ಬೆಂಗಳೂರು ಪೊಲೀಸರನ್ನು ನಕ್ಕು ನಗಿಸಿದ ಒಂದು ಕಂಚಿನ ಚೊಂಬು ಕಳುವು ಪ್ರಕರಣ!

ಬೆಂಗಳೂರು ಪೊಲೀಸರನ್ನು ನಕ್ಕು ನಗಿಸಿದ ಒಂದು ಕಂಚಿನ ಚೊಂಬು ಕಳುವು ಪ್ರಕರಣ!
|

Updated on: Nov 14, 2023 | 6:41 PM

ಪೊಲೀಸ್ ಮತ್ತು ಕಂಟ್ರೋಲ್ ರೂಮಿನ ಸಿಬ್ಬಂದಿ ನಡುವೆ ನಡೆದ ಸಂಭಾಷಣೆ ಕೇಳಿದರೆ ಕಳುವಾಗಿದ್ದೇನು, ಕಳ್ಳ ಯಾರು, ಕದ್ದಿದ್ದು ಯಾಕೆ ಮತ್ತು ಹೇಗೆ, ಕದ್ದವನು ಪೊಲೀಸರಿಗೆ ಸಿಕ್ಕನೇ? ಕಳ್ಳ ಒಬ್ನೇನಾ ಅಥವಾ ಅದು ಕಳ್ಳರ ಗುಂಪಾ? ಎಲ್ಲ ಸಂಗತಿಗಳು ಗೊತ್ತಾಗುತ್ತವೆ. ಆಡಿಯೋ ಕ್ಲಿಪ್ಪಿಂಗ್ ಕೇಳುತ್ತಿದ್ದರೆ ನಿಮಗೆ ನಗದಿರಲು ಸಾಧ್ಯವಿಲ್ಲ.

ಬೆಂಗಳೂರು: ಕಳ್ಳತನವಾಗಿದೆ ಅಂತ ಕಳ್ಳತನಕ್ಕೊಳಗಾದ ಮನೆಯವರು ಪೊಲೀಸ್ ಕಂಟ್ರೋಲ್ ರೂಂಗೆ (police control room)ಪೋನ್ ಮಾಡಿದ ಕೂಡಲೇ ನಗರದ ಹೊಯ್ಸಳ ಪೊಲೀಸ್ (Hoysala police) ಸ್ಥಳಕ್ಕೆ ಧಾವಿಸುತ್ತದೆ. ಸ್ಥಳಕ್ಕೆ ಮುಟ್ಟಿದ ಬಳಿಕ ಹೊಯ್ಸಳ ಪೊಲೀಸರು ಕಂಟ್ರೋಲ್ ರೂಮಿಗೆ ಫೋನ್ ಮಾಡಿ ಅಪ್ಡೇಟ್ ನೀಡುತ್ತಾರೆ. ಪೊಲೀಸ್ ಮತ್ತು ಕಂಟ್ರೋಲ್ ರೂಮಿನ ಸಿಬ್ಬಂದಿ ನಡುವೆ ನಡೆದ ಸಂಭಾಷಣೆ ಕೇಳಿದರೆ ಕಳುವಾಗಿದ್ದೇನು, ಕಳ್ಳ ಯಾರು, ಕದ್ದಿದ್ದು ಯಾಕೆ ಮತ್ತು ಹೇಗೆ, ಕದ್ದವನು ಪೊಲೀಸರಿಗೆ ಸಿಕ್ಕನೇ? ಕಳ್ಳ ಒಬ್ನೇನಾ ಅಥವಾ ಅದು ಕಳ್ಳರ ಗುಂಪಾ? ಎಲ್ಲ ಸಂಗತಿಗಳು ಗೊತ್ತಾಗುತ್ತವೆ. ಆಡಿಯೋ ಕ್ಲಿಪ್ಪಿಂಗ್ ಕೇಳುತ್ತಿದ್ದರೆ ನಿಮಗೆ ನಗದಿರಲು ಸಾಧ್ಯವಿಲ್ಲ ಮಾರಾಯ್ರೇ. ಯಾಕೆ ಗೊತ್ತಾ? ಕಳುವಾಗಿದ್ದು ಒಂದು ಕಂಚಿನ ಚೊಂಬು (bronze goglet)!! ಚೊಂಬಿನ ಮಾಲೀಕ ಮತ್ತು ಅವನ ಪಕ್ಕದ ಮನೆಯವ ಸ್ನೇಹಿತರು. ಪಕ್ಕದ ಮನೆಯವನ ಮಗ ತನ್ನ ಪಕ್ಕದ ಮನೆ ಬಾಗಿಲ ತೆರೆದಿರುವುದನ್ನು ನೋಡಿ ಒಳ ಹೋಗಿದ್ದಾನೆ, ಅವನಿಗೆ ಕಂಚಿನ ಚೊಂಬು ಕಂಡಿದೆ. ಆ ಹುಡುಗನ ವಯಸ್ಸೆಷ್ಟು ಅಂತ ಸಂಭಾಷಣೆಯಲ್ಲಿ ಉಲ್ಲೇಖವಾಗಲ್ಲ. ಅವನು ಕೇವಲ ಕುತೂಹಲದಿಂದ ಅದನ್ನೆತ್ತಿಕೊಂಡು ತನ್ನ ಮನೆಗೆ ಬರುತ್ತಾನೆ. ಆಮೇಲೆ, ಪ್ರಾಯಶಃ ಅವನಪ್ಪ ಅದನ್ನು ಒಯ್ದು ಸ್ನೇಹಿತನಿಗೆ ವಾಪಸ್ಸು ಕೊಡುತ್ತಾನೆ. ಹೊಯ್ಸಳ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಇದೆಲ್ಲ ನಡೆದು ಹೋಗಿರುತ್ತದೆ! ಇದು ಕಳ್ಳತನದ ಪ್ರಕರಣ!! ಪೊಲೀಸರದ್ದು ಥ್ಯಾಂಕ್ ಲೆಸ್ ಜಾಬ್ ಅಂತ ಹೇಳೋದು ಇದೇ ಕಾರಣಕ್ಕಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us