ಇಂದಿನಿಂದ ಐಪಿಎಲ್ ಪುನರಾರಂಭ, ಆರ್ಸಿಬಿ-ಕೆಕೆಅರ್ ಪಂದ್ಯದಲ್ಲಿ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ
ವಿರಾಟ್ ಕೊಹ್ಲಿಯ ಡೈಹಾರ್ಡ್ ಫ್ಯಾನ್ ಇಲ್ಲಿದ್ದಾರೆ. ಯುವಕನ ಹೆಸರು ಗೊತ್ತಿಲ್ಲ, ಕಳೆದ 11 ವರ್ಷಗಳಿಂದ ಆರ್ಬಿಯ ಅಭಿಮಾನಿ ಅಗಿರುವ ಇವರು ಕೊಹ್ಲಿ ಬಗ್ಗೆ ತಮಗಿರುವ ಪ್ರೀತಿ ಮತ್ತು ಅಭಿಮಾನದ ಹಿನ್ನೆಲೆ ಎದೆ ಮೇಲೆ ಆಟಗಾರನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪಂದ್ಯವನ್ನು ನೋಡಲು ಒಡಿಷಾದಿಂದ ಬಂದಾಗ್ಯೂ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಒಂದು ಟಿಕೆಟ್ ಪಡೆಯುವ ಪ್ರಯತ್ನವನ್ನಂತೂ ಅವರು ನಡೆಸಿದ್ದಾರೆ.
ಬೆಂಗಳೂರು, ಮೇ 17: ಭಾರತ ಮತ್ತು ಪಾಕಿಸ್ತಾನ ನಡುವೆ ಶುರುವಾದ ಯುದ್ಧ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದೂಡಲಾಗಿತ್ತು. ಸ್ಥಗಿತಗೊಂಡಿದ್ದ ಐಪಿಎಲ್ ಇಂದಿನಿಂದ ಪುನರಾರಂಭಗೊಳ್ಳುತ್ತಿದೆ ಮತ್ತು ಪ್ಲೇ-ಆಫ್ ಹಂತ ತಲುಪುವುದನ್ನು ದೃಢಪಡಿಸಿಕೊಂಡಿರುವ ಸ್ಥಳೀಯ ಅರ್ಸಿಬಿ ತಂಡ ಮೂರು ಬಾರಿಯ ಚಾಂಪಿಯನ್ ಕೆಕೆಅರ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ಪಂದ್ಯ ನಡೆಯುವಾಗೆಲ್ಲ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪ್ರೇಕ್ಷಕರ ಕಣ್ಮಣಿ ಆಗಿರುತ್ತಾರೆ, ಅವರೀಗ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರವುದರಿಂದ ಸಹಜವಾಗೇ ಅವರನ್ನು ನೋಡಲು ಜನ ಮತ್ತಷ್ಟು ತವಕಿಸುತ್ತಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಕೇವಲ 27 ದಿನ ಮಾತ್ರ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 17, 2025 04:43 PM