ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡಿದ್ದಾರೆ, ಮಂಜುನಾಥ್ ಹೇಳಿಕೆಯನ್ನು ಖಂಡಿಸುತ್ತೇನೆ: ಕರಡಿ ಸಂಗಣ್ಣ
ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕರಡಿ ಸಂಗಣ್ಣ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಯಾವ ಸಂಗತಿಯೂ ಅಂತಿಮಗೊಂಡಿಲ್ಲ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ, ಇಕ್ಬಾಲ್ ಅನ್ಸಾರಿ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದರೆ ತಪ್ಪಿಲ್ಲ, ಅವರು ಅರ್ಹರು ಎಂದು ಹಿರಿಯ ರಾಜಕಾರಣಿ ಸಂಗಣ್ಣ ಹೇಳಿದರು.
ಕೊಪ್ಪಳ, ಮೇ 17: ನಗರದಲ್ಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಂಸದ ಮತ್ತು ಕಾಂಗ್ರೆಸ್ ನಾಯಕ ಕರಡಿ ಸಂಗಣ್ಣ ಅಪರಪ್ಪ ಆಪರೇಷನ್ ಸಿಂಧೂರ (Operation Sindoor) ಮತ್ತು ಸೈನಿಕರ ಕಾರ್ಯಾಚರಣೆಯ ಬಗ್ಗೆ ಕೆಟ್ಟದ್ದಾಗಿ ಮಾತಾಡಿರುವ ತಮ್ಮ ಪಕ್ಷದ ಶಾಸಕ ಕೊತ್ತೂರು ಮಂಜುನಾಥ್ರನ್ನು ತರಾಟೆಗೆ ತೆಗೆದುಕೊಂಡರು. ಸೇನೆ ಕಾರ್ಯಾಚರಣೆ ಬಗ್ಗೆ ಯಾರೇ ಕೆಟ್ಟದ್ದಾಗಿ ಮಾತಾಡಿದರೂ ತಪ್ಪು, ಮಂಜುನಾಥ್ ಆಡಿರುವ ಮಾತುಗಳನ್ನು ಖಂಡಿಸುತ್ತೇನೆ, ಮಧ್ಯಪ್ರದೇಶದ ಉಪ ಮುಖ್ಯಮಂತ್ರಿ ಸಹ ಕೆಟ್ಟದ್ದಾಗಿ ಮಾತಾಡಿದ್ದಾರೆ, ಇವರಿಗೆಲ್ಲ ನಾಚಿಕೆಯಾಗಬೇಕು ಎಂದು ಸಂಗಣ್ಣ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತಮ ಕೆಲಸ ಮಾಡಿದ್ದಾರೆ, ಅವರನ್ನು ಅಭಿನಂದಿಸಲೇಬೇಕು ಎಂದು ಸಂಗಣ್ಣ ಹೇಳಿದರು.
ಇದನ್ನೂ ಓದಿ: ಭಾರತ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಕಳ್ಸಿದ್ದು ಬಿಟ್ರೆ ಏನೂ ಮಾಡಿಲ್ಲ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ