ನೆಲಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಿತ್ತನಗಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರ 12 ಹಸುಗಳಲ್ಲಿ ಮೂರು ಹಸುಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳತನವಾದ ಹಸುಗಳಲ್ಲಿ ಒಂದು ಹಸು ಕರು ಹಾಕುವ ಹಂತದಲ್ಲಿದ್ದು, ಇನ್ನೆರಡು ಹಸುಗಳು ಕುಟುಂಬದ ಆದಾಯಕ್ಕೆ ಪ್ರಮುಖ ಮೂಲವಾಗಿದ್ದವು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ನೆಲಮಂಗಲ, ಮೇ 17: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಗಳ್ಳಿ ಗ್ರಾಮದಲ್ಲಿ ಮನೆ ಮುಂದೆ ಕಟ್ಟಿದ್ದ ಹಸುಗಳು ಕಳ್ಳತನವಾಗಿವೆ. ಗ್ರಾಮದ ಕೃಷ್ಣಪ್ಪ ಎಂಬುವರಿಗೆ ಸೇರಿದ 12 ಹಸುಗಳಲ್ಲಿ ಮೂರು ಹಸುಗಳನ್ನು ಕದಿಯಲಾಗಿದೆ. ಈ ಮೂರು ಹಸುಗಳಲ್ಲಿ, ಒಂದು ಹಸು ಇನ್ನೇರಡು ತಿಂಗಳಲ್ಲಿ ಕರು ಹಾಕುತ್ತಿತ್ತು. ಇನ್ನೆರಡು ಹಸುಗಳಿಂದ ಮನೆ ನಡೆಸುವಷ್ಟು ಆದಾಯ ಬರುತ್ತಿತ್ತು. ಇತಂಹ ಹಸುಗಳನ್ನು ಖತರ್ನಾಕ್ ಕಳ್ಳರು ಕದ್ದಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜು
Published on: May 17, 2025 09:35 PM
Latest Videos

ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್

6,6,6,6,6:: ಬಿರುಗಾಳಿ ಬ್ಯಾಟಿಂಗ್ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!

‘ಎಸ್ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್

ವೆಸ್ಟ್ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
