ಆರ್​ಬಿಐನ ರೀಟೇಲ್ ಪೋರ್ಟಲ್​ನಲ್ಲಿ ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್ ಖರೀದಿಸಲು ಅವಕಾಶ; ಯಾವಿವು ಬಾಂಡ್​ಗಳು?

Floating Rate Savings Bond: 2021ರಲ್ಲಿ ಆರ್​ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್ ಆರಂಭವಾಗಿತ್ತು. ಸರ್ಕಾರದ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಕ್ರಮವನ್ನು ಸರಳಗೊಳಿಸಲು ಈ ವೇದಿಕೆ ರೂಪಿಸಲಾಗಿದೆ. ವೈಯಕ್ತಿಕ ರೀಟೇಲ್ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಆರ್​ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ತೆರೆಯಬಹುದು. ಈ ಖಾತೆಯಿಂದ ವಿವಿಧ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಬಹುದಾಗಿದೆ. ಇದೀಗ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಖರೀದಿಸುವ ಅವಕಾಶ ನೀಡಲಾಗಿದೆ.

ಆರ್​ಬಿಐನ ರೀಟೇಲ್ ಪೋರ್ಟಲ್​ನಲ್ಲಿ ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್ ಖರೀದಿಸಲು ಅವಕಾಶ; ಯಾವಿವು ಬಾಂಡ್​ಗಳು?
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2023 | 3:53 PM

ನವದೆಹಲಿ, ಅಕ್ಟೋಬರ್ 24: ಆರ್​ಬಿಐ ರೀಟೇಲ್ ಡೈರೆಕ್ಟ್ ಪೋರ್ಟಲ್​ನಲ್ಲಿ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್​ಗಳನ್ನು (FRSB- floating rate savings bond) ಖರೀದಿಸಲು ಅವಕಾಶ ನೀಡಿರುವುದಾಗಿ ರಿಸರ್ವ್ ಬ್ಯಾಂಕ್ ನಿನ್ನೆ ಸೋಮವಾರ (ಅ. 23) ತಿಳಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಬಾಂಡ್​ಗಳು, ರಾಜ್ಯ ಸರ್ಕಾರಗಳ ಬಾಂಡ್​ಗಳು, ಟ್ರೆಷರಿ ಬಿಲ್​ಗಳು, ಸಾವರೀನ್ ಗೋಲ್ಡ್ ಬಾಂಡ್​ಗಳ ಜೊತೆಗೆ ಎಫ್​ಆರ್​ಎಸ್​ಬಿಗಳೂ ರೀಟೇಲ್ ಡೈರೆಕ್ಟ್ ಸ್ಕೀಮ್ ಅಡಿಯಲ್ಲಿ ಪೋರ್ಟಲ್​ಗಳಲ್ಲಿ ಖರೀದಿಗೆ ಲಭ್ಯ ಇರಲಿವೆ.

ಏನಿದು ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್​ಗಳು?

ಸೇವಿಂಗ್ ಬಾಂಡ್​ಗಳು ಕೇಂದ್ರ ಸರ್ಕಾರ ವಿತರಿಸುವ ಸಾಲಪತ್ರ. ಬ್ಯಾಂಕುಗಳಲ್ಲಿ ಫ್ಲೋಟಿಂಗ್ ರೇಟ್ ಸಾಲಗಳಂತೆ ಈ ಬಾಂಡ್​ಗಳಲ್ಲಿ ನಿಶ್ಚಿತ ಬಡ್ಡಿ ಇರುವುದಿಲ್ಲ. ಕಾಲಕಾಲಕ್ಕೆ ಬಡ್ಡಿದರ ಪರಿಷ್ಕರಣೆ ಆಗಬಹುದು. ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್​ಗಳು ವಿತರಣೆಯಾಗಿ ಏಳು ವರ್ಷಗಳ ಬಳಿಕ ಮೆಚ್ಯೂರ್ ಆಗುತ್ತವೆ. ಆದರೆ, ಬಾಂಡ್ ಮಾರುಕಟ್ಟೆಯಲ್ಲಿ ಇವುಗಳನ್ನು ಖರೀದಿಸಬಹುದೇ ಹೊರತು ಮಾರಾಟ ಮಾಡಲು ಆಗುವುದಿಲ್ಲ.

ಇದನ್ನೂ ಓದಿ: ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್

2021ರಲ್ಲಿ ಆರ್​ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್ ಆರಂಭವಾಗಿತ್ತು. ಸರ್ಕಾರದ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಕ್ರಮವನ್ನು ಸರಳಗೊಳಿಸಲು ಈ ವೇದಿಕೆ ರೂಪಿಸಲಾಗಿದೆ. ವೈಯಕ್ತಿಕ ರೀಟೇಲ್ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಆರ್​ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ (RBI RDG Account) ಅನ್ನು ತೆರೆಯಬಹುದು. ಈ ಖಾತೆಯಿಂದ ವಿವಿಧ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಬಹುದಾಗಿದೆ. ಈ ಪೋರ್ಟಲ್​ನ ವಿಳಾಸ ಇಂತಿದೆ: rbiretaildirect.org.in

ಆರ್​ಡಿಜಿ ಖಾತೆ ಹೇಗೆ ತೆರೆಯುವುದು?

ಆರ್​ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ಮೇಲಿನ ಪೋರ್ಟಲ್​ನಲ್ಲಿ ತೆರೆಯಬಹುದು. ಪ್ಯಾನ್ ನಂಬರ್, ಅಧಿಕೃತ ಕೆವೈಸಿ ದಾಖಲೆಗಳು, ಇಮೇಲ್ ಐಡಿ ಮತ್ತು ನೊಂದಾಯಿತ ಮೊಬೈಲ್ ನಂಬರ್ ಹೊಂದಿರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್