AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಪಾಯಾ ತೆಗೆಯುವಾಗ ಸಿಕ್ತು ಎಂದು ನಕಲಿ ಚಿನ್ನ ನೀಡಿ ವಂಚನೆ; ಹಣ ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ

ನಮ್ಮ ಮನೆಯ ಪಾಯಾ ತೆಗೆಯುವಾಗ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಎಂದು ಕುಮಾರ ಮತ್ತು ಮುದಕಪ್ಪ ಗುತ್ತಿಗೆದಾರ ಗೋವರ್ಧನ್​ರನ್ನು ನಂಬಿಸಿದ್ದಾರೆ. ಇವರ ಮಾತು ನಂಬಿದ ಗೋವರ್ಧನ್, 2.5 ಕೆಜಿ ‌ನಕಲಿ ಚಿನ್ನದ ಬಿಲ್ಲೆಗಳನ್ನ ಪಡೆದು 60 ಲಕ್ಷ ನೀಡಿದ್ದಾರೆ. ನಂತರ ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ‌ ಚಿನ್ನ ಎಂಬ ವಿಚಾರ ಬಯಲಾಗಿದೆ.

ಮನೆಯ ಪಾಯಾ ತೆಗೆಯುವಾಗ ಸಿಕ್ತು ಎಂದು ನಕಲಿ ಚಿನ್ನ ನೀಡಿ ವಂಚನೆ; ಹಣ ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ
ಪ್ರಾತಿನಿಧಿಕ ಚಿತ್ರ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ಆಯೇಷಾ ಬಾನು|

Updated on:Oct 01, 2023 | 1:22 PM

Share

ದಾವಣಗೆರೆ, ಅ.01: ನಕಲಿ ಚಿನ್ನ ನೀಡಿ ಗುತ್ತಿಗೆದಾರನಿಗೆ 60 ಲಕ್ಷ ರೂಪಾಯಿ ವಂಚನೆ (Cheating) ಮಾಡಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ನಡೆದಿದೆ. ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ಧನ ಎಂಬುವವರಿಗೆ ವಂಚನೆ ಮಾಡಲಾಗಿದೆ. ಕಳೆದ ಹಲವಾರು ದಿನಗಳಿಂದ ಚನ್ನಗಿರಿಯಲ್ಲಿ ವಿವಿಧ‌ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರ ಗೋವರ್ಧನ್ ಅವರ ಪರಿಚಯ ಮಾಡಿಕೊಂಡ ಕುಮಾರ ಹಾಗೂ ಮುದಕಪ್ಪ ಎಂಬ ಇಬ್ಬರು ವ್ಯಕ್ತಿಗಳು ನಕಲಿ ಚಿನ್ನ ನೀಡಿ ವಂಚಿಸಿದ್ದಾರೆ.

ನಮ್ಮ ಮನೆಯ ಪಾಯಾ ತೆಗೆಯುವಾಗ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಎಂದು ಕುಮಾರ ಮತ್ತು ಮುದಕಪ್ಪ ಗುತ್ತಿಗೆದಾರ ಗೋವರ್ಧನ್​ರನ್ನು ನಂಬಿಸಿದ್ದಾರೆ. ಇವರ ಮಾತು ನಂಬಿದ ಗೋವರ್ಧನ್, 2.5 ಕೆಜಿ ‌ನಕಲಿ ಚಿನ್ನದ ಬಿಲ್ಲೆಗಳನ್ನ ಪಡೆದು 60 ಲಕ್ಷ ನೀಡಿದ್ದಾರೆ. ನಂತರ ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ‌ ಚಿನ್ನ ಎಂಬ ವಿಚಾರ ಬಯಲಾಗಿದೆ. ಗುತ್ತಿಗೆದಾರ ಗೋವರ್ಧನ ಅವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರಳಿಂದ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮರಳಿ ಸಮಾಜ ಸೇವೆಗೆ

ಚಿನ್ನದಂಗಡಿಗಳಿಗೆ ಕನ್ನಾ ಹಾಕುತ್ತಿದ್ದ ಕಳ್ಳ ಅರೆಸ್ಟ್

ಸೆಪ್ಟೆಂಬರ್ 09 ರಂದು ರಾತ್ರಿ ಹತ್ತು ಗಂಟೆಗೆ ದಾವಣಗೆರೆ ನಗರವ ವಿಜಯಲಕ್ಷ್ಮಿ ರಸ್ತೆಯ ಪವನ್ ಜ್ಯೂಯಲರ್ಸ್ ಬೀಗ ಮುರಿದು ಕಳ್ಳತನ ಮಾಡಿದ್ದ ಕಳ್ಳನನ್ನು ಬಸವನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿನ್ನದಂಗಡಿಗಳಿಗೆ ಕನ್ನಾ ಹಾಕುತ್ತಿದ್ದ ಜೀಬನ್ ಸಿಂಗ್ (55) ಬಂಧಿತ ಆರೋಪಿ. ಬಂಧಿತನಿಂದ 18 ಲಕ್ಷ ರೂಪಾಯಿ ಮೌಲ್ಯದ 48 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿದ ‌ಪೊಲೀಸರಿಗೆ ಕಲಬುರ್ಗಿ ಜಿಲ್ಲೆಯ ಬಬಲಾದ ಗ್ರಾಮದಲ್ಲಿ ಆರೋಪಿಯ ಸುಳಿವು ಪತ್ತೆಯಾಗಿತ್ತು. ಕಳ್ಳತನ ಮಾಡಿದ್ದ ಬೆಳ್ಳಿಯನ್ನ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ.

ಗಮನ ಬೇರೆಳೆ ಸೆಳೆದು ಕಳ್ಳತನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮೂವರು ದುಷ್ಕರ್ಮಿಗಳು ಅಂಗಡಿ ಮಾಲೀಕನಿಗೆ ಮಂಕುಬೂದಿ ಎರಚಿ ಗಮನ ಬೇರೆಡೆಗೆ ಸೆಳೆದು 20 ಸಾವಿರ ನಗದು ಎಗರಿಸಿದ ಘಟನೆ ನಡೆದಿದೆ. ಓರ್ವ ವ್ಯಕ್ತಿ, ಇಬ್ಬರು ಮಹಿಳೆರು ಹಣ ಎಗರಿಸಿದ್ದಾರೆ.

ಅಂಗಡಿ ಮಾಲೀಕ ಹೇಮಂತ್ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಮಗನ ಸ್ಕೂಲ್ ಫೀಜ್ ಕಟ್ಟಲೆಂದು ಇಡಲಾಗಿದ್ದ ಹಣವನ್ನು ದುಷ್ಕರ್ಮಿಗಳು ಕದ್ದಿದ್ದಾರೆ. ಕಿಲಾಡಿ ಕಳ್ಳರ ಕೈ ಚಳಕ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪರಿಚಿತ ಮೂವರನ್ನು ಬಂಧಿಸುವಂತೆ ಅಂಗಡಿ ಮಾಲೀಕ ಕಣ್ಣೀರು ಹಾಕಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:10 pm, Sun, 1 October 23

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ