ಮಂಜುಳಾ ಮದುವೆ ಹಿಂದಿದೆ ದುರಂತ ಕಥೆ; ಸಾವಿನ ಕಾರಣ ವಿವರಿಸಿದ ಹಿರಿಯ ನಟ ರಾಜೇಶ್
ಖ್ಯಾತ ನಟಿ ಮಂಜುಳಾ ಅವರದ್ದು ದುರಂತ ಸಾವು. ಅದಕ್ಕೆ ಕಾರಣ ಆಗಿದ್ದೇನು ಎಂಬುದನ್ನು ಹಿರಿಯ ನಟ ರಾಜೇಶ್ ವಿವರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು ಮಂಜುಳಾ (Actress Manjula). ಆದರೆ ಅವರು ಖಾಸಗಿ ಜೀವನದಲ್ಲಿ ಅಷ್ಟೇನೂ ನೆಮ್ಮದಿ ಕಾಣಲಿಲ್ಲ. ಹಲವರನ್ನು ನಂಬಿ ಅವರು ಮೋಸ ಹೋಗಿದ್ದರು. ಆ ಘಟನೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಂದಿನ ಘಟನೆಗಳ ಬಗ್ಗೆ ಹಿರಿಯ ನಟ ರಾಜೇಶ್ (Senior Actor Rajesh) ಅವರು ವಿವರಿಸಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಂಜುಳಾ ಬದುಕಿನ ಬಗ್ಗೆ ರಾಜೇಶ್ ಮಾತನಾಡಿದ್ದಾರೆ. ಮದುವೆ ಮತ್ತು ಪ್ರೀತಿಯ ವಿಚಾರದಲ್ಲಿ ಅವರು ಮಾಡಿಕೊಂಡ ಆಯ್ಕೆಗಳು ಸರಿ ಇರಲಿಲ್ಲ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಮಂಜುಳ ಬದುಕು 31ನೇ ವಯಸ್ಸಿನಲ್ಲೇ ಅಂತ್ಯವಾಯ್ತು. ಅವರ ಸಾವು ಹೇಗೆ ಸಂಭವಿಸಿತು? ಅವರಿಗೆ ಮೋಸ ಮಾಡಿದವರು ಯಾರು? ಈ ಎಲ್ಲ ವಿಚಾರಗಳನ್ನು ರಾಜೇಶ್ ಅವರು ವಿವರಿಸಿದ್ದಾರೆ.
ಇದನ್ನೂ ಓದಿ:
‘ಶಾಂತಿ ಕ್ರಾಂತಿ’ ಶೂಟಿಂಗ್ನಲ್ಲಿ ಮಕ್ಕಳಿಗಾಗಿ ಹಾಲಿನ ಟ್ಯಾಂಕರ್ ತರಿಸಿದ್ದರು ರವಿಚಂದ್ರನ್: ದೊಡ್ಡಣ್ಣ
‘ಆ ಕಾಲದಲ್ಲೇ ಶಂಕರ್ ನಾಗ್ ಲ್ಯಾಪ್ಟಾಪ್ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್