Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 11ರ ದಿನಭವಿಷ್ಯ
ಜನ್ಮಸಂಖ್ಯೆ 4, 5, 6ಕ್ಕೆ ಜನವರಿ 11ರ ಸಂಖ್ಯಾಶಾಸ್ತ್ರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 4ರವರು ಬದಲಾವಣೆಗಳನ್ನು ಎದುರಿಸುವರು; ಜನ್ಮಸಂಖ್ಯೆ 5ರವರು ಸಂವಹನ ಕೌಶಲ್ಯದಿಂದ ಯಶಸ್ಸು ಕಾಣುವರು. ಜನ್ಮಸಂಖ್ಯೆ 6ರವರು ಕುಟುಂಬಕ್ಕೆ ಆದ್ಯತೆ ನೀಡುವ ಮೂಲಕ ಶುಭ ಫಲಗಳನ್ನು ಪಡೆಯುವರು. ನಿಮ್ಮ ಜನ್ಮಸಂಖ್ಯೆ ಆಧಾರಿತ ಸಂಪೂರ್ಣ ಭವಿಷ್ಯವನ್ನು ತಿಳಿದುಕೊಳ್ಳಲು ಓದಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನೀವು ಅಂದುಕೊಂಡ ಕೆಲಸಗಳಲ್ಲಿ ಹಠಾತ್ ಬದಲಾವಣೆಗಳು ಮಾಡಿಕೊಳ್ಳಬೇಕಾಗಬಹುದು. ಗೊಂದಲಗಳಿಗೆ ಒಳಗಾಗದೆ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರದಲ್ಲಿ ಆಸಕ್ತರಿಗೆ ಇದು ಲಾಭದಾಯಕ ದಿನ. ಮನೆ ರಿಪೇರಿ ಅಥವಾ ವಾಹನಗಳ ನಿರ್ವಹಣೆಗೆ ಹಣ ವ್ಯಯವಾಗಲಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ, ಅದು ನಿಮ್ಮ ನೆಮ್ಮದಿ ಕೆಡಿಸಬಹುದು. ಹಿರಿಯರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಾಣಿಸಬಹುದು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನಿಮ್ಮ ಸಂವಹನ ಕಲೆ ಈ ದಿನ ಕೈ ಹಿಡಿಯಲಿದೆ. ಮಾರ್ಕೆಟಿಂಗ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಬರಲಿವೆ. ಆಕಸ್ಮಿಕವಾಗಿ ದೂರದ ಸಂಬಂಧಿಗಳಿಂದ ಉಡುಗೊರೆಗಳು ಸಿಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಉದ್ದೇಶ ಇರುವವರು ತಜ್ಞರ ಸಲಹೆ ಪಡೆಯಿರಿ. ಹೊಸ ಗೆಳೆತನವು ಲಾಭದಾಯಕವಾಗಿರಲಿದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಇದು ಶುಭ ದಿನ. ಗಂಟಲು ಅಥವಾ ಎದೆಯ ಭಾಗದಲ್ಲಿ ಸಣ್ಣ ಮಟ್ಟದ ಸೋಂಕು ಕಾಣಿಸಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಕುಟುಂಬ ಮತ್ತು ಸಂಬಂಧಗಳಿಗೆ ನೀವು ಅತಿ ಹೆಚ್ಚು ಆದ್ಯತೆ ನೀಡುವ ದಿನವಿದು. ವಿವಾಹ ಆಕಾಂಕ್ಷಿಗಳಿಗೆ ಶುಭ ಫಲಗಳು ಸಿಗಲಿವೆ. ಸಿನಿಮಾ, ಸಂಗೀತ ಅಥವಾ ಹವ್ಯಾಸಿ ಕಲೆಗಳಲ್ಲಿ ಆಸಕ್ತಿ ಇರುವವರಿಗೆ ವೇದಿಕೆ ಸಿಗಲಿದೆ. ಮನೆಯ ಹೆಣ್ಣು ಮಕ್ಕಳ ಬೇಡಿಕೆಗಳನ್ನು ಪೂರೈಸುವಿರಿ. ಆರ್ಥಿಕವಾಗಿ ಪರಿಸ್ಥಿತಿ ಉತ್ತಮವಾಗಿದ್ದಲ್ಲಿ ಸಾಲ ನೀಡುವ ಮುನ್ನ ಯೋಚಿಸಿ. ನಿಮ್ಮ ಆಕರ್ಷಕ ವ್ಯಕ್ತಿತ್ವವು ಗೌರವ ಮೂಡಿಸಲಿದೆ. ಮಧ್ಯಾಹ್ನ ಭರ್ಜರಿ ಭೋಜನದ ಯೋಗವಿದೆ. ದ್ವಿಚಕ್ರ ವಾಹನ ಚಾಲನೆ ಮಾಡುವವರ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.
ಲೇಖನ- ಎನ್.ಕೆ.ಸ್ವಾತಿ
