್ಟಿ ಇಲ್ಲಿದೆ…

  1. ಅದಾನಿ ಎಂಟರ್ಪ್ರೈಸಸ್
  2. ಅದಾನಿ ಗ್ರೀನ್ ಎನರ್ಜಿ
  3. ಅದಾನಿ ಪೋರ್ಟ್ಸ್
  4. ಅದಾನಿ ಪವರ್
  5. ಅದಾನಿ ಟ್ರಾನ್ಸ್​ಮಿಶನ್
  6. ಅದಾನಿ ಟೋಟಲ್ ಗ್ಯಾಸ್
  7. ಅದಾನಿ ವಿಲ್ಮರ್
  8. ಎಸಿಸಿ ಲಿ
  9. ಅಂಬುಜಾ ಸಿಮೆಂಟ್ಸ್
  10. ಎನ್​ಡಿಟಿವಿ

ಇದನ್ನೂ ಓದಿ: Inflation Target: ಇನ್ನೂ ಕೆಲ ಕಾಲ ಹಣದುಬ್ಬರ ಇದ್ದರೆ ಚಿಂತೆ ಬೇಡ; ಅಭಿವೃದ್ದಿಗೋಸ್ಕರ ಹಣದುಬ್ಬರ ಇರಲಿಬಿಡಿ: ಎಂಪಿಸಿ ಸದಸ್ಯ ಜಯಂತ್ ವರ್ಮಾ

ಅದಾನಿ ಟೋಟಲ್ ಗ್ಯಾಸ್ ಷೇರುಬೆಲೆ ಕುಸಿತಕ್ಕೆ ಏನು ಕಾರಣ?

ಎಲ್ಲಾ ಕಮರ್ಷಿಯಲ್ ವಾಹನಗಳು 2030ರಷ್ಟರಲ್ಲಿ ಎಲೆಕ್ಟ್ರಿಕ್ ವಾಹನಗಳಾಗಬೇಕು ಎಂದು ದೆಹಲಿ ಸರ್ಕಾರ ಕಡ್ಡಾಯಗೊಳಿಸಿದೆ. ಇದು ಅದಾನಿ ಟೋಟಲ್ ಗ್ಯಾಸ್​ನ ಷೇರುಕುಸಿತಕ್ಕೆ ಕಾರಣ ಎಂದು ಬಗೆಯಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ