AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಮೇ 18ರಿಂದ ಮೇ​ 25ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಮೇ ತಿಂಗಳ ನಾಲ್ಕನೇ ವಾರ 8-05-2025ರಿಂದ 15-05-2025ರವರೆಗೆ ಇರಲಿದೆ. ಬುಧನ‌ ಸಂಚಾರದಿಂದ ಕೆಲವು ಬದಲಾವಣೆಯಾಗಲಿದೆ. ಬುಧ ದಶೆ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ಆದರೆ ಜಾತಕದಲ್ಲಿ ಬುಧನು ಉಚ್ಚನಾಗಿದ್ದಾಗ ಮಾತ್ರ. ಲಕ್ಷ್ಮೀನಾರಯಣರು ಅಥವಾ ಲಕ್ಷ್ಮೀನರಸಿಂಹರು ಸಂಕಷ್ಟವನ್ನು ದೂರಮಾಡಲು ಸಮರ್ಥರು.‌ ಪ್ರಾತಃಕಾಲದಲ್ಲಿ ಅವರನ್ನು ಬಿಡದೇ ಸ್ಮರಿಸಿ.

Weekly Horoscope: ಮೇ 18ರಿಂದ ಮೇ​ 25ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 18, 2025 | 1:40 AM

Share

ಮೇ ತಿಂಗಳ ನಾಲ್ಕನೇ ವಾರ 18-05-2025ರಿಂದ 25-05-2025ರವರೆಗೆ ಇರಲಿದೆ. ಬುಧನ‌ ಸಂಚಾರದಿಂದ ಕೆಲವು ಬದಲಾವಣೆಯಾಗಲಿದೆ. ಬುಧ ದಶೆ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ಆದರೆ ಜಾತಕದಲ್ಲಿ ಬುಧನು ಉಚ್ಚನಾಗಿದ್ದಾಗ ಮಾತ್ರ. ಲಕ್ಷ್ಮೀನಾರಯಣರು ಅಥವಾ ಲಕ್ಷ್ಮೀನರಸಿಂಹರು ಸಂಕಷ್ಟವನ್ನು ದೂರಮಾಡಲು ಸಮರ್ಥರು.‌ ಪ್ರಾತಃಕಾಲದಲ್ಲಿ ಅವರನ್ನು ಬಿಡದೇ ಸ್ಮರಿಸಿ.

ಮೇಷ ರಾಶಿ: ಮೇ ತಿಂಗಳ ಈ ವಾರದಲ್ಲಿ ನಿಮಗೆ ಮಾತಿನ ಮೇಲೆ ಹಿಡಿತ ಅವಶ್ಯಕ.‌ ಕೋಪದಿಂದ ಆಡಿದ ಮಾತಿಗೆ ಕ್ಷಮೆ ಕೇಳಬೇಕಾದೀತು. ಅಂದುಕೊಂಡ ಕೆಲಸವು ಆಗದೇ ಹತಾಶಾಭಾವವು ಮೂಡಬಹುದು. ರಸಿಕತೆಯ ಮಾತುಗಳನ್ನಾಡುವಿರಿ. ಅಪರಿಚತವಾದ ಹುದ್ದೆಗಳನ್ನು ಅನಿವಾರ್ಯವಾಗಿ ಅಲಂಕರಿಸಬೇಕಾದೀತು. ಆಸ್ತಿಯ ಇಬ್ಬಾಗಕ್ಕೆ ಸಹಿ ಹಾಕಲೇಬೇಕಾದೀತು. ಅತಿಯಾದ ನಗುವು ಬೇಡ. ಕಳೆದುಕೊಂಡವರ ಬಗ್ಗೆ ಪಶ್ಚಾತ್ತಾಪ‌ ಇರಲಿದೆ. ಎಲ್ಲವನ್ನೂ ನಿಃಸ್ವಾರ್ಥಿಗಳಂತೆ ಬಿಡುವುದು ಬೇಡ. ನಿಮ್ಮ ವಿನಮ್ರತೆಯು ನಿಮಗೆ ವರದಾನವಾಗಿದೆ.

ವೃಷಭ ರಾಶಿ: ಈ ವಾರ ನಿಮ್ಮ ಬೌದ್ಧಿಕ ಕಸರತ್ತಿಗೆ ಸೋಲಾಗುವುದು. ಗೃಹೋಪಯೋಗಿ ವಸ್ತುಗಳು ನಿಮಗೆ ದುಬಾರಿ ಎನಿಸಬಹುದು. ನಿಮ್ಮ‌ ಮಾತೇ ನಿಮಗೆ ಹಿಂದಿರುಗುವ ಸಾಧ್ಯತೆ ಇದೆ. ಹತ್ತಿರದವರ ಬಳಿ ಹಣವನ್ನು ಪಡೆಯುವಿರಿ. ವಾಸಸ್ಥಳವನ್ನು ಬದಲಿಸಬಹುದು. ದೇಹದಲ್ಲಿ ಜ್ವರದ ಲಕ್ಷಣ ಕಾಣಿಸುವುದು. ಪ್ರತಿಕೂಲ ವಾತಾವರಣವನ್ನು ಉದ್ವೇಗದಿಂದ ಬಗೆಹರಿಸಿಕೊಳ್ಳುವುದು ಬೇಡ. ಅನಗತ್ಯವಾಗಿ ಖರ್ಚನ್ನು ಮಾಡಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ವಾತಂತ್ರ್ಯವನ್ನು ಬಯಸುವವರು. ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ.

ಮಿಥುನ ರಾಶಿ: ನಿಮಗೆ ಮೇ ತಿಂಗಳ ಈ ವಾರದಲ್ಲಿ ಅಶುಭ. ಕ್ಷೇತ್ರದ ಅಧಿಪತಿ ದ್ವಾದಶದಲ್ಲಿದ್ದು ಮರೆವು ಹೆಚ್ಚಾಗುವುದು. ಕೆಲಸಗಳು ಮರೆವಿನ ಕಾರಣದಿಂದ‌ ಮಾಡಲಾಗದು. ನಿಮ್ಮವರಿಗೆ ಆಡಿದ ಕಠೋರ ಮಾತುಗಳು ನಿಮ್ಮನ್ನು ಸಿಟ್ಟಿಗೇರಿಸುವುದು. ಹಣವು ವ್ಯಯವಾಗುವ ಸಾಧ್ಯತೆ ಇದೆ‌. ನಿಮ್ಮ ಕನಸುಗಳು ನಿನಗೆ ಉತ್ಸಾಹವನ್ನು ತಂದುಕೊಡುತ್ತವೆ. ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುವಿರಿ. ನಿಮ್ಮ ಆಲೋಚನೆಗಳು ಇಷ್ಟವಾದೀತು. ಇರುವ ಸಮಯವನ್ನು ಕುಟುಂಬದ ಜೊತೆ ಕಳೆಯಿರಿ. ನೆಮ್ಮದಿ ಸಿಗಲಿದೆ‌. ಉಚಿತವಾದುದನ್ನು ಪಡೆಯಲು ಪ್ರಯತ್ನಿಸಿ. ಮಕ್ಕಳು ನಿಮ್ಮನ್ನು ಇಷ್ಟಪಡುವರು.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಶುಭ. ಆಲಂಕಾರಿಕ ವಸ್ತುಗಳ ಮಾರಾಟದಿಂದ ಧನಲಾಭ. ಇದು ನಿಮ್ಮನ್ನು ಸಿಟ್ಟಿಗೇಳಿಸುತ್ತದೆ. ಎಲ್ಲರ ಜೊತೆ ಕಲಹವಾಡುವಿರಿ. ಕಿರಿಯರ ಭಾವನೆ ಸ್ಪಂದಿಸುವಿರಿ. ಸ್ತ್ರೀಯರನ್ನು ಉದ್ಯೋಗಕ್ಕೆ ಬಳಸಿಕೊಳ್ಳುವಿರಿ. ನಿರಂತರ ಶ್ರಮದಿಂದ ಆಯಾಸವಾದ ನಿಮಗೆ ಇಂದು ಸ್ವಲ್ಪ ಬಿಡುಗಡೆಯಂತೆ ತೋರುವುದು‌. ದೇವರ ಕಾರ್ಯದಲ್ಲಿ ತೊಡಗುವಿರಿ. ನಿಮ್ಮ ಮಾತುಗಳು ಬಲಿಶವೆನಿಸಬಹುದು ಕೆಲವರಿಗೆ. ಭೂಮಿಯ ವ್ಯವಹಾರದಲ್ಲಿ ಸರಿಯಾದ ಯೋಜನೆ ಇರಲಿ.

ಸಿಂಹ ರಾಶಿ: ಮೇ ತಿಂಗಳ ನಾಲ್ಕನೇ ವಾರ ನಿಮಗೆ ಶುಭ. ಉದ್ಯೋಗದಲ್ಲಿ ಜಾಣ್ಮೆಯನ್ನು ಪ್ರದರ್ಶಿಸುವಿರಿ. ಇನ್ನೊಬ್ಬರ ಪ್ರಭಾವದ ಮೇಲೆ ನೀವು ಕೆಲಸವನ್ನು ಪಡೆಯುವಿರಿ. ಆಪ್ತರಿಂದ ಅನಿರೀಕ್ಷಿತ ಪಾರಿತೋಷಕಗಳು ಸಿಗಬಹುದು. ಮಾತುಗಾರಿಕೆಗೆ ನಿಮಗೆ ಒಳ್ಳೆಯ ಉದ್ಯೋಗ ಸಿಗುವುದು. ಸಂಗಾತಿಯನ್ನು ಮಾತಿನಿಂದ ನೋಯಿಸುವಿರಿ. ಅನಂತರ ಸಮಾಧಮಾಡುವುದು ಅನಿವಾರ್ಯವಾದೀತು. ಮನಸ್ಸನ್ನು ಅರ್ಥಮಾಡಿಕೊಂಡು ಬೇರೆಯವರ ಜೊತೆ ವ್ಯವಹಾರ ಮಾಡಿ. ಪ್ರಯಾಣವು ಶುಭಪ್ರದವಾದೀತು. ಉದ್ಯಮದಲ್ಲಿ ಸಣ್ಣ ಪ್ರಗತಿ ಇರಬಹುದು.

ಕನ್ಯಾ ರಾಶಿ: ಈ ರಾಶಿಯವರಿಗೆ ಮೇ ತಿಂಗಳ ಈ ವಾರ ಶುಭ. ಬುಧ ನವಮದಲ್ಲಿ ಇದ್ದು ತನ್ನ ರಾಶಿಗೆ ಸುಖವನ್ನು ಕೊಡುವನು. ಆರೋಗ್ಯವನ್ನು ಸುಧಾರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿರುವುದು.‌ ಬೌದ್ಧಿಕ ಸಾಧನೆಗೆ ಪುರಸ್ಕಾರ ಸಿಗುವುದಿ. ಮಾನಸಿಕವಾದ ಯಾವ ಕ್ಷೋಭೆಯನ್ನೂ ಮನಸ್ಸಿಗೆ ತಂದುಕೊಳ್ಳದೇ ಚಿತ್ತವಿಶ್ರಾಂತಿಯನ್ನೂ ಕೊಡಿ. ಸಂಗಾತಿಯು ನಿಮ್ಮ ಪೂರ್ವವೃತ್ತಾಂತವನ್ನು ಬಿಚ್ಚಿಡಬಹುದು. ಅತಿಯಾದ ನಾಚಿಕೆಯಾಗಬಹುದು‌. ಕೆಲಸವನ್ನು ಬದಲಿಸುವ ಯೋಚನೆ ಇರಲಿದೆ. ಹೊಸ ಸಂಗತಿಗಳನ್ನು ಕಲಿಯುವಿರಿ.

ತುಲಾ ರಾಶಿ: ರಾಶಿ ಚಕ್ರದ ಈ ರಾಶಿಯವರಿಗೆ ಅಶುಭ. ಬುಧನು ಅಷ್ಟಮದಲ್ಲಿದ್ದು ಆರೋಗ್ಯದ ತೊಂದರೆ ನೀಡುವನು. ವಾಹನ ಸಂಚಾರ ನಿಮಗೆ ದುಸ್ತರವಾದೀತು. ಉಸಿರಾಟ ತೊಂದರೆ ಕಾಣಿಸಿಕೊಳ್ಳುವುದು. ಹಣದ ಸಮಸ್ಯೆಗಳು ತಾನಾಗಿಯೇ ನಿವಾರಣೆಯಾಗುವುದು. ಕಣ್ಮುಂದೆ ಇಲ್ಲದವರ ನೆನಪು ಇಂದು ಕಾಡಬಹುದು. ನಿಮ್ಮ ತಪ್ಪುಗಳನ್ನು ಗಂಭೀರವಾಗಿ ಸ್ವೀಕರಿಸಿ, ತಿದ್ದಿಕೊಳ್ಳುವ ಪ್ರಯತ್ನ ಮಾಡುವಿರಿ. ನಿಮ್ಮವರ ಬಗ್ಗೆ ದೂರು ಕೊಡಬಹುದು ನಿಮ್ಮ ಬಳಿ.‌ ಅದನ್ನು ಸಮಾಧಾನ ಚಿತ್ತದಿಂದ ಸ್ವೀಕರಿಸಿ. ಪಾಲುದಾರಿಕೆಯಲ್ಲಿ ಹೊಸ ಕಾರ್ಯಗಳನ್ನು ಆರಂಭಿಸಲು ಆಲೋಚಿಸುವಿರಿ‌. ಅನಗತ್ಯ ವಸ್ತುಗಳ ಬಗ್ಗೆ ಆಸೆ ಬೇಡ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಈ ವಾರದಲ್ಲಿ ಶುಭ. ಬಂಧುಗಳಲ್ಲಿಯೇ ನಿಮಗೆ ಸಂಗಾತಿ ಸಿಗಬಹುದು. ಧಾರ್ಮಿಕ ಆಚರಣೆಗಳನ್ನು ಬಹಳ ಕುತೂಹಲದಿಂದ ಮಾಡುವಿರಿ. ಪ್ರೇಮವನ್ನು ವ್ಯವಹಾರಕ್ಕೆ ಜೋಡಿಸುವುದು ಬೇಡ. ಅವಸರದಲ್ಲಿ ಪ್ರಯಾಣವನ್ನು ಮಾಡಬೇಡಿ. ಸಾವಧಾನತೆವಿರಲಿ. ಕೇಳಿದವರಿಗೆ ಆಗದು ಎಂದು ಹೇಳದೇ ಇರುವುದನ್ನು ಕೊಡಿ. ಸಂತೃಪ್ತಿಯು ನಿಮಗೆ ಸಿಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ. ನಿದ್ರಾಹೀನತೆಯು ನಿಮ್ಮ ಬಲವನ್ನು ಕುಗ್ಗಿಸೀತು.

ಧನು ರಾಶಿ: ಮೇ ತಿಂಗಳ ಈ ವಾರದಲ್ಲಿ ನಿಮಗೆ ಅಶುಭ. ಬಂಧುಗಳ ಜೊತೆ ಸರಿಯಾದ ಮಾತುಕತೆ ಇರದು. ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಇತರರಿಗೆ ಇಷ್ಟವಾದೀತು. ಶತ್ರುತ್ವ ಅನ್ಯರೀತಿಯಲ್ಲಿ ಆರಂಭವಾಗಬಹುದು. ಹಳೆಯ ನೋವನ್ನು ಸ್ಮರಿಸಿಕೊಳ್ಳುವುದು ಬೇಡ. ಆದಯಾದ ಮೂಲವನ್ನು ಹುಡುಕಿಕೊಳ್ಳುವಿರಿ. ಮನೆಗೆ ಹಣದ ಸಹಾಯ ಮಾಡಬೇಕಾದ ಸ್ಥಿತಿ ಬರಬಹುದು. ನಿಮ್ಮವರ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ದೂರದ ಪ್ರಯಾಣವನ್ನು ಮಾಡಲೇಬೇಕಾದ ಸ್ಥಿತಿ ಬರಬಹುದು. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ಉತ್ಸಾಹಕ್ಕೆ ಭಂಗ ಬರುವ ಮಾತುಗಳನ್ನು ಕೇಳಬೇಕಾದೀತು.

ಮಕರ ರಾಶಿ: ಈ ವಾರದಂದು ನಿಮಗೆ ಬುಧನ ಬದಲಾವಣೆಯಿಂದ ಕುಶಲ ಕರ್ಮದಲ್ಲಿ ಪ್ರಗತಿ, ಪ್ರಶಂಸೆಗಳು ಸಿಗಲಿದೆ. ಕೆಲಸವನ್ನು ಪೂರೈಸಲು ಅನಾರೋಗ್ಯವು ಅಡ್ಡವಾಗಬಹುದು. ಮಕ್ಕಳಿಂದ‌ ಸಂತೋಷದ ವಾರ್ತೆ ಬರುವುದು. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟು ತೊಂದರೆಗೆ ಸಿಕ್ಕಿಕೊಳ್ಳಬೇಡಿ. ಆಕರ್ಷಕ ವಸ್ತುಗಳಿಗೆ ಮನಸೋಲಬಹುದು. ಒಳ್ಳೆಯ ವಿಶ್ವಾಸದ ಜೊತೆ ಕಾರ್ಯ ಆರಂಭಿಸುವಿರಿ. ಸಾಮಾಜಿಕ ಕಲಹವನ್ನು ಪರಿಹರಿಸಲು ನಿಮ್ಮ ಸಹಾಯವನ್ನು ಕೇಳಬಹುದು. ಆಪ್ತರ ಜೊತೆ ಮಾತನಾಡಿ ಹೆಚ್ಚು ಸಮಯವನ್ನು ಕಳೆಯುವಿರಿ. ಆರ್ಥಿಕ ಸಂಕಷ್ಟವು ನಿಮ್ಮನ್ನು ಬಾಧಿಸಿದರೂ ಅದನ್ನು ಲೀಲಾಜಾಲವಾಗಿ ಮುಗಿಸುವಿರಿ.

ಕುಂಭ ರಾಶಿ: ಚತುರ್ಥದಲ್ಲಿ ಇರುವ ಬುಧನಿಂದ ಕೌಟುಂಬಿಕ ಸಾಮರಸ್ಯ. ಕಲಹವಿದ್ದರೂ ತೋರಿಕೆಯಾಗದು. ತಾಯಿಯ‌ ಮೇಲೆ ಪ್ರೀತಿ ಅತಿಯಾಗುವುದು. ನಗಲು ಹಿಂದೆ ಮುಂದೆ ನೋಡುವ ಅವಶ್ಯಕತೆಯಿಲ್ಲ.‌ ಮನಃಪೂರ್ತಿಯಾಗಿ ನಗುತ್ತಿರಿ. ಸಣ್ಣ ಪುಟ್ಟ ನೋವುಗಳೂ ಕರಗಿ ನಗುವಾಗಿ ಹರಿಯಲಿ. ಸ್ನೇತರ ಜೊತೆ ಸುತ್ತಡಿ ಹಣವನ್ನು ಖರ್ಚು ಮಾಡುವಿರಿ. ಇದು ಸಂತೋಷದಿಂದ ಮಾಡಿದ್ದಾಗಿರುತ್ತದೆ. ವಿಶೇಷವಾದ ಸ್ಥಾನ, ಮಾನಗಳು ಬರುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಕಲಹವು ಸಹಜವೆನ್ನುವಷ್ಟು ಆಗಿದೆ. ಸಮಾಧಾನವೂ ಹಾಗೇ ಆಗಲಿ. ಅವರ ಮಾತನ್ನು ಅನುಸರಿಸಿ. ಅಧ್ಯಾತ್ಮವನ್ನು ಹೆಚ್ಚು ಇಷ್ಟಪಡುವಿರಿ.

ಮೀನ ರಾಶಿ: ಮೇ ತಿಂಗಳಲ್ಲಿ ನಿಮಗೆ ಶುಭ. ಬುಧನು ತೃತೀಯದಲ್ಲಿದ್ದು ಬಾಂಧವರ ನಡುವೆ ಬುಕ್ಕಟ್ಟು ಹೆಚ್ಚಾಗುವುದು. ಬೋಧಕ ವರ್ಗದವರಲ್ಲಿ ಹೆಚ್ಚು ಒತ್ತಡವಿರಬಹುದು. ಹೊಸ ಉತ್ಸಾಹವು ನಿಮ್ಮ ಕೆಲಸಗಳಿಗೆ ಪೂರವಾಗಿ ಇರಲಿದೆ. ಹಣದ ಹರಿವು ತಕ್ಕಮಟ್ಟಿಗೆ ಇರಲಿದೆ. ಕೆಟ್ಟ ಆರೋಗ್ಯವನ್ನು ಸರಿ ಮಾಡಿಕೊಳ್ಳಿ. ಪ್ರೀತಿಪಾತ್ರರ ವರ್ತನೆಯು ನಿಮಗೆ ಹಿಂಸೆಯನ್ನು ಕೊಟ್ಟೀತು. ನಿಮ್ಮ ಬಗ್ಗೆ ನೀವೇ ಅವಲೋಕನ ಮಾಡಿಕೊಳ್ಳಬೇಕಾಗಿದೆ. ಸಾಮರ್ಥ್ಯವನ್ನು ಸದ್ವಿನಿಯೋಗ ಮಾಡಿರಿ. ನಿಮ್ಮ ಸೌಂದರ್ಯದ ಬಗ್ಗೆ ಅತಿಯಾದ ಮೋಹವು ಇರಲಿದೆ. ಕಛೇರಿಯ ಕೆಲಸಗಳು ಸಲೀಸಾಗಿ ಆಗುವುದು.

-ಲೋಹಿತ ಹೆಬ್ಬಾರ್- 8762924271 (what’s app only)

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ