AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಹುಂಡಿ ಕಾಣಿಕೆ ಎಣಿಸಲು ಜನವೋ ಜನ!

ದೇವನಹಳ್ಳಿ: ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಹುಂಡಿ ಕಾಣಿಕೆ ಎಣಿಸಲು ಜನವೋ ಜನ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 17, 2025 | 6:34 PM

Share

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಘಾಟಿ ಸುಬ್ರಹ್ಮಣ್ಯ ಶ್ರೀ ಕ್ಷೇತ್ರ ನಾಗದೋಷ ಸರ್ಪ ಸಂಸ್ಕಾರಕ್ಕೆ ಪ್ರಸಿದ್ಧಿ ಹೊಂದಿದೆ. ಪ್ರತಿದಿನ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ನರಸಿಂಹ ಮತ್ತು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ಘಾಟಿ ಸುಬ್ರಹ್ಮಣ್ಯ ಬೆಂಗಳೂರುನಿಂದ ಸುಮಾರು 51 ಕಿಮೀ ದೂರವಿದ್ದು ಇದೊಂದು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ.

ದೇವನಹಳ್ಳಿ, ಮೇ 17: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ತಿಂಗಳ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾದ ಜನರನ್ನು ನೋಡಿದರೆ ದಂಗಾಗುತ್ತೀರಿ. ಎಲ್ಲಿ ನೋಡಿದರೂ ಎತ್ತ ನೋಡಿದರೂ ಜನ! ನರಸಿಂಹ ಮತ್ತು ಸುಬ್ರಹ್ಮಣ್ಯನಿಗೆ ಭಕ್ತರು ಒಂದು ತಿಂಗಳ ಅವಧಿಯಲ್ಲಿ ನೀಡಿರುವ ಕಾಣಿಕೆ ಇದು. ಇಷ್ಟು ಜನ ಸೇರಿ ಎಣಿಸಿದಾಗ ಅದು ₹ 59, 28, 876 ನಷ್ಟಿತ್ತು. ಹಣವಲ್ಲದೆ ಭಕ್ತರು, 19.5 ಗ್ರಾಂ ಚಿನ್ನ ಮತ್ತು 1.400ಕೇಜಿ ಬೆಳ್ಳಿ ಒಡವೆಗಳನ್ನೂ ಕಾಣಿಕೆ ರೂಪದಲ್ಲಿ ನೀಡಿದ್ದಾರೆ. ಸಿದ್ದರಾಮಯ್ಯ ಸರಕಾರ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಅರಂಭಿಸಿದ ಬಳಿಕ ದೇವಸ್ಥಾನಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ:  ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ರಥೋತ್ಸವದಲ್ಲಿ ತಪ್ಪಿದ ಅನಾಹುತ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ