ಶಾಸಕ ಕೊತ್ತೂರು ಮಂಜುನಾಥ್ಗೆ ಪರೋಕ್ಷವಾಗಿ ಬೆಂಡೆತ್ತಿದ ಹಿರಿಯ ಶಾಸಕ ಕೆಎಂ ಶಿವಲಿಂಗೇಗೌಡ
ಕೊತ್ತೂರು ಮಂಜುನಾಥ್ ಹೇಳಿದ್ದ ಸರಿಯೋ ತಪ್ಪೋ ಅಂತ ವಿಶ್ಲೇಷಣೆ ಮಾಡಲ್ಲ, ಅವರ ಮಾತನ್ನು ಡಿಫೆಂಡ್ ಕೂಡ ಮಾಡಲ್ಲ, ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ತಾನು ಕಾಮೆಂಟ್ ಮಾಡಲ್ಲ, ಅದು ಅವರವರ ವಿವೇಕಕ್ಕೆ ಬಿಟ್ಟ ವಿಷಯ ಎಂದು ಪ್ರತಿಯೊಂದು ಶಬ್ದವನ್ನು ಅಳೆದು ತೂಗಿ ಬಳಸಿದ ಶಿವಲಿಂಗೇಗೌಡ ಹೇಳಿದರು.
ಹಾಸನ, ಮೇ 17: ದೇಶದ ಅಳಿವು ಉಳಿವಿನ ಪ್ರಶ್ನೆ ಬಂದಾಗ ದೇಶದ ಪ್ರಧಾನ ಮಂತ್ರಿ (Prime Minister of India) ನಿರ್ಧಾರ ತೆಗೆದುಕೊಳ್ಳುತ್ತಾರೆ, ಪಾಕಿಸ್ತಾನದ ಮೇಲೆ ಯುದ್ದ ನಡೆದಾಗ ಭಾರತದ ಪ್ರಧಾನಿ ದೇಶವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ, ಎಂದು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಗೌಡ ಹೇಳಿದರು. ಕೊತ್ತೂರು ಮಂಜುನಾಥ್ ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮೆಲ್ಲರಿಗೂ ದೇಶ ಮುಖ್ಯ, ದೇಶ ಇದ್ದರೆ ನಾವೆಲ್ಲ, ಕೆಲವರು ತಿಳಿದು ಮಾತಾಡುತ್ತಾರೆ ಕೆಲವರು ತಿಳಿಯದೆ ಮಾತಾಡುತ್ತಾರೆ, ಯುದ್ಧದಂಥ ಸಂದರ್ಭಗಳಲ್ಲಿ ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ: ಸರ್ಕಾರದ ಸಾಧನೆ ಮತ್ತು ಬಿಜೆಪಿಯ ಅಪಪ್ರಚಾರ ಜನಕ್ಕೆ ತಿಳಿಸಲು ಸಮಾವೇಶ ಮಾಡುತ್ತಿದ್ದೇವೆ: ಕೆಎಂ ಶಿವಲಿಂಗೇಗೌಡ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ