ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಾವ್ಯಾ ಶೈವ ಅವರಿಗೆ ಗಿಲ್ಲಿ ನಟ ಹಲವು ಬಾರಿ ಕಿರಿಕಿರಿ ಮಾಡಿದ್ದುಂಟು. ಇಷ್ಟು ದಿನಗಳ ಕೋಪವನ್ನು ಕಾವ್ಯಾ ಅವರು ಈಗ ತೀರಿಸಿಕೊಂಡಿದ್ದಾರೆ. ಗಿಲ್ಲಿಗೆ ಅವರು ಶಿಕ್ಷೆ ನೀಡಿದ್ದಾರೆ. ಕಾವ್ಯಾ ಮಾತ್ರವಲ್ಲದೇ ಮ್ಯೂಟೆಂಟ್ ರಘು ಕೂಡ ಹೀಗೆಯೇ ಮಾಡಿದ್ದಾರೆ. ಭಾನುವಾರದ (ಜನವರಿ 11) ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಗಿಲ್ಲಿ ನಟ ಅವರು ಮೊದಲಿನಿಂದಲೂ ಆ್ಯಕ್ಟೀವ್ ಆಗಿದ್ದಾರೆ. ಕಾವ್ಯಾ ಶೈವ (Kavya Shaiva) ಜೊತೆ ಅವರಿಗೆ ಸ್ನೇಹ ಇದೆ. ಆದರೂ ಗಿಲ್ಲಿಯಿಂದ ಕಾವ್ಯಾಗೆ ಹಲವು ಬಾರಿ ಕಿರಿಕಿರಿ ಆಗಿದ್ದುಂಟು. ಇಷ್ಟು ದಿನಗಳ ಕೋಪವನ್ನು ಕಾವ್ಯಾ ಅವರು ಈಗ ತೀರಿಸಿಕೊಂಡಿದ್ದಾರೆ. ಗಿಲ್ಲಿಗೆ ಅವರು ಶಿಕ್ಷೆ ನೀಡಿದ್ದಾರೆ. ಕಾವ್ಯಾ ಮಾತ್ರವಲ್ಲದೇ ಮ್ಯೂಟೆಂಟ್ ರಘು ಕೂಡ ಹೀಗೆಯೇ ಮಾಡಿದ್ದಾರೆ. ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ ಅವರಿಗೂ ಗಿಲ್ಲಿಯೇ ಟಾರ್ಗೆಟ್ ಆಗಿದ್ದಾರೆ. ಅಂದಹಾಗೆ, ಇದೆಲ್ಲವೂ ನಡೆದಿರುವುದು ಭಾನುವಾರದ (ಜನವರಿ 11) ಸಂಚಿಕೆಯಲ್ಲಿ. ತುಂಬ ಫನ್ ಆಗಿರುವ ಈ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಬಾರಿ ಗಿಲ್ಲಿ ನಟ (Gilli Nata) ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಗೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

