ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಅವರಣದಲ್ಲಿ ಲಸಿಕಾ ಶಿಬಿರದ ಪ್ರಯೋಜನ ಪಡೆದರು ಭಕ್ತಾದಿಗಳು
ಹೊಸ ವರ್ಷದಂದು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಇದರ ಬಗ್ಗೆ ಅರಿವಿದ್ದ ಆರೋಗ್ಯ ಇಲಾಖೆಯವರು ದೇವಸ್ಥಾನ ಟ್ರಸ್ಟ್ ನ ಪದಾಧಿಕಾರಿಗಳ ನೆರವಿನಿಂದ ಪ್ರವೇಶ ದ್ವಾರ, ನಿರ್ಗಮನ ಮತ್ತು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.
ಭಾರತದಲ್ಲಿ ಕೋವಿಡ್-19 ಮೂರನೇ ಅಲೆ ಆರಂಭವಾಗಿರುವ ಬಗ್ಗೆ ಸ್ಪಷ್ಟ ಕುರುಹುಗಳು ಲಭ್ಯವಾಗುತ್ತಿದ್ದರೂ ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಲಸಿಕೆ ಹಾಕಿಸಿಕೊಳ್ಳುವುದು ಶಸ್ತ್ರಚಿಕಿತ್ಸೆಗೆ ಒಳಪಟ್ಟಂತೆ ಅಂತ ಭಾವಿಸಿದಂತಿದೆ. ಈ ದಿಶೆಯಲ್ಲಿ ಆರೋಗ್ಯ ಕಾರ್ಯಕರ್ತರ ಪ್ರಯತ್ನಶೀಲತೆಯನ್ನು ಮೆಚ್ಚಬೇಕು. ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತಾಗಲು ಅವರು ಪಡುತ್ತಿರುವ ಪಡಿಪಾಟಲು ಅಷ್ಟಿಷ್ಟಲ್ಲ. ಕೆಲವು ಉಪಾಯಗಳನ್ನೂ ಅವರು ಪ್ರಯೋಗಿಸುತ್ತಿದ್ದು ಅದರ ನಿದರ್ಶನ ಈ ವಿಡಿಯೋನಲ್ಲಿ ಲಭ್ಯವಾಗುತ್ತದೆ.
ಹೊಸ ವರ್ಷದಂದು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಇದರ ಬಗ್ಗೆ ಅರಿವಿದ್ದ ಆರೋಗ್ಯ ಇಲಾಖೆಯವರು ದೇವಸ್ಥಾನ ಟ್ರಸ್ಟ್ ನ ಪದಾಧಿಕಾರಿಗಳ ನೆರವಿನಿಂದ ಪ್ರವೇಶ ದ್ವಾರ, ನಿರ್ಗಮನ ಮತ್ತು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಲಸಿಕೆಯ ಎರಡು ಡೋಸ್ ಪಡೆದಿರುವ ಪ್ರಮಾಣ ಪತ್ರ ತೋರಿಸುವಂತೆ ಕೇಳಲಾಗಿದೆ. ಯಾರು ಒಂದು ಡೋಸ್ ಇಲ್ಲವೇ ಒಂದನ್ನೂ ಪಡೆದಿಲ್ಲವೋ ಅವರಿಗೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಲು ಜನ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಆರೋಗ್ಯ ಕಾರ್ಯಕರ್ತರು ಹೇಳಿದ್ದಾರೆ.
ದೇವಸ್ಥಾನದ ಪದಾಧಿಕಾರಿ ಹೇಳುವ ಹಾಗೆ ಮಂಗಳವಾರ ಮತ್ತು ಭಾನುವಾರದಂದು ಭಕ್ತಾದಿಗಳ ಸಂಖ್ಯೆ ಬಹಳವಿರುತ್ತದಂತೆ. ಈ ಎರಡೂ ದಿನಗಳಲ್ಲೂ ಆರೋಗ್ಯ ಇಲಾಖೆಯವರು ದೇವಸ್ಥಾನದ ಆವರಣದಲ್ಲಿ ಶಿಬಿರ ಹೂಡಿದರೆ ಇನ್ನೂ ಅನೇಕ ಜನರಿಗೆ ಲಸಿಕೆ ಹಾಕಿಸಬಹುದು. ಟಿವಿ9 ವರದಿಗಾರ ನವೀನ್ ನಮಗೆ ಈ ವರದಿಯನ್ನು ಕಳಿಸಿದ್ದಾರೆ.