AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 11ರ ದಿನಭವಿಷ್ಯ

ಜನವರಿ 11 ರ ಭಾನುವಾರದ ಜನ್ಮಸಂಖ್ಯೆ 1, 2, 3ರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1ರವರಿಗೆ ವೃತ್ತಿ ಪ್ರಗತಿ, ಸರ್ಕಾರಿ ಕಾರ್ಯಗಳಲ್ಲಿ ಯಶಸ್ಸು. ಜನ್ಮಸಂಖ್ಯೆ 2ರವರಿಗೆ ಹಣಕಾಸು ಬದಲಾವಣೆ, ಕುಟುಂಬದಲ್ಲಿ ಸಂತೋಷ, ವ್ಯಾಪಾರದಲ್ಲಿ ಲಾಭ. ಜನ್ಮಸಂಖ್ಯೆ 3ರವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಶುಭ ವೆಚ್ಚಗಳು, ಶಿಕ್ಷಣ-ಸಂಶೋಧನೆಯಲ್ಲಿ ಮನ್ನಣೆ ದೊರೆಯಲಿದೆ. ಇಂದಿನ ನಿಮ್ಮ ಭವಿಷ್ಯವನ್ನು ವಿವರವಾಗಿ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 11ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Jan 11, 2026 | 12:18 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ವೃತ್ತಿ ಕ್ಷೇತ್ರದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವಿರಿ. ಉದ್ಯೋಗದ ನಿಮಿತ್ತ ಪ್ರಯಾಣದ ಯೋಗವಿದೆ. ನಿಮ್ಮ ಮಾತಿನ ಪ್ರಭಾವದಿಂದ ಅಧಿಕಾರಿ ವರ್ಗದವರ ಮನಸ್ಸು ಗೆಲ್ಲುವಿರಿ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ದೂರವಾಗಲಿವೆ. ಇದಕ್ಕೆ ಪ್ರಭಾವಿಗಳ ಬೆಂಬಲ ನಿಮಗೆ ದೊರೆಯಲಿದೆ. ಸಂಗಾತಿಯ ಜೊತೆಗೂಡಿ ಭವಿಷ್ಯದ ಆರ್ಥಿಕ ಹೂಡಿಕೆಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ. ನಾಯಕತ್ವದ ಗುಣಕ್ಕೆ ಮನ್ನಣೆ ಸಿಗಲಿದೆ. ತಲೆನೋವು ಬಾಧಿಸಬಹುದು, ಸಾಕಷ್ಟು ನೀರು ಕುಡಿಯಿರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಭಾವನಾತ್ಮಕವಾಗಿ ನೀವು ಸ್ವಲ್ಪ ಮೃದುವಾಗಿರುವಿರಿ. ಹಣಕಾಸಿನ ವಿಚಾರಕ್ಕೆ ಈ ಹಿಂದಿನ ನಿಮ್ಮ ತೀರ್ಮಾನಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದ್ದು, ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಮುದ ನೀಡಲಿದೆ. ವ್ಯಾಪಾರಸ್ಥರಿಗೆ ಬಾಕಿ ಇದ್ದ ಹಣ ವಸೂಲಿಯಾಗುವ ಲಕ್ಷಣಗಳಿವೆ. ಜಲಮೂಲಗಳ ಹತ್ತಿರ ಪ್ರವಾಸ ಹೋಗುವ ಪ್ಲಾನ್ ಮಾಡಬೇಡಿ. ತಾಯಿಯ ಆರೋಗ್ಯದ ಕಡೆಗೆ ವಿಶೇಷ ಗಮನವಿರಲಿ. ನಿಮ್ಮ ಕ್ರಿಯಾಶೀಲತೆಗೆ ಮನೆಯವರಿಂದ ಉತ್ತಮ ಪ್ರೋತ್ಸಾಹ ಸಿಗಲಿದೆ. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಉತ್ತಮ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮನೆಯಲ್ಲಿ ಹಿರಿಯರ ಆಶೀರ್ವಾದ ನಿಮ್ಮ ಮೇಲಿರಲಿದೆ. ಆರ್ಥಿಕವಾಗಿ ಖರ್ಚು ಹೆಚ್ಚಾಗಲಿದ್ದರೂ, ಅದು ಶುಭ ಕಾರ್ಯಗಳಿಗಾಗಿ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಕಲಿಕೆಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಬರವಣಿಗೆ ಅಥವಾ ಸಂಶೋಧನೆಯಲ್ಲಿ ತೊಡಗಿರುವವರಿಗೆ ಮನ್ನಣೆ ಸಿಗಲಿದೆ. ಮಕ್ಕಳ ಪ್ರಗತಿಯ ಬಗ್ಗೆ ಶುಭ ವಾರ್ತೆ ಕೇಳುವಿರಿ. ಸಂಜೆಯ ವೇಳೆಗೆ ಆಧ್ಯಾತ್ಮಿಕ ಚಿಂತನೆಗಳು ಸಮಾಧಾನ ನೀಡಲಿವೆ.

ಲೇಖನ- ಎನ್‌.ಕೆ.ಸ್ವಾತಿ