AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಇಂದು ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ

ಜನವರಿ 10 ರಂದು ಜನ್ಮಸಂಖ್ಯೆ 7, 8, 9 ರವರ ದಿನಭವಿಷ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ದಿನ ನಿಮ್ಮ ಹಣಕಾಸು, ಆರೋಗ್ಯ, ವೃತ್ತಿ ಮತ್ತು ವೈಯಕ್ತಿಕ ಜೀವನ ಹೇಗೆ ಇರಲಿದೆ ಎಂಬುದರ ಕುರಿತು ವಿವರವಾದ ಭವಿಷ್ಯವಾಣಿಯನ್ನು ನೀಡಲಾಗಿದೆ. ನಿಮ್ಮ ಶುಭ-ಅಶುಭ ಫಲಗಳನ್ನು ತಿಳಿದುಕೊಂಡು ದಿನವನ್ನು ಉತ್ತಮವಾಗಿ ಯೋಜಿಸಿಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಇಂದು ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on:Jan 10, 2026 | 8:08 AM

Share

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮಲ್ಲಿ ಭವಿಷ್ಯಕ್ಕೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗುವ ಆಲೋಚನೆಗಳು ಮೂಡಲಿವೆ. ಲೌಕಿಕ ಜಗತ್ತಿನ ಜಂಜಾಟಗಳಿಂದ ಸ್ವಲ್ಪ ವಿರಾಮ ಪಡೆಯಲು ಬಯಸುತ್ತೀರಿ. ಪುಸ್ತಕಗಳ ಓದು ಅಥವಾ ಸಂಗೀತದ ಕಡೆಗೆ ಆಸಕ್ತಿ ಹೆಚ್ಚಲಿದೆ. ಆರ್ಥಿಕವಾಗಿ ಹಣದ ಹರಿವು ಸಾಧಾರಣವಾಗಿರುತ್ತದೆ, ಆದರೆ ನೀವು ಮಾಡಿದ ಹಳೆಯ ಸಹಾಯ ಬೇರೊಂದು ರೂಪದಲ್ಲಿ ನಿಮಗೆ ಮರಳಿ ಸಿಗಲಿದೆ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ, ನಿಮ್ಮ ಯೋಜನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಆದಾಯ ಹೆಚ್ಚು ಮಾಡಿಕೊಳ್ಳುವ ಮಾರ್ಗೋಪಾಯ ಗೋಚರಿಸಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ ಇದಾಗಿರುತ್ತದೆ. ನಿಧಾನವಾಗಿ ನಡೆಯುತ್ತಿದ್ದ ಕೆಲಸಗಳು ಈಗ ವೇಗ ಪಡೆದುಕೊಳ್ಳಲಿವೆ. ನ್ಯಾಯಾಲಯದ ಕೆಲಸಗಳಲ್ಲಿ ನಿಮಗೆ ಜಯ ಸಿಗುವ ಲಕ್ಷಣಗಳಿವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದ್ದು, ಸ್ಥಿರಾಸ್ತಿಯಿಂದ ಆದಾಯ ಬರಲಿದೆ. ಹಿರಿಯರೊಂದಿಗೆ ನಡೆಸುವ ಮಾತುಕತೆ ಸಮಾಧಾನ ತರಲಿದೆ. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ನಿರ್ದಿಷ್ವಾಗಿ ಮೂಳೆ ಅಥವಾ ಸ್ನಾಯುಗಳ ನೋವು ಕಾಣಿಸಿಕೊಳ್ಳಬಹುದು. ಕೃಷಿ ಜಮೀನು ಖರೀದಿ ಯತ್ನಗಳು ಇದ್ದಲ್ಲಿ ಫಲ ನೀಡಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನೀವು ಯಾವುದೇ ಸಾಹಸಕ್ಕೂ ಸೈ ಎನ್ನುತ್ತೀರಿ, ಆದರೆ ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಅಪಾಯಕಾರಿ ಆಗಲಿದೆ. ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವಿವಾದಗಳು ಈ ದಿನ ಸುಖಾಂತ್ಯ ಕಾಣಲಿವೆ. ಕ್ರೀಡೆ ಅಥವಾ ರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಸ್ಮರಣೀಯ ದಿನವಾಗಿರಲಿದೆ. ರಕ್ತಸಂಬಂಧಿಗಳಿಂದ ಅನಿರೀಕ್ಷಿತ ಸಹಾಯ ಸಿಗಲಿದೆ. ಕೋಪವನ್ನು ಹತೋಟಿಯಲ್ಲಿಟ್ಟರೆ ಮಾತ್ರ ಸಂಜೆಯ ವೇಳೆಗೆ ಶುಭ ಸಮಾಚಾರವನ್ನು ಸಂಭ್ರಮಿಸುವುದಕ್ಕೆ ಸಾಧ್ಯ ಆಗಲಿದೆ.

ಲೇಖನ- ಎನ್‌.ಕೆ.ಸ್ವಾತಿ

Published On - 1:08 am, Sat, 10 January 26

Follow Us
ಇಂದು ಈ ರಾಶಿಯವರಿಗೆ ಧನಾತ್ಮಕ ಶಕ್ತಿ
ಇಂದು ಈ ರಾಶಿಯವರಿಗೆ ಧನಾತ್ಮಕ ಶಕ್ತಿ
ಸಚಿವರ ಬರ್ತ್​​ಡೇ ಗಿಫ್ಟ್​: ಸೀರೆಗಾಗಿ ಮುಗಿಬಿದ್ದ ಮಹಿಳೆಯರು!
ಸಚಿವರ ಬರ್ತ್​​ಡೇ ಗಿಫ್ಟ್​: ಸೀರೆಗಾಗಿ ಮುಗಿಬಿದ್ದ ಮಹಿಳೆಯರು!
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್