AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖತರ್ನಾಕ್ ಖದೀಮರಿಂದ ಸರಣಿ ಕಳ್ಳತನ; ಬಾರ್ ಶಟರ್ ಮುರಿದು ಆರು ಲಕ್ಷ ಹಣ ದೋಚಿ ಪರಾರಿ

ಅವರು ಅಂತಿದ್ದ ಅಸಾಮಿಗಳಲ್ಲ, ಮಂಕಿ ಕ್ಯಾಂಪ್ ಧರಿಸಿ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಬಂದ್ರು, ಅಂದರೆ ಕ್ಷಣಾರ್ಧದಲ್ಲಿ ಕೆಲಸ‌ ಮುಗಿಸಿ ಹೋಗುತ್ತಾರೆ. ಅದೇ ರೀತಿ ಕಳೆದ ರಾತ್ರಿ ಎಂಟ್ರಿ ಕೊಟ್ಟಿದ್ದ ಗ್ಯಾಂಗ್, ಸರಣಿ ಕಳ್ಳತನ ನಡೆಸಿದ್ದಾರೆ. ಬಟ್ಟೆ ಅಂಗಡಿ, ಬಾರ್​ಗಳ ಶಟರ್ ಬೀಗ ಮುರಿದು ಲಕ್ಷಾಂತರ ರೂಪಾಯಿ ಹಣ ದೋಚಿದ್ದಲ್ಲದೆ, ತಮಗಿಷ್ಟವಾದ ಎಣ್ಣೆಯನ್ನು ಕೈನಲ್ಲಿ ಹಿಡಿದು ಎಸ್ಕೇಪ್ ಆಗಿದ್ದಾರೆ. 

ಖತರ್ನಾಕ್ ಖದೀಮರಿಂದ ಸರಣಿ ಕಳ್ಳತನ; ಬಾರ್ ಶಟರ್ ಮುರಿದು ಆರು ಲಕ್ಷ ಹಣ ದೋಚಿ ಪರಾರಿ
ಬಾರ್​ ಬಾಗಿಲು ಮುರಿದು ಕಳ್ಳತನ
ರಾಮು, ಆನೇಕಲ್​
| Edited By: |

Updated on:Nov 16, 2023 | 10:04 PM

Share

ಬೆಂಗಳೂರು, ನ.16: ನಗರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್(Hebbagodi Police) ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಮಂಕಿ ಕ್ಯಾಪ್ ಹಾಗೂ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಬಂದಿದ್ದ ಮೂವರು ಖದೀಮರ ಗ್ಯಾಂಗ್ ತಿರುಪಾಳ್ಯದ ಪ್ರಜ್ವಲ್ ಬಾರ್​ನ ಬೀಗ ಮುರಿದು ಇಬ್ಬರು ಹೊರಗೆ ನಿಂತು ವಾಚ್ ಮಾಡುತ್ತಿದ್ರೆ, ಓರ್ವ ಬಾರ್ ಒಳಗಡೆ ಹೋಗಿ ಕ್ಯಾಶ್ ಬಾಕ್ಸ್ ನಲ್ಲಿದ್ದ ಬರೋಬ್ಬರಿ ಆರುವರೇ ಲಕ್ಷ ನಗದನ್ನು ದೋಚಿದ್ದಾನೆ. ಹೇಗೋ ಲಕ್ಷ ಲಕ್ಷ ಹಣ ಸಿಕ್ಕಿತು, ಎಣ್ಣೆ ಪಾರ್ಟಿ ಮಾಡೋಣ ಎಂದು ಅದೇ ಬಾರ್​ನಲ್ಲಿನ ಫ್ರಿಡ್ಜ್ ಬಾಗಿಲು ತೆಗೆದು ಮದ್ಯದ ಬಾಟಲಿಗಳನ್ನು ಕೊಂಡೊಯ್ಯಿದಿದ್ದಾನೆ. ಕಳ್ಳರ ಕೈಚಳಕದ ದೃಶ್ಯ ಬಾರ್​ನ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಇನ್ನು ತಿರುಪಾಳ್ಯದ ಪ್ರಜ್ವಲ್ ಬಾರ್​ಗೆ ಕನ್ನ ಹಾಕುವುದಕ್ಕೂ ಮುನ್ನ, ಹೆಬ್ಬಗೋಡಿ ಸಮೀಪದ ಗೊಲ್ಲಹಳ್ಳಿಯಲ್ಲಿನ ಅಪೂರ್ವ ವೈನ್ಸ್ ಬಾರ್​ನ ಶಟರ್ ಬೀಗ ಮುರಿಯಲು ಯತ್ನಿಸಿದ್ದಾರೆ. ಆಗದೆ ಇದ್ದಾಗ ಪಕ್ಕದಲ್ಲಿಯೇ ಇದ್ದ ಬಟ್ಟೆ ಅಂಗಡಿಯೊಂದರ ಬೀಗ ಮುರಿದು ಒಳ‌ ನುಗ್ಗಿ ಅಲ್ಲಿದ್ದಂತಹ ಹಣವನ್ನ ದೋಚಿದ್ದಾರೆ. ಹೆಚ್ಚು ಹಣ ಸಿಗಲಿಲ್ಲ ಎಂದು ಕೊನೆಗೆ ಪ್ರಜ್ವಲ್ ಬಾರ್​ಗೆ ಬೀಗ ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ಬಾರ್​ನ ಸಿಬ್ಬಂದಿ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಬಾರ್​ಗೆ ಕನ್ನ ಹಾಕಿದ ಖದೀಮರ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ರಾತ್ರೊ ರಾತ್ರಿ ಶ್ರೀಮಂತರಾಗಬೇಕೆಂಬ ಆಸೆಯಿಂದ ಕಳ್ಳತನಕ್ಕೆ ಇಳಿದಿದ್ದ ಗ್ಯಾಂಗ್​ ಅರೆಸ್ಟ್​

ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಅನುಮಾನಾಸ್ಪದ ಸಾವು

ಬಾಗಲಕೋಟೆ : ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆದಿದೆ. ಹನುಮಂತ ನ್ಯಾಮಗೌಡ(27) ಮೃತ ಯುವಕ. ತಮ್ಮ‌ ಮನೆಯಲ್ಲೇ‌‌ ನೇಣು ಬಿಗಿದ ಸ್ಥಿತಿಯಲ್ಲಿ ‌ಶವ ಪತ್ತೆಯಾಗಿದೆ. ಮುಖದ‌ ಮೇಲೆ ಗಾಯವಿರುವ ಹಿನ್ನೆಲೆ ಅನುಮಾನ ಮೂಡಿಸಿದೆ. ಈ ಕುರಿತು ಸಾವಳಗಿ ಠಾಣೆ ಪೊಲೀಸರು ಸ್ಥಳಕ್ಕೆ ‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 pm, Thu, 16 November 23