ವಿದ್ಯುತ್ ಕಳ್ಳತನದ ಆರೋಪ; ಹೆಚ್ ಡಿ ಕುಮಾರಸ್ವಾಮಿ ಮನೆಯಲ್ಲಿ ಮಹಜರ್ ನಡೆಸಿದ ಬೆಸ್ಕಾಂ ಅಧಿಕಾರಿಗಳು!

ವಿದ್ಯುತ್ ದೀಪಗಳ ಡೆಕೋರೋಟರ್ ನಿಂದ ಆದ ಅಚಾತುರ್ಯವೋ ಅಥವಾ ಯಾರಿಗೆ ಗೊತ್ತಾಗುತ್ತೆ ಎಂಬ ಉಡಾಫೆಯೋ ಅಥವಾ ಉದ್ದೇಶಪೂರ್ವಕವೋ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಆದರೆ ವಿದ್ಯುತ್ ಕಳ್ಳತನದ ಆರೋಪದದಲ್ಲಿ ಬೆಸ್ಕಾಂ ಅಧಿಕಾರಿಗಳು ಕುಮಾರಸ್ವಾಮಿ ಮನೆಗೆ ಆಗಮಿಸಿ ಮಹಜರ್ ನಡೆಸಿದ್ದಂತೂ ಸತ್ಯ.

ವಿದ್ಯುತ್ ಕಳ್ಳತನದ ಆರೋಪ; ಹೆಚ್ ಡಿ ಕುಮಾರಸ್ವಾಮಿ ಮನೆಯಲ್ಲಿ ಮಹಜರ್ ನಡೆಸಿದ ಬೆಸ್ಕಾಂ ಅಧಿಕಾರಿಗಳು!
|

Updated on: Nov 14, 2023 | 4:41 PM

ಬೆಂಗಳೂರು: ಇದು ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾದೀತು ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅಂದುಕೊಂಡಿರಲಾರರು. ವಿದ್ಯುತ್ ದೀಪಗಳ ಡೆಕೋರೋಟರ್ ನಿಂದ (decorator) ಆದ ಅಚಾತುರ್ಯವೋ ಅಥವಾ ಯಾರಿಗೆ ಗೊತ್ತಾಗುತ್ತೆ ಎಂಬ ಉಡಾಫೆಯೋ ಅಥವಾ ಉದ್ದೇಶಪೂರ್ವಕವೋ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಆದರೆ ವಿದ್ಯುತ್ ಕಳ್ಳತನದ ಆರೋಪದದಲ್ಲಿ ಬೆಸ್ಕಾಂ ಅಧಿಕಾರಿಗಳು (BESCOM officials) ಕುಮಾರಸ್ವಾಮಿ ಮನೆಗೆ ಆಗಮಿಸಿ ಮಹಜರ್ ನಡೆಸಿದ್ದಂತೂ ಸತ್ಯ. ಅದನ್ನು ದೃಶ್ಯಗಳಲ್ಲಿ ನೋಡಬಹುದು. ಕುಮಾರಸ್ವಾಮಿ ಮನೆಯೊಳಗೆ ಪರಿಶೀಲನೆ ನಡೆಸಿ ಹೊರಬಂದ ಬಳಿಕ ಒಲ್ಲದ ಮನಸ್ಸಿನಿಂದ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತಾಡಿದ ಬೆಸ್ಕಾಂ ಕಾ​ರ್ಯ ನಿರ್ವಾಹಕ ಇಂಜಿನೀಯರ್ ಸುಧಾಕರ್ ರೆಡ್ಡಿ, ಇಲಾಖೆ ವತಿಯಿಂದ ಮಹಜರ್ ನಡೆಸಲಾಗಿದೆ, ಎಷ್ಟು ಯೂನಿಟ್ ವಿದ್ಯುತ್ ಕಳ್ಳತನವಾಗಿದೆ ಅನ್ನೋದನ್ನು ದಾಖಲಿಸಿಕೊಳ್ಳಲಾಗಿದೆ ಕಚೇರಿಯಲ್ಲಿ ಅದಕ್ಕೆ ದಂಡ ಎಷ್ಟಾಗಲಿದೆ ಅನ್ನೋದನ್ನು ಲೆಕ್ಕ ಹಾಕಲಾಗುತ್ತದೆ, ಮತ್ತು ದಂಡವನ್ನು ಪಾವತಿಸಲು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us