ಬೆಂಗಳೂರು: ರಾತ್ರೊ ರಾತ್ರಿ ಶ್ರೀಮಂತರಾಗಬೇಕೆಂಬ ಆಸೆಯಿಂದ ಕಳ್ಳತನಕ್ಕೆ ಇಳಿದಿದ್ದ ಗ್ಯಾಂಗ್​ ಅರೆಸ್ಟ್​

ದಿಢೀರ್ ಶ್ರೀಮಂತರಾಗಬೇಕು ಎಂಬ ಆಸೆಯಿಂದ ಕಳ್ಳತನಕ್ಕೆ ಇಳಿದಿದ್ದ ಆರೋಪಿಗಳನ್ನು ಬನಶಂಕರಿ ನಗರ ‌ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 23 ಲಕ್ಷ ಮೌಲ್ಯದ 30 ಕೆಜಿ ಬೆಳ್ಳಿ ಆಭರಣ ವಶ ಪಡಿಸಿಕೊಳ್ಳಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಎರಡು ಆಟೋರಿಕ್ಷಾಗಳನ್ನು ಸೀಜ್ ಮಾಡಿದ್ದು, ತನಿಖೆ ಮುಂದುವರೆದಿದೆ. 

ಬೆಂಗಳೂರು: ರಾತ್ರೊ ರಾತ್ರಿ ಶ್ರೀಮಂತರಾಗಬೇಕೆಂಬ ಆಸೆಯಿಂದ ಕಳ್ಳತನಕ್ಕೆ ಇಳಿದಿದ್ದ ಗ್ಯಾಂಗ್​ ಅರೆಸ್ಟ್​
ಕಳ್ಳತನವಾದ ಚಿನ್ನದ ಅಂಗಡಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Nov 14, 2023 | 9:21 AM

ಬೆಂಗಳೂರು ನ.14: ದಿಢೀರ್ ಶ್ರೀಮಂತರಾಗಬೇಕು ಎಂಬ ಆಸೆಯಿಂದ ಕಳ್ಳತನಕ್ಕೆ (Robbery) ಇಳಿದಿದ್ದ ಆರೋಪಿಗಳನ್ನು ಬನಶಂಕರಿ ನಗರ ‌ಪೊಲೀಸರು (Police) ಬಂಧಿಸಿದ್ದಾರೆ. ಯಾರಬ್ ನಗರದ ಸುಹೇಲ್, ಯೂಸೂಫ್, ಮಹಮ್ಮದ್ ರಿಜ್ವಾನ್ ಹಾಗೂ ಸೈಯ್ಯದ್ ಅಜ್ಮತ್ ಬಂಧಿತ ಆರೋಪಿಗಳು. ವೃತ್ತಿಯಲ್ಲಿ‌ ಸುಹೇಲ್ ಕಾರ್ಪೆಂಟರ್​, ಯೂಸೂಫ್ ವೆಲ್ಡಿಂಗ್, ಮಹಮ್ಮದ್ ರಿಜ್ವಾನ್ ಪೇಂಟರ್, ಸೈಯ್ಯದ್ ಅಜ್ಮತ್ ಕಾರ್ ಸೀಟ್ ಕವರ್ ಒಲಿಯುವ ಕೆಲಸ ಮಾಡುತ್ತಿದ್ದರು. ಆದರೆ ಕೆಲಸಕ್ಕೆ ಸರಿಯಾಗಿ ಆದಾಯ ಬರುತ್ತಿರಲಿಲ್ಲ. ಇದರಿಂದ ಆರೋಪಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಕಳ್ಳತನ ಮಾಡಿ ದುಡ್ಡು ಮಾಡುವ ಪ್ಯ್ಲಾನ್​ ಮಾಡಿದ್ದರು.

ಅದರಂತೆ ಕದಿರೇನಹಳ್ಳಿ ಪಾರ್ಕ್ ರಸ್ತೆಯಲ್ಲಿರುವ ಸೂಜರ್ ಜ್ಯುವೆಲ್ಲರ್ಸ್​​​ಗೆ ಕನ್ನ ಹಾಕಲು ನಿರ್ಧರಿಸಿದರು. ಕಳ್ಳತನ ಮಾಡಲು ಗ್ಯಾಂಗ್ ಎರಡು ಆಟೋರಿಕ್ಷಾ, ಗ್ಯಾಸ್​ ಕಟರ್​, ಕಬ್ಬಿಣ ತುಂಡರಿಸುವ ವಸ್ತುಗಳನ್ನು ಸಂಗ್ರಹಿಸಿದರು. ಪ್ಯ್ಲಾನ್​​ನಂತೆ ಸೂಜರ್ ಜ್ಯುವೆಲ್ಲರ್ಸ್​​ನಲ್ಲಿ ಕಳ್ಳತ ಮಾಡಲು ಹೋದರು. ಗ್ಯಾಸ್ ಕಟರ್ ಸಹಾಯದಿಂದ ಅಂಗಡಿ ರೋಲಿಂಗ್ ಶೆಟ್ಟರ್ ಕಟ್​ ಮಾಡಿ ಒಳಗೆ ನುಗ್ಗಿದರು.

ಇದನ್ನೂ ಓದಿ: ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಸೀರೆ ಕಳ್ಳತನ; ಎಂಟು ಮಂದಿ ಅರೆಸ್ಟ್

ಅಂಗಡಿಯಲ್ಲಿ ಕೆಜಿ ಕೆಜಿ ಬಂಗಾರ ದೋಚಲು ಹೋದವರಿಗೆ ನಿರಾಸೆಯಾಗಿತ್ತು. ಬಂಗಾರದ ಬದಲು ಕಣ್ಣಿಗೆ ಬಿದ್ದಿದ್ದು, ಕೆಜಿ ಕೆಜಿ ಬೆಳ್ಳಿ ಆಭರಣ. ಬರೀಗೈಯಲ್ಲಿ ಹೊಗಬಾರದೆಂದು 30 ಕೆಜಿ ಬೆಳ್ಳಿ ಕದ್ದಿದ್ದರು. ಅಂಗಡಿಯಲ್ಲಿದ್ದ ಬೆಳ್ಳಿ ಕಳ್ಳತನವಾಗಿದೆ ಎಂದು ತಿಳಿಯುತ್ತಿದ್ದಂತೆ ಮಾಲಿಕ ಪೊಲೀಸರಿಗೆ ದೂರು ನೀಡಿದ್ದನು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 23 ಲಕ್ಷ ಮೌಲ್ಯದ 30 ಕೆಜಿ ಬೆಳ್ಳಿ ಆಭರಣ ವಶ ಪಡಿಸಿಕೊಳ್ಳಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಎರಡು ಆಟೋರಿಕ್ಷಾಗಳನ್ನು ಸೀಜ್ ಮಾಡಿದ್ದು, ತನಿಖೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ