Funny Robbery: ಕದಿಯಲು ಬಂದಿದ್ದ ಕಳ್ಳ ನಿದ್ರೆಗೆ ಜಾರಿದ, ಗೊರಕೆಯ ಸದ್ದಿಗೆ ಪೊಲೀಸರಿಗೆ ಮಾಹಿತಿ ನೀಡಿದ ಮನೆಯವರು

ಇತ್ತೀಚೆಗಷ್ಟೇ ಕಳ್ಳತನದ ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಕದಿಯಲು ಬಂದಿದ್ದ ಕಳ್ಳನೊಬ್ಬ ಮನೆಗೆ ನುಗ್ಗಿದ ಕೂಡಲೇ ನಿದ್ದೆಗೆ ಜಾರಿದ್ದಾನೆ. ಈತನ ಗೊರಕೆ ಕೇಳಿದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತೊಂದು ತಮಾಷೆಯ ಸಂಗತಿಯೆಂದರೆ ಪೊಲೀಸರು ಬರುವವರೆಗೂ ಕಳ್ಳ ಗಾಢ ನಿದ್ರೆಯಲ್ಲಿಯೇ ಇದ್ದ. ಈ ಘಟನೆ ನಡೆದಿದ್ದು ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ. 

Funny Robbery: ಕದಿಯಲು ಬಂದಿದ್ದ ಕಳ್ಳ ನಿದ್ರೆಗೆ ಜಾರಿದ, ಗೊರಕೆಯ ಸದ್ದಿಗೆ ಪೊಲೀಸರಿಗೆ ಮಾಹಿತಿ ನೀಡಿದ ಮನೆಯವರು
Funny Robbery StoryImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Nov 22, 2023 | 10:44 AM

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಕಳ್ಳನೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ್ದನಾದರೂ ಆ ವೇಳೆ ಮನೆಯವರು ಎಚ್ಚರಗೊಂಡಿದ್ದರು. ಅವರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು, ಆದ್ದರಿಂದ ಮನೆಯವರು ಮಲಗುವ ವರೆಗೆ ಕಾಯಬೇಕು ಎಂದು ಒಂದು ಕೋಣೆಯಲ್ಲಿ ಕೆಲ ಹೊತ್ತಿನ ವರೆಗೆ ಕಾಯುತ್ತಾ ಕೂತಿದ್ದಾನೆ. ಇದಲ್ಲದೇ ನಿದ್ದೆ ಬಾರದಿರಲು ಸಿಗರೇಟ್ ಸೇದುತ್ತಾ ಮನೆಯವರು ಮಲಗುವ ವರೆಗೆ ಕಾಯುತ್ತಾ ಕುಳಿತ್ತಿದ್ದಾನೆ. ಆದರೆ ತಮಾಷೆಯ ಸಂಗತಿಯೆಂದರೆ ಮನೆಯವರು ಮಲಗುವ ಮುನ್ನವೇ ಈತ ನಿದ್ದೆಗೆ ಜಾರಿದ್ದಾನೆ. ಇದಲ್ಲದೇ ಗೊರಕೆ ಹೊಡೆಯಲು ಪ್ರಾರಂಭಿಸಿದ್ದಾನೆ. ಈತನ ಗೊರಕೆಯ ಸದ್ದು ಕೇಳಿದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತೊಂದು ತಮಾಷೆಯ ಸಂಗತಿಯೆಂದರೆ ಪೊಲೀಸರು ಬರುವವರೆಗೂ ಕಳ್ಳ ಗಾಢ ನಿದ್ರೆಯಲ್ಲಿಯೇ ಇದ್ದ.

ವರದಿಗಳ ಪ್ರಕಾರ, ಕಳ್ಳ ಮಲಗಿದ್ದಾಗ ಜೋರಾಗಿ ಗೊರಕೆ ಹೊಡೆಯಲು ಪ್ರಾರಂಭಿಸಿದ್ದಾನೆ. ಇಷ್ಟೊಂದು ಜೋರಾಗಿ ಎಲ್ಲಿಂದ ಗೊರಕೆ ಸದ್ದು ಬರುತ್ತಿದೆ ಎಂದು ಮನೆಯವರು ಹುಡುಕಲು ಪ್ರಾರಂಭಿಸಿದ್ದಾರೆ. ಮೊದಮೊದಲು ಗೊರಕೆಯ ಸದ್ದು ನೆರೆಮನೆಯವರದ್ದಾಗಿರಬಹುದು ಎಂದು ಮನೆಯ ಯಜಮಾನಿ ಯೋಚಿಸಿ ತನ್ನ ಕೋಣೆಯಲ್ಲಿ ಹೋಗಿ ಮಲಗಿದ್ದಾಳೆ. ಸುಮಾರು ಅರ್ಧ ಘಂಟೆಯ ನಂತರ ಮಗುವಿಗೆ ಹಾಲು ಬಾಟಲಿಯನ್ನು ತರಲು ಬಂದಾಗ ಗೊರಕೆ ಸದ್ದು ಮನೆಯಲ್ಲೇ ಎಲ್ಲಿಂದಲೋ ಬರುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಾಸಿಗೆಯ ಅರ್ಧ ಭಾಗದಲ್ಲಿ ಮಲಗಿ, ಉಳಿದ ಅರ್ಧ ಭಾಗವನ್ನು ಬಾಡಿಗೆಗೆ ನೀಡುತ್ತಾಳೆ ಈ ಮಹಿಳೆ

ಕೆಲ ಹೊತ್ತಿನ ಬಳಿಕ ಮನೆಯ ಮತ್ತೊಂದು ಕೋಣೆಯ ಬಾಗಿಲು ತೆರೆದು ನೋಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಮನೆಯೊಳಗೆ ಮಲಗಿರುವುದು ತಿಳಿದುಬಂದಿದೆ. ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರ ವರದಿಯ ಪ್ರಕಾರ ಈತ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಕಳ್ಳತನ ಮಾಡಿ ಜೈಲಿಗೆ ಹೋಗಿದ್ದ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:38 am, Wed, 22 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ